ಪಣಂಬೂರು: ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಸಭೆಯು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಗೆ ಬಿಜೆಪಿ ರಾಷ್ಟ್ರೀಯ ಮೀನು ಗಾರಿಕಾ ಅಭಿವೃದ್ಧಿ ಮಂಡಳಿ ಸದಸ್ಯ ಉಮೇಶ್ ಕೋಚಪ್ಪನ್ ಭೇಟಿ ನೀಡಿ ದರು. ಸಭೆಯಲ್ಲಿ ಮೀನುಗಾರರ ಜತೆ ಮೀನುಗಾರರ ಸಮಸ್ಯೆಗಳು ಅದರ ಪರಿಹಾರದ ಬಗ್ಗೆ ಸಂವಾದ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು.
ಸಾಂಪ್ರದಾಯಿಕ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನ ವರಿಕೆ ಮಾಡಲಾಯಿತು.
ಸಮಸ್ಯೆಗಳನ್ನು ಕೇಂದ್ರದ ನಾಯಕರ ಗಮನಕ್ಕೆ ತಂದು ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ರಾ. ಸ್ವ. ಸೇ. ಸಂಘದ ಅಶೋಕ್ ಬಿ.ಡಿ., ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಸಂಚಾಲಕ ಶೋಭೇಂದ್ರ ಸಸಿಹಿತ್ಲು, ಸಹಸಂಚಾಲಕ ಪ್ರೇಮನಾಥ ಉಳ್ಳಾಲ್ ಉಪಸ್ಥಿತರಿದ್ದರು.
ಸಹಸಂಚಾಲಕ ಯೋಗೀಶ್ ಕಾಂಚನ್ ಸ್ವಾಗತಿಸಿ ವಂದಿಸಿದರು.