Advertisement

ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ಕಿಟ್ ವಿತರಣೆ

11:13 PM Jun 07, 2019 | Sriram |

ಕಟಪಾಡಿ: ಶಿಕ್ಷಣಕ್ಕೆ ಸಹಾಯ ಹಸ್ತಗಳು ಇಂದು ಹೆಚ್ಚಿನ ಮೂಲಗಳಿಂದ ಬರುತ್ತಿದೆ. ಅದನ್ನು ಉಪಯೋಗಿಸುವ ಜಾಣತನ ನಿಮ್ಮದಾಗಬೇಕಾಗಿದೆ. ಈ ರೀತಿ ಶಿಕ್ಷಣಕ್ಕಾಗಿ ಬರುವ ಸವಲತ್ತನ್ನು ಉಪಯೋಗಿಸಿಕೊಂಡು ಶಿಕ್ಷಣದಲ್ಲಿ ಮುಂದುವರಿಯಿರಿ ಎಂದು ಉದ್ಯಾವರ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್‌ ಹೇಳಿದರು.

Advertisement

ಅವರು ಗುರುವಾರ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಕಲಿಕಾ ಪರಿಕರಗಳ ಕಿಟ್ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ಶಾಲೆಗಳು ಸಂಕಷ್ಟದಲ್ಲಿ ಇರುವ ಹೊತ್ತು ಕೂಡಾ ಈ ಶಾಲೆ ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದೆ ಎಂದರೆ ಈ ಶಾಲಾ ಶೈಕ್ಷಣಿಕ ಗುಣಮಟ್ಟ ಕಾರಣ. ಅದಕ್ಕೆ ಶ್ರಮಿಸುವ ಶಿಕ್ಷಕರು ಶಾಲಾಡಳಿತ ಮಂಡಳಿ ಮತ್ತು ಹೆತ್ತವರು ಅಭಿನಂದನೀಯರು. ಶಾಲೆ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಉದ್ಯಾವರ ನಾಗೇಶ್‌ ಕುಮಾರ್‌ ಮಾತನಾಡಿ, ಕಲಿಕಾ ಪರಿಕರಗಳನ್ನು ನಿರಂತರ ದಾನವಾಗಿ ಕೊಡುವ ರವೀಂದ್ರ ಹೆಗ್ಡೆ ದಂಪತಿ ಕೆಲಸ ಪುಣ್ಯದ ಕೆಲಸ. ಇವರ ಈ ಕೆಲಸವನ್ನು ವಿದ್ಯಾರ್ಥಿಗಳು ಮನದಲ್ಲಿ ಇಟ್ಟುಕೊಂಡು ಮುಂದಿನ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ಅವರ ಈ ಕಾರ್ಯವನ್ನು ಸ್ಮರಿಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಬದುಕಿ ಉಳಿಯುವುದೇ ಇಂತಹ ದಾನಿಗಳಿಂದ ಎಂದರು.

ಸುಮನಾರವೀಂದ್ರ ಹೆಗ್ಡೆಯವರು ಕಲಿಕಾ ಪರಿಕರಗಳ ಕಿಟ್ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

Advertisement

ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ ನಳಿನಿ, ಪ್ರತಾಪ್‌ ಕುಮಾರ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯು.ಆರ್‌. ಚಂದ್ರಶೇಖರ್‌, ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗಣೇಶ್‌ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಗಣಪತಿ ಕಾರಂತ್‌ ಸ್ವಾಗತಿಸಿದರು. ಕೊನೆಯಲ್ಲಿ ಸಹ ಶಿಕ್ಷಕಿಯರಾದ ಹೇಮಲತಾ ವಂದಿಸಿದರು. ರತ್ನಾವತಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೆ ಸುಮಾರು 1250 ರೂಪಾಯಿಗಳ ಮೊತ್ತದ ಕಲಿಕಾ ಪರಿಕರಗಳನ್ನು 50 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next