Advertisement

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ

06:29 AM Jun 12, 2020 | Suhan S |

ಬಾಗಲಕೋಟೆ: ಮಹಾಮಾರಿ ಕೋವಿಡ್ ವೈರಸ್‌ ಕುರಿತು ಇಡೀ ದೇಶದ ಜನರು ಭಯದಿಂದ ಮನೆಯಲ್ಲಿದ್ದರೆ, ಆಶಾ ಕಾರ್ಯಕರ್ತೆಯರು, ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಕಾಶೀನಾಥ ಹುಡೇದ ಹೇಳಿದರು.

Advertisement

ನವನಗರದ ಸಹಕಾರಿ ಯೂನಿಯನ್‌ ಕಚೇರಿಯಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು. ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಪ್ರತಿಯೊಂದು ಜಿಲ್ಲೆಯ ಅಧಿಕಾರಿ-ಸಿಬ್ಬಂದಿ ಕೆಲಸ ಮಾಡಿದ್ದಾರೆ. ಅದರಲ್ಲೂ ವೈದ್ಯರು, ನರ್ಸ್‌ಗಳು, ಆಶಾ, ಅಂಗನವಾಡಿ, ಪೊಲೀಸರು, ಮಾಧ್ಯಮಗಳು, ಸರ್ಕಾರಿ ಸಿಬ್ಬಂದಿ ವಾರಿಯರ್ಸ್ ಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೊರೊನಾದಂತಹ ಸಂಕಷ್ಟದಲ್ಲೂ ಕೆಲಸ ಮಾಡಿದ ಪ್ರತಿಯೊಬ್ಬರ ಸೇವೆಯನ್ನು ಸಮಾಜ ಗೌರವಿಸಿ, ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿಡಲು ಜಿಲ್ಲಾಡಳಿತವೂ ಉತ್ತಮ ಕೆಲಸ ಮಾಡಿದೆ. ರಾಜ್ಯ ಸರ್ಕಾರ, ಕೊರೊನಾ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಘೋಷಿಸಿದ ತಲಾ ಮೂರು ಸಾವಿರ ಪ್ರೋತ್ಸಾಹಧನ ನೀಡಲು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ನಿರ್ದೇಶನದಂತೆ ನಮ್ಮ ಯೂನಿಯನ್‌ ದಿಂದ 10 ಜನರಿಗೆ ತಲಾ 3 ಸಾವಿರದಂತೆ ಪ್ರೋತ್ಸಾಹಧನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕರಾದ ದ್ಯಾಮಣ್ಣ ಗಾಳಿ, ಮಲ್ಲಣ್ಣ ಕುರಿ, ಸಿದ್ದಲಿಂಗೇಶ ಹಳದೂರ, ನಿಂಗಣ್ಣ ಗೋಡಿ, ಸಹಕಾರ ಸಂಘಗಳಉಪ ನಿಬಂಧಕ ಕಲ್ಲಪ್ಪ ಓಬನ್ನಗೋಳ, ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಯಶ್ರೀ ಹುನಗುಂದ ಉಪಸ್ಥಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next