Advertisement
ಮುಂಬಯಿ ಮೇಯರ್ ಕಿಶೋರಿ ಪೆಡ್ನ್ಕರ್ ಇದನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಬಿಎಂಸಿ ಮನೆ-ಮನೆಗೆ ತೆರಳಿ ಜನರ ತಪಾಸಣೆ ಮಾಡಲು ಪ್ರಾರಂಭಿಸಿದೆ ಹಾಗೂ ಕಂಟೈನ್‌ಮೆಂಟ್ ಮತ್ತು ಕೆಂಪು ವಲಯಗಳಲ್ಲಿ ವಾಸಿಸುವ ಎಲ್ಲ ಜನರಿಗೆ ಆರ್ಸೆನಿಕಮ್ ಆಲ್ಬಮ್ 30 ಗುಳಿಗೆಯನ್ನು ನೀಡಲು ಪ್ರಾರಂಭಿಸಿದೆ ಎಂದು ಪೆಡ್ನ್ಕರ್ ಹೇಳಿದ್ದಾರೆ. ಈ ಔಷಧದ ಪರಿಣಾಮಕಾರಿತ್ವವು ಇನ್ನೂ ತಿಳಿದುಬಂದಿಲ್ಲ ಆದರೆ ಅದರ ಸಾಮರ್ಥ್ಯದ ಬಗ್ಗೆ ಕಲ್ಪನೆಯನ್ನು ಪಡೆಯಲು ಅದನ್ನು ಪ್ರಾಯೋಗಿಕ ಆಧಾರದ ಮೇಲೆ ನೀಡಲು ಪ್ರಾರಂಭಿಸಿದೆ ಎಂದು ಮೇಯರ್ ತಿಳಿಸಿದ್ದಾರೆ. ಔಷಧಿ ಪರಿಣಾಮಕಾರಿ ಎಂದು ಕಂಡುಬಂದಲ್ಲಿ, ಅಧಿಕಾರಿಗಳು ಅದನ್ನು ಮತ್ತಷ್ಟು ಕಂಟೈನ್‌ಮೆಂಟ್ ಕೇಂದ್ರಗಳಲ್ಲಿ ಜನರಿಗೆ ವಿತರಿಸಲಿದ್ದಾರೆ ಎಂದು ಪೆಡ್ನ್ಕರ್ ಹೇಳಿದ್ದಾರೆ. ಬಿಎಂಸಿ ಮೂಲಕ ಸರಕಾರ ಕಳೆದ ಎರಡು ವಾರಗಳಲ್ಲಿ ಹೆಚ್ಚುವರಿ ಆರು ಕೋವಿಡ್ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸಿದೆ. ಈ ಕೇಂದ್ರ ಗಳಲ್ಲಿ ದಟ್ಟವಾದ ಕೊಳೆಗೇರಿ ಪ್ರದೇಶಗಳ ರೋಗಲಕ್ಷಣವಿಲ್ಲದ ರೋಗಿಗಳನ್ನು ಇರಿಸಲಾಗುತ್ತದೆ. ಮಹಾಲಕ್ಷ್ಮೀ ರೇಸ್‌ಕೋರ್ಸ್, ನೆಹರು ವಿಜ್ಞಾನ ಕೇಂದ್ರ, ಬಿಕೆಸಿಯ ಎಂಎಂಆರ್‌ಡಿಎ ಮೈದಾನ, ಮಾಹಿಮ್ ನೇಚರ್ ಪಾರ್ಕ್ ಮತ್ತು ಗೋರೆ
ಗಾಂವ್‌ನ ನೆಸ್ಕೋ ಮೈದಾನದಲ್ಲಿ ಹೊಸ ಸೌಲಭ್ಯ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸೌಲಭ್ಯ ಗಳೊಂದಿಗೆ ಮುಂಬಯಿಯ ಒಟ್ಟು ಸಾಮರ್ಥ್ಯ ವನ್ನು 14,000 ದಿಂದ 34,000 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ.