Advertisement

12ಕ್ಕೆ ಕಂದಾಯ ದಾಖಲೆ ವಿತರಣೆ: ಸಿಎಂ ಚಾಲನೆ

03:34 PM Mar 08, 2022 | Team Udayavani |

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ “ಕಂದಾಯದಾಖಲೆ ಮನೆ ಬಾಗಿಲಿಗೆ’ ಯೋಜನೆಯರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರತಾಲೂಕಿನ ನಂದಿ ಹೋಬಳಿಯ ಪೋಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಮಾ. 12ಕ್ಕೆ ಚಾಲನೆ ದೊರೆಯಲಿದೆ.

Advertisement

ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಧಿಕಾರಿ ಆರ್‌.ಲತಾ ಅವರ ನೇತೃತ್ವದಲ್ಲಿಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಾಲೂಕಿನ ಗಡಿಭಾಗದಲ್ಲಿರುವ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಮಾ. 12ಕ್ಕೆ “ಕಂದಾಯ ದಾಖಲೆ ಮನೆಬಾಗಿಲಿಗೆ’ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಲತಾ ಅವರು ಜಿಲ್ಲಾಡಳಿತ ಮತ್ತುತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಭೇಟಿನೀಡಿ ಪೂರ್ವ ಸಿದ್ಧತೆಗಾಗಿ ಸ್ಥಳ ಪರಿಶೀಲನೆ ನಡೆಸಿದರು.

ಗುಂಗಿರ್ಲಹಳ್ಳಿ (ಮಜರೆ) ಗ್ರಾಮದಲ್ಲಿ 171ಕುಟುಂಬಗಳಿದ್ದು, 977 ಜನರು ವಾಸವಿದ್ದಾರೆ. ಈಪೈಕಿ 157 ಖಾತೆದಾರರಿದ್ದಾರೆ. 977 ಜನಸಂಖ್ಯೆಯುಳ್ಳಈ ಕುಗ್ರಾಮಕ್ಕೆ ಮಾ. 12 ರಂದು ಸಿಎಂ ಬಸವರಾಜ್‌ಬೊಮ್ಮಾಯಿ ಅವರು ಆಗಮಿಸಿ ಪಹಣಿ, ಅಟ್ಲಾಸ್‌,ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನುಹಾಗೂ ಇತರೆ ದಾಖಲೆಗಳನ್ನು ಖುದ್ದಾಗಿ ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಿದ್ದಾರೆ.

ಈ ಗ್ರಾಮದಲ್ಲಿ ವಾಸವಿರುವ 171 ಕುಟುಂಬ ಗಳಿಗೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನುಭೂಮಿ ಮತ್ತು ಮೋಜಣಿ ತಂತ್ರಾಂಶಗಳಿಂದ ಸಂಗ್ರಹಿಸಿ ಮುದ್ರಿಸಿಟ್ಟುಕೊಳ್ಳಲಾಗಿದೆ. 12ರಂದು ನಡೆಯುವ ವೇದಿಕೆ ಕಾರ್ಯಕ್ರಮದ ಸ್ಥಳದಲ್ಲಿತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂಚಾಲನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನುಮಾಡಿಕೊಳ್ಳುವಂತೆ ಲೋಕೋಪಯೋಗಿಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಗ್ರಾಮಸ್ಥರ ಹರ್ಷ: ಮುಖ್ಯಮಂತ್ರಿಗಳು ನಮ್ಮ ಗ್ರಾಮಕ್ಕೆ ಆಗಮಿಸುತ್ತಿರುವುದೇ ನಮ್ಮೆಲ್ಲರ ಭಾಗ್ಯವಾಗಿದ್ದು, ಅಂದಿನ ದಿನವನ್ನು ಹಬ್ಬದ ರೀತಿಯಲ್ಲಿಗ್ರಾಮವನ್ನು ಸಿಂಗರಿಸಿ ಈ ಕಾರ್ಯಕ್ರಮವನ್ನುಆಚರಿಸುತ್ತೇವೆ. ಇಂತಹ ಮಹತ್ವ ಪೂರ್ಣಕಾರ್ಯಕ್ರಮದಲ್ಲಿ ನಾವೆಲ್ಲರೂ ಸಕ್ರಿಯವಾಗಿಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ನಮ್ಮಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್‌, ತಾಲೂಕಿನ ತಹಶೀಲ್ದಾರ್‌ ಗಣಪತಿಶಾಸ್ತ್ರಿ, ತಾಪಂ ಇಒ ಮಂಜುನಾಥ್‌, ಪಿಡಿಒಮಂಜುನಾಥ್‌, ಸ್ಥಳೀಯ ಪ್ರತಿನಿಧಿಗಳು, ಗ್ರಾಮಸ್ಥರು ಇತರರಿದ್ದರು.

Advertisement

ಯೋಜನೆ ವಿಶೇಷತೆ :

ರೈತರ ಅರ್ಹತೆಯನ್ನು ನಿರ್ಧರಿಸುವ ಮೂಲ ಕಂದಾಯ ದಾಖಲೆಗಳಾದ ಪಹಣಿ ಮತ್ತುಅಟ್ಲಾಸ್‌ಗಳು ಭೂಮಿ ಮತ್ತು ಮೋಜಣಿತಂತ್ರಾಂಶಗಳಲ್ಲಿ ಲಭ್ಯವಿದೆ. ಜಾತಿ ಮತ್ತುಆದಾಯ ಪ್ರಮಾಣ ಪತ್ರಗಳು ಇ-ಕ್ಷಣತಂತ್ರಾಂಶದಲ್ಲಿ ಲಭ್ಯವಿದ್ದು, ತಂತ್ರಾಂಶಗಳಿಂದಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕುಟುಂಬವಾರು ಪಡೆದು ಸದರಿದಾಖಲೆಗಳನ್ನು ಲಕೋಟೆಯಲ್ಲಿರಿಸಿಕಂದಾಯ ಇಲಾಖೆಯಿಂದ ಪ್ರತಿ ರೈತ ಕುಟುಂಬದ ಮನೆ ಬಾಗಿಲಿಗೆ ಹಾಗೂ ಫಲಾನುಭವಿಗಳಿಗೆ ಉಚಿತವಾಗಿ ತಲುಪಿಸುವುದು ಯೋಜನೆ ಉದ್ದೇಶವಾಗಿದೆ.

ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದ ದಿನದಿಂದ ಜಿಲ್ಲೆಯ ರೈತರ ಹಾಗೂ ಫಲಾನುಭವಿಗಳ ಮನೆ ಬಾಗಿಲಿಗೆ ಕಂದಾಯ ಮತ್ತುಇತರ ಇಲಾಖೆಗಳ ಅಧಿಕಾರಿಗಳು ತೆರಳಿ ಪಹಣಿ, ಅಟ್ಲಾಸ್‌, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಿದ್ದಾರೆ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. -ಆರ್‌.ಲತಾ, ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ

Advertisement

Udayavani is now on Telegram. Click here to join our channel and stay updated with the latest news.

Next