Advertisement

ಅಕ್ರಮ ಬಡಾವಣೆ ವಿರುದ್ಧ ಸಮರ

03:46 PM Aug 11, 2021 | Team Udayavani |

ಬೆಂಗಳೂರು: ಆಗ್ಗಾಗೆ ತಲೆ ಎತ್ತುವ ಅಕ್ರಮ ಬಡಾವಣೆಗಳ ಸಂಬಂಧ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ಇದೀಗ ಭೂ ಪರಿವರ್ತನೆಯಾಗದೇ ಕೃಷಿ ಜಮೀನಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳ ವಿವರವನ್ನು ಕಲೆಹಾಕುವಲ್ಲಿ ನಿರತವಾಗಿದೆ. ಜತೆಗೆ ಅಕ್ರಮ ಬಡಾವಣೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಎಫ್ಐಆರ್‌ ಅನ್ನುಕೂಡ ದಾಖಲು ಮಾಡಿದೆ. ಜಿಲ್ಲಾಡಳಿತದ ಹಲವು ಕ್ರಮಗಳ ಮಧ್ಯೆಯೂ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 6077 ಅಕ್ರಮ ಬಡಾವಣೆಗಳು ತಲೆ ಎತ್ತಿವೆ.

Advertisement

ಯಲಹಂಕ, ಅನೇಕಲ್‌, ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಸುಮಾರು 7425 ಎಕರೆ 38.03 ಗುಂಟೆ
ಪ್ರದೇಶಲ್ಲಿ ಅಕ್ರಮಬ ಡಾವಣೆಗಳು ನಿರ್ಮಾಣವಾಗಿವೆ.ಹೀಗಾಗಿ ನಗರ ಜಿಲ್ಲಾಡಳಿತ ಈಗಾಗಲೇ ಸುಮಾರು 3404 ಮಂದಿಗೆ ನೋಟಿಸ್‌ ಜಾರಿ ಮಾಡಿದೆ. ಹಾಗೆಯೇ ಸುಮಾರು 530 ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ಕೊಂಡಿದೆ ಎಂದು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನಧಿಕೃತ ಬಡಾವಣೆ ಸಂಬಂಧ ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಭೂ ಪರಿವರ್ತನೆಯಾಗದೇ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳ ವಿವರಗಳನ್ನುಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿ ತೆರವುಗೊಳಿಸಲಾಗಿದೆ?: ಬೆಂಗಳೂರು ಉತ್ತರ ತಾಲೂಕಿನಲ್ಲಿ ಸುಮಾರು 335 ಅಕ್ರಮ ಬಡಾವಣೆ ಪ್ರಕರಣಗಳು ಪತ್ತೆಯಾಗಿವೆ. ಆ ಭಾಗದಲ್ಲಿ 310 ಮಂದಿಗೆ ಈ ಸಂಬಂಧ ನೋಟಿಸ್‌ ಜಾರಿ ಮಾಡಲಾಗಿದೆ. ಜತೆಗೆ 31 ಎಫ್ಐಆರ್‌ಗಳನ್ನು ದಾಖಲು ಮಾಡಲಾಗಿದ್ದು 5 ಪ್ರಕರಣಗಳಲ್ಲಿ 49 ಎಕರೆ 17 ಗುಂಟೆ ಪ್ರದೇಶವನ್ನು ತೆರವು ಗೊಳಿಸಲಾಗಿದೆ.

ಇದನ್ನೂ ಓದಿ:ಆನಂದ‌ ಸಿಂಗ್ ಭೇಟಿ ವಿಚಾರದಲ್ಲಿ ಮಾಹಿತಿ ಬಿಟ್ಟು ಕೊಡದ ಸ್ಪೀಕರ್

Advertisement

ಹಾಗೆಯೇ ಬೆಂಗಳೂರು ದಕ್ಷಿಣದಲ್ಲಿ 778 ಪ್ರಕರಣಗಳು ಕಂಡುಬಂದಿದ್ದು 106 ಮಂದಿ ವಿರುದ್ಧ ಎಫ್ಐಆರ್‌ ದಾಖಲು ಮಾಡಲಾಗಿದೆ. 15 ಪ್ರಕರಣಗಳಲ್ಲಿ 38 ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ಪೂರ್ವದಲ್ಲಿ 1105 ಅನಧಿಕೃವಾಗಿ ನಿರ್ಮಾಣವಾಗಿರುವ ಅಕ್ರಮ
ಬಡಾವಣೆಗಳು ಕಂಡು ಬಂದಿದ್ದು ಇದರಲ್ಲಿ 3 ಪ್ರಕರಣಗಳಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ ಯಾವುದೇ ಪ್ರದೇಶವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿಲ್ಲ.

ಯಲಹಂಕ ಭಾಗದಲ್ಲಿ 3285 ಪ್ರಕರಣಗಳು ಕಂಡುಬಂದಿದೆ. ಈ ಭಾಗದಲ್ಲಿ ಸುಮಾರು 3343 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. 353 ಮಂದಿಯ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು 10 ಪ್ರಕರಣಗಳಲ್ಲಿ 12.08 ಗುಂಟೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.
ಆನೇಕಲ್‌ ಪ್ರದೇಶದಲ್ಲಿ 547 ಒಟ್ಟು ಪ್ರಕರಣಗಳನ್ನು ಕಂಡುಬಂದಿದ್ದು 92 ಎಕರೆ ವಿಸ್ತೀರ್ಣ ಪ್ರದೇಶವನ್ನು ತೆರೆವುಗೊಳಿಸಲಾಗಿದೆ.

ಖರೀದಿಗೂಮುನ್ನ
ಎಚ್ಚರಿಕೆ ವಹಿಸಿ
ಅಕ್ರಮ ಬಡಾವಣೆಗಳಿಂದ ಸರ್ಕಾರದ ಬೊಕ್ಕಸಕ್ಕೂಯಾವುದೇ ಆದಾಯವಿಲ್ಲ. ಜತೆಗೆ ಸಾರ್ವಜನಿಕರುಕೂಡ ವಂಚನೆಗೆ ಒಳಗಾಗಲಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಅಕ್ರಮ ಬಡಾವಣೆಗಳ ವಿರುದ್ಧಕ್ರಮಕ್ಕೆ ಮುಂದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದ್ದಾರೆ.

ಸಾರ್ವಜನಿಕರು ನಿವೇಶನ ಖರೀದಿ ವೇಳೆ ಬಡಾವಣೆ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲಾಗಿದೆಯೇ ಅಥವಾ ಇಲ್ಲವೆ ಎಂಬುವುದರ ಬಗ್ಗೆಕೂಲಂಕಷವಾಗಿ ಪರಿಶೀಲಿಸಿದ ನಂತರಖರೀದಿ ಪ್ರಕ್ರಿಯೆಯಲ್ಲಿ ತೊಡಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಕ್ರಮ ಬಡವಾಣೆಗಳಿಗೆ ಕಡಿವಾಣ ಹಾಕುವ ಸಂಬಂಧ ಜಿಲ್ಲಾಡಳಿತ ಕ್ರಮಕೈಗೊಂಡಿದೆ. ತಾಲೂಕುವಾರು ಮತ್ತು ಹೋಬಳಿವಾರು ಅಕ್ರಮ ಬಡಾವಣೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.
-ಜೆ. ಮಂಜುನಾಥ್‌,
ಬೆಂಗಳೂರು ನಗರ ಜಿಲ್ಲಾಧಿಕಾರಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next