Advertisement

ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ

01:24 AM May 26, 2022 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಬುಧವಾರ ಬೆಳ್ತಂಗಡಿ ತಾಲೂಕಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಸ್ಥಳಗಳ ಪರಿಶೀಲನೆ ಸಹಿತ ಚಾರ್ಮಾಡಿ ಘಾಟಿ ರಸ್ತೆ, ನೆರೆ ಬಾಧಿತವಾಗುವ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.

Advertisement

ಪ್ರವಾಹ ಹಾಗೂ ಭೂ ಕುಸಿತದಿಂದ ನಲುಗಿದ್ದ ಚಾರ್ಮಾಡಿ ಘಾಟಿಯ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ದ.ಕ. ವ್ಯಾಪ್ತಿಗೆ ಒಳಪಟ್ಟ 11 ತಿರುವುಗಳ ರಸ್ತೆಯ ಸ್ಥಿತಿಗತಿಯನ್ನು ವೀಕ್ಷಿಸಿ, ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಬೇಕಾದ ಅಗತ್ಯ ವಸ್ಥೆಗಳನ್ನು ಕಲ್ಪಿಸಲು ಹೆದ್ದಾರಿ ಇಲಾಖೆಯೊಂದಿಗೆ ಚರ್ಚಿಸಿದರು.

ಈ ಹಿಂದೆ ಭೂಕುಸಿತಗೊಂಡ ಮಿತ್ತಬಾಗಿಲು ಹಾಗೂ ಗಣೇಶನಗರದಲ್ಲಿ ಆಶ್ರಯ ಪಡೆದ ನಿವಾಸಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಗುಡ್ಡಪ್ರದೇಶದಲ್ಲಿ ನಿವೇಶನ ನೀಡಿರುವುದರಿಂದ ಮತ್ತೆ ಆತಂಕ ಎದುರಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಮಳೆಗಾಲದಲ್ಲಿ ಸಮಸ್ಯೆ ಎದುರಾದಲ್ಲಿ ತತ್‌ಕ್ಷಣ ಕಾಳಜಿ ಕೇಂದ್ರದ ಆಶ್ರಯ ಪಡೆಯು ವಂತೆ ಸಲಹೆ ನೀಡಿದರು.

ಹುಣ್ಸೆಕಟ್ಟೆಯಲ್ಲಿ ನಿವೇಶನಕ್ಕೆ ಮೀಸಲಿಟ್ಟ 3.94 ಎಕ್ರೆಯಲ್ಲಿ ಸ್ಥಳೀಯ ರೋರ್ವರ ಕುಮ್ಕಿ ಜಮೀನು ತಕರಾರು ಇದ್ದು ಅದನ್ನು ನಗರ ಪಂಚಾಯತ್‌ಗೆ ಪಡೆಯುವ ಬಗ್ಗೆ, ಬಾರ್ಯ ಗ್ರಾಮದಲ್ಲಿ ಘಟನ ತ್ಯಾಜ್ಯ ಘಟಕಕ್ಕೆ
ಮೀಸಲಿಟ್ಟ ಸ್ಥಳದಲ್ಲಿ ನಿವೇಶನಗಳಿರುವುದರಿಂದ ಬೇರೆ ಸ್ಥಳ ಕಾದಿರಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಇಟ್ಟ ಸ್ಥಳ ಹಾಗೂ ಬೆಳ್ತಂಗಡಿಯಲ್ಲಿ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಸಮಾಜ ಮಂದಿರದ ವಿವಾದಿತ ಜಾಗದ ಪರಿಶೀಲನೆ, ಹೊಸಂಗಡಿಯಲ್ಲಿ ಗೇರು ಲೀಸ್‌ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳ ಪರೀಶೀಲನೆ ನಡೆಸಿದರು. ಎಸಿ ಗಿರೀಶ್‌ ನಂದನ್‌, ತಹ ಶೀಲ್ದಾರ್‌ ಮಹೇಶ ಜೆ., ಕಂದಾಯ ನಿರೀಕ್ಷಕರಾದ ಪ್ರತೀಶ್‌, ಪವಾಡಪ್ಪ ದೊಡ್ಡಮನಿ, ನಗರ ಪಂಚಾಯತ್‌ ಉಪಾಧ್ಯಕ್ಷ ಜಯಾನಂದ ಗೌಡ, ಮುಖ್ಯಾಧಿಕಾರಿ ಸುಧಾಕರ, ಎಂಜಿನಿಯರ್‌ಮಹಾವೀರ ಆರಿಗ ಮೊದಲಾದವರಿದ್ದರು.

ಅಪಘಾತ - ನೆರವು
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭ ಕಾಶಿಬೆಟ್ಟು ಸಮೀಪ ಕಾರೊಂದು ಗದ್ದೆಗೆ ಉರುಳಿದ ಹಾಗೂ ಉಜಿರೆ ಸಮೀಪ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಅವಘಡ ಸಂಭವಿಸಿದ್ದು, ಜಿಲ್ಲಾಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next