Advertisement

ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ

01:45 PM Nov 09, 2021 | Team Udayavani |

ಕಮಲಾಪುರ: ಗ್ರಾಮೀಣ ಮತಕ್ಷೇತ್ರದ ಚಿಂಚನಸೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ 203 ರೈತರಿಗೆ ಬಡ್ಡಿ ರಹಿತ ಸಾಲದ ಚೆಕ್‌ನ್ನು ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಗ್ರಾಮೀಣ ಮತಕ್ಷೇತ್ರದ ಎಲ್ಲ ರೈತರಿಗೆ ಸಾಲ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್‌ ಜತೆ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಅವರು ಸ್ಪಂದಿಸಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಟಗಿ ಮಾತನಾಡಿ, ಒಂದು ಕೋಟಿ 55 ಲಕ್ಷ ರೂ. ಸಾಲವನ್ನು ನೀಡಲಾಗುತ್ತಿದ್ದು, ಪ್ರತಿ ರೈತರಿಗೆ 25 ಸಾವಿರ ರೂ. ಒದಗಿಸಲಾಗುತ್ತಿದೆ. ರೈತರು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡಬೇಕು. ಅಂದರೆ ಅವರಿಗೆ ದುಪ್ಪಟ್ಟು ಸಾಲ ನೀಡಲಾಗುವುದು ಎಂದು ಹೇಳಿದರು.

ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಅಶೋಕ ಸಾವಳೇಶ್ವರ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಶಿನಾಥ ರಾಮನಾಥನ್‌. ಹರ್ಷವರ್ಧನ್‌ ಗುಗಳೆ, ಸಂಗಮೇಶ ನಾಗನಹಳ್ಳಿ, ಸತೀಶ ಮುಗಳಿ, ರಾಜಕುಮಾರ ಮಂಡಳೆ ಮಡಕಿ, ದೀಪಕ್‌, ಮಲ್ಲಿಕಾರ್ಜುನ ಮರತೂರಕರ್‌, ಹನುಮಂತ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next