ಪಟ್ಟಣದ ಅಮರೇಶ್ವರ ಕಾಲೇಜು ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿಮಿತ್ತ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತಾಡಿದರು.
Advertisement
ಬೀದರ ಜಿಲ್ಲೆಯಲ್ಲಿ ಔರಾದ ತಾಲೂಕಿನಲ್ಲಿ ಅತಿ ಹೆಚ್ಚು ಬರದ ಸಮಸ್ಯೆ ಕಾಡುತ್ತಿದೆ. ಪ್ರತಿಯೊಂದು ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಾರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಲು ಮುಂದಾಗಬೇಕು.ಜಿಲ್ಲಾಡಳಿತ ನೀರು ಹಾಗೂ ಜಾನುವಾರುಗಳಿಗೆ ಮೇವು ವಿತರಣೆ ಮಾಡಲು ಸಿದ್ಧವಾಗಿದೆ ಎಂದು ಹೇಳಿದರು.ಜಿಪಂ ಸಿಇಒ ಮಹಾಂತೇಶ ಬಿಳಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲ ಎನ್ನುವ ಭಾವನೆ ಮೂಡದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡಲು
ಮುಂದಾಗಬೇಕು. ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಬೇಕು. ಅಲ್ಲದೆ ರೈತರ ಹೋಲ ಗದ್ದೆಗಳಲ್ಲಿಯೂ ಸ್ವ ಇಚ್ಛೆಯಿಂದ ಕೆಲಸ ಮಾಡಲು ಆಸಕ್ತಿಯಿಂದ ರೈತರು ಮುಂದೆ ಬಂದ ತಕಣವೇ ಗ್ರಾಪಂ ಅಧಿಕಾರಿಗಳು ಕೆಲಸ ನೀಡಬೇಕು ಎಂದು ಹೇಳಿದರು.
ಅಧಿಕಾರಿಗಳು ಇಂಥ ಸಮಸ್ಯೆ ಬಾರದಂತೆ ಕೆಲಸ ಮಾಡಬೇಕು. ಗ್ರಾಪಂನಿಂದ ನೀರು ಸರಬರಾಜು ಮಾಡುವ ಕೊಳವೆ ಬಾವಿ ತೆರೆದ ಬಾವಿಗಳು ಬತ್ತಿ ಹೋಗಿದ್ದರೆ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ನೀರು ಇರುವ ಕೊಳವೆ ಬಾವಿ ವಶಕ್ಕೆ ಪಡೆದುಕೊಂಡು ಊರಿನ ಜನರಿಗೆ ನೀರು ಒದಗಿಸಿ ಎಂದು ಆದೇಶ ನೀಡಿದರು. ಪಶುಪಾಲನಾ ಇಲಾಖೆ ಅಧಿಕಾರಿ
ರವಿಕುಮಾರ ಭೂರೆ ಮಾತನಾಡಿ, ಮಾರ್ಚ್ 15ರ ನಂತರ ಮೇವಿನ ಸಮಸ್ಯೆ ಉಲ್ಬಣವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಮೇವಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಂದು ಹೋಬಳಿ ಕೇಂದ್ರದಲ್ಲಿ ಎರಡು ಮೇವು ವಿತರಣಾ ಕೇಂದ್ರ ತೆರೆಯಲಾಗುತ್ತದೆ. ರೈತರ ಹೊಲದಲ್ಲಿ ನೀರು ಮೇವಿನ ಬೆಳೆ ಬೆಳೆಸುವಂತೆ ಮನವರಿಕೆ
ಮಾಡಿ. ಸರ್ಕಾರದಿಂದಲೇ ಬೀಜ ನೀಡಿ ಮೇವು ದೊಡ್ಡದಾದ ನಂತರ ರೈತರಿಗೆ ಹಣ ನೀಡಿ ಖರೀದಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಹೇಳಿದರು. ಔರಾದ ತಾಲೂಕಿನ ಕೆಲ ತಾಂಡಾಗಳಲ್ಲಿ ಮಕ್ಕಳು ಮಧ್ಯಾಹ್ನ ಬಿಸಿ ಊಟ ಮಾಡಿದ ನಂತರ ಬೇರೆ ಕಡೆಯಿಂದ ತರುವ ಅನಿವಾರ್ಯತೆ ಶಾಲೆ ಶಿಕ್ಷಕರು ಹಾಗೂ ಅಡುಗೆ ಸಹಾಯಕರಿಗೆ ಎದುರಾಗಿದೆ. ಹೀಗಾಗಿ ಶಾಲೆಗೆ ಕೂಡಲೇ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಶಿಕ್ಷಕರೊಬ್ಬರು ಸಭೆಯಲ್ಲಿ ಗಮನ ಸೆಳೆದರು.
Related Articles
Advertisement
ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಾಲೆ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಗ್ರಾಮದಲ್ಲಿ ಬರ ಪರಿಸ್ಥಿತಿ ಹೇಗೆ ನಿಬಾಹಿಸಬೇಕು ಎನ್ನುವ ಅಂಶಗಳ ಪಟ್ಟಿ ಸಿದ್ಧ ಮಾಡಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಅದಲ್ಲದೆ ಗ್ರಾಮದಲ್ಲಿನ ರೈತರೊಂದಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.ತಹಶೀಲ್ದಾರ್ ಎಂ. ಚಂದ್ರಶೇಖರ, ತಾಪಂ ಇಒ ಜಗನಾಥ ಮೂರ್ತಿ, ಕೃಷಿ ಇಲಾಖೆ ವಿದ್ಯಾನಂದ ಸಿ., ತಾಲೂಕಿನ ಎಲ್ಲ ಗ್ರಾಮದ ಲೆಕ್ಕಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಾಲೆ ಮುಖ್ಯ ಶಿಕ್ಷಕರು
ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು .