Advertisement

ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಪಡಿತರ ಕಿಟ್‌ ವಿತರಣೆ

11:22 AM Jun 20, 2021 | Team Udayavani |

ಹಾನಗಲ್ಲ: ಧರ್ಮಸ್ಥಳ ಧರ್ಮಾ ಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೋವಿಡ್‌ ಸೋಂಕಿತರಿಗೆ ವಾಹನ ಸೇವೆ, ಬಡವರಿಗೆ ಆಹಾರ ಸಾಮಗ್ರಿ ವಿತರಣೆ, ಆಸ್ಪತ್ರೆಗಳಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುತ್ತಿದೆ. ಫಲಾನುಭವಿಗಳಿಗೆ ಇದನ್ನೆಲ್ಲ ಶ್ರೀಕ್ಷೇತ್ರದಿಂದ ಪ್ರಸಾದ ರೂಪದಲ್ಲಿನೀಡಲಾಗುತ್ತಿದೆ ಎಂದು ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ತಿಳಿಸಿದರು.

Advertisement

ಪಟ್ಟಣದ ವೇಂಕಟೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳಿಗೆ ಪಡಿತರ ಸಾಮಗ್ರಿ ಕಿಟ್‌ ಹಾಗೂ ಪತ್ರಿಕಾ ವಿತರಕರು, ವರದಿಗಾರರಿಗೆ ಎನ್‌-95 ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿ ಮಾತನಾಡಿದರು.

800 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರ, ಅಭಯ ದಾನ, ಅನ್ನದಾನ, ವಿದ್ಯಾದಾನ, ಔಷಧ ದಾನದ ಮೂಲಕ ಪರಂಪರೆಯಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದೆ. ನೆರೆ, ಬರ, ಮಾರಕ ಕಾಯಿಲೆಗಳ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಅಭಯ ನೀಡುತ್ತ ಬಂದಿದ್ದಾರೆ. ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ಶ್ರೀಕ್ಷೇತ್ರದಿಂದ ಸರ್ಕಾರಕ್ಕೆ 25 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿತ್ತು. ಕೊರೊನಾ ಸಂದರ್ಭದಲ್ಲೂ6 ಲಕ್ಷ ಲೀಟರ್‌ ಆಮ್ಲಜನಕ, ವೆಂಟಿಲೇಟರ್‌, ಕಾನ್ಸಂಟ್ರೇಟರ್‌ ಮತ್ತು ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಗಿದೆ ಎಂದರು.

ಮೈಸೂರು, ಬೆಳ್ತಂಗಡಿ, ರಜತಾದ್ರಿಯಲ್ಲಿಐಸೋಲೇಷನ್‌ ವಾರ್ಡ್‌ ತೆರೆಯಲಾಗಿದೆ. ನಮ್ಮ ವ್ಯಾಪ್ತಿಯ 40 ತಾಲೂಕುಗಳಲ್ಲಿ 10 ಸಾವಿರ ಆಹಾರ ಕಿಟ್‌ಗಳನ್ನು ಧರ್ಮಾಧಿಕಾರಿಗಳು ಒದಗಿಸಿದ್ದಾರೆ ಎಂದರು.

ಕೊರೊನಾ ಭಯದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ನಮ್ಮ ಹಾಗೂ ಬೇರೆಯವರ ಆರೋಗ್ಯ ಕಾಪಾಡಿದಂತಾಗುತ್ತದೆ. ಕೊರೊನಾದಿಂದ ಬಹಳಷ್ಟು ಜನ ನಮ್ಮವರನ್ನು ಕಳೆದುಕೊಂಡಿದ್ದೇವೆ. ಗಂಭೀರ ಸ್ಥಿತಿಗೆ ಬಂದಾಗಲೇ ಆಸ್ಪತ್ರೆಗೆ ತೆರಳುವ ಬದಲು ಆರಂಭದಲ್ಲೇ ಚಿಕಿತ್ಸೆ ಪಡೆದರೆ ಜೀವ ಉಳಿಸಿಕೊಳ್ಳಬಹುದು. ಕೊರೊನಾ ದೇವರು ಕೊಟ್ಟ ಕಾಯಿಲೆಯಲ್ಲ. ಮಾನವ ಸಮುದಾಯ ಮಾಡಿಕೊಂಡ ಸಮಸ್ಯೆ. ಇಂಥ ಇನ್ನೂ 24 ವೈರಸ್‌ಗಳು ಬರುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ. ಹಾಗಾಗಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು.

Advertisement

ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಶ್ರೀಕ್ಷೇತ್ರದ ಧರ್ಮಾ ಧಿಕಾರಿಗಳು ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ, ಶುದ್ಧ ಕುಡಿಯುವ ನೀರಿನಘಟಕ, ಶೌಚಗೃಹ ನಿರ್ಮಾಣ, ಮಧ್ಯ ವರ್ಜನ ಶಿಬಿರಗಳಿಂದ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ. ಕೊರೊನಾ ಇಲ್ಲಿಗೇ ನಿಲ್ಲುವುದಿಲ್ಲ. ಈಗಾಗಲೇಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಕೊರೊನಾದೊಂದಿಗೇ ಬಾಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯೆ ರಾಧಿಕಾ ದೇಶಪಾಂಡೆ, ಶಿವಲಿಂಗಪ್ಪ ತಲ್ಲೂರ ಅತಿಥಿಗಳಾಗಿದ್ದರು. ವಿಜಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next