Advertisement

ಗೋರೆಗಾಂವ್‌ ಕರ್ನಾಟಕ ಸಂಘದಿಂದ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ

12:52 PM Sep 18, 2018 | Team Udayavani |

ಮುಂಬಯಿ: ಗೋರೆ ಗಾಂವ್‌ ಕರ್ನಾಟಕ ಸಂಘದ ವತಿ ಯಿಂದ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಸಂಘದ ಬಾರಕೂರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ಐ. ಬಿ. ಪಟೇಲ್‌ ಮಹಾನಗರ ಪಾಲಿಕೆಯ ಕನ್ನಡ ಶಾಲೆ ಹಾಗೂ ಸರಸ್ವತಿ ರಾತ್ರಿ ಶಾಲೆಯ ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್‌ಬುಕ್‌, ಕಂಪಾಸ್‌, ಕಲರ್‌ ಪೆನ್ಸಿಲ್‌ ಇತ್ಯಾದಿ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಮಕ್ಕಳಿಗೆ ರಾಷ್ಟÅಗೀತೆಯ ಗಾಯನ ನಡೆಯಿತು.

ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳು ತಂದೆ-ತಾಯಿಗೆ ವಿಧೇಯರಾಗಿ, ಗುರು-ಹಿರಿಯರಿಗೆ ಗೌರವಕೊಟ್ಟು ನಡೆಯುವುದನ್ನು ಕಲಿಯಬೇಕು. ಉತ್ತಮ ಶಿಕ್ಷಣವನ್ನು ಪಡೆದು ಒಳ್ಳೆಯ ಸ್ಥಾನವನ್ನು ಅಲಂಕರಿಸಿದ ಸನ್ಮಾರ್ಗದಲ್ಲಿ ಸಾಗಬೇಕು. ಶಿಕ್ಷಣದೊಂದಿಗೆ ಸುಸಂಸ್ಕೃತ ಜೀವನ ನಡೆಸುವಲ್ಲಿ ಮಕ್ಕಳು ಯಶಸ್ವಿಯಾಗಬೇಕು. ಕಷ್ಟದಲ್ಲಿರುವವರಿಗೆ ಸಹಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ದೇಶದ ಉತ್ತಮ ಪ್ರಜೆಯಾದರೆ ಇದೇ ಮಕ್ಕಳು ದೇಶಕ್ಕೆ ಕೊಡುವ ಉತ್ತಮ ಕೊಡುಗೆಯಾಗಿದೆ ಎಂದು ನುಡಿದು ಅಭಿನಂದಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ರಮೇಶ್‌ ಶೆಟ್ಟಿ ಪಯ್ನಾರ್‌, ಯು. ಎಸ್‌. ಕಾರಂತ್‌ ಅವರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಂಘದ ಮಾಜಿ ಅಧ್ಯಕ್ಷ ಜಿ. ಎಸ್‌. ಶಂಕರ್‌ರಾವ್‌ ಮತ್ತು ಶಕುಂತಲಾ ಪ್ರಭು ಅವರು ಸ್ಥಾಪಿಸಿದ ದತ್ತಿನಿಧಿ ಹಾಗೂ ಸಂಘದ ಸದಸ್ಯರ ದೇಣಿಗೆಯಿಂದ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.

ಸಭಿಕರ ವತಿಯಿಂದ ಸಂಘದ ಪಾರುಪತ್ಯಗಾರರಾದ ರಮೇಶ್‌ ಶೆಟ್ಟಿ ಪಯ್ನಾರ್‌, ಐ. ಬಿ. ಪಟೇಲ್‌ ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಬಿರಾದರ್‌, ಸರಸ್ವತಿ ರಾತ್ರಿಶಾಲೆಯ ಶಿಕ್ಷಕಿ ಸುಜ್ಞಾನಿ ಬಿರಾದಾರ್‌ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಿದ ವಸಂತಿ ಶೆಟ್ಟಿ ಮತ್ತು ಎಸ್‌. ಎಂ. ಶೆಟ್ಟಿ ಹಾಗೂ ತಂಪುಪಾನೀಯದ ವ್ಯವಸ್ಥೆಯನ್ನು ಆಯೋಜಿಸಿದ್ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್‌ ನಾಯಕ್‌, ಭಾಸ್ಕರ್‌ ಸಾಫಲ್ಯ ಅವರನ್ನು ಸಂಘದ ವತಿಯಿಂದ ಪುಷ್ಪಗುಚ್ಚವನ್ನಿತ್ತು ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ಗೌರವಿಸಿದರು.

Advertisement

ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಇವರು ವಂದಿಸಿ ದರು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ತುಳು-ಕನ್ನಡಿಗರು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next