Advertisement

ಕೋವಿಡ್‌ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

08:35 AM Jul 25, 2020 | Suhan S |

ಬೀಳಗಿ: ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ಕಟ್ಟಡದಲ್ಲಿ ನಿರ್ಮಿಸಲಾಗಿರುವ 50 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ಗೆ ಶುಕ್ರವಾರ ಜಿಲ್ಲಾಧಿಕಾರಿ ಕ್ಯಾ| ಡಾ|ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಸ್ಥಳೀಯ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ ಸದ್ಯ ಏಳು ಜನ ಕೋವಿಡ್‌ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರ್‌ ಸೆಂಟರ್‌ಗೆ ದಾಖಲಾಗಿರುವ ಸೋಂಕಿತರನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಉತ್ತಮ ಚಿಕಿತ್ಸೆ, ಆರೈಕೆ, ಊಟೋಪಹಾರದ ವ್ಯವಸ್ಥೆ ಹಾಗೂ ಶುದ್ಧ ನೀರು, ಬೆಳಕಿನ ವ್ಯವಸ್ಥೆ ಶ್ಲಾಘನೀಯ ಜತೆಗೆ ಕೋವಿಡ್‌ ಕೇರ್‌ ಸೆಂಟರ್‌ ಮಾಡಿರುವ ಇಲ್ಲಿನ ಪ್ರಾಕೃತಿಕ ಪರಿಸರವೂ ಚೆನ್ನಾಗಿದೆ. ಕೋವಿಡ್‌ ಸೋಂಕಿತರಿಗೆ ಉತ್ತಮ ಆರೈಕೆ ಜತೆಗೆ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅವಶ್ಯವಾಗಿದೆ.

ಅದೆಲ್ಲವನ್ನು ಇಲ್ಲಿನ ಅಧಿಕಾರಿಗಳು ವ್ಯವಸ್ಥಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿರುವ ರೋಗಿಗಳ ಹತ್ತಿರದಲ್ಲಿಯೇ ನಿಂತು ಸೋಂಕಿತರ ಯೋಗಕ್ಷೇಮ ವಿಚಾರಿಸಿದರು. ಜಿಲ್ಲಾಧಿಕಾರಿಗಳ ಈ ಧೈರ್ಯದ ನಡೆಯನ್ನು ಸ್ಥಳೀಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ತಾಲೂಕಿನಾದ್ಯಂತ ಈತನಕ 49 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, 12 ಜನ ಗುಣಮುಖರಾಗಿದ್ದಾರೆ. ಬೀಳಗಿ ನಗರದಲ್ಲಿ ಒಟ್ಟು 8 ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ ತಿಳಿಸಿದರು.

ತಹಶೀಲ್ದಾರ್‌ ಭೀಮಪ್ಪ ಅಜೂರ, ತಾಪಂ ಇಒ ಎಂ.ಕೆ.ತೊದಲಬಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ, ಎಚ್‌.ಎಂ.ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next