Advertisement

ಹೊಯ್ಸಳ -ಕೆಳದಿ ಚೆನ್ನಮ್ಮ ಪ್ರಶಸ್ತಿ ವಿತರಣೆ

09:30 PM May 09, 2019 | sudhir |

ಉಡುಪಿ: ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ತೋರಿದ 14 ಮಕ್ಕಳಿಗೆ 2018-19 ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌ ಬಾಲಭವನದಲ್ಲಿ ಪ್ರದಾನ ಮಾಡಿದರು.

Advertisement

ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಬೇಸಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಜತೆಗೆ ಪಠ್ಯೇಟರ ಚಟುವಟಿಕೆಯಲ್ಲಿ ತೊಡಿಗಿಸಿಕೊಂಡಾಗ ವ್ಯಕ್ತಿತ್ವ ವಿಕಾಸವಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಬೇಸಗೆ ಶಿಬಿರ ಸಹಾಯಕ ಎಂದರು.

ಬೇಸಗೆ ಶಿಬಿರಕ್ಕೆ 75 ಮಕ್ಕಳು ದಾಖಲಾಗಿದ್ದು, ಮಕ್ಕಳಿಗೆ ಚಿತ್ರಕಲೆ, ಸಂಗೀತ,ಯೋಗ, ಕರಾಟೆ, ನೃತ್ಯ ತರಬೇತಿ ನೀಡಲಾಗಿದೆ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅನಂತರ ನಡೆದ ಅಭಿರಂಗ ಮಕ್ಕಳ ನಾಟಕೋತ್ಸವದಲ್ಲಿ ಕಪ್ಪುಕಾಗೆಯ ಹಾಡುಗಳು ಮತ್ತು ಜೈ ಬೇತಾಳ ಎಂಬ ಸಾಮಾಜಿಕ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಶಿಕ್ಷಣಾಧಿಕಾರಿ ಜಾಹ್ನವಿ, ಜಿಲ್ಲಾ ತಾ.ಶಿಶು ಅಭಿವೃದ್ದಿಯೋಜನಾಧಿಕಾರಿ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಅಮೃತ್‌ ಸ್ವಾಗತಿಸಿದರು, ಅಬ್ದುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.

Advertisement

ಪ್ರಶಸ್ತಿ ವಿಜೇತರು
ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಕ್ರೀಡೆ – ತನುಶ್ರೀ, ಮನೋಜ್‌, ಕಲಾ ವಿಭಾಗ- ಪಾವನ ಐತಾಳ್‌, ಆದರ್ಶ ಭಟ್‌, ಸಂಗೀತ ವಿಭಾಗ- ಮಹತಿ. ರಕ್ಷಿತ್‌ಆರ್‌. ಭಟ್‌, ನಾವೀನ್ಯತೆ ವಿಭಾಗ- ಸೃಜನ್‌ , ಉದ್ಭ ಯು. ಶೆಟ್ಟಿ, ಸಾಂಸ್ಕೃತಿಕ ಭಾಗ- ಅಭಿನವ, ವೀಣಾ, ತಾರ್ಕಿಕ ವಿಭಾಗ ದೀûಾ ಹೋಬಳಿದಾರ್‌, ನಚಿಕೇತ ನಾಯಕ್‌, ಸಮಾಜ ಸೇವೆಯಲ್ಲಿ ಸುಖೇಶ್‌ ರಚಿತ ಅವರಿಗೆ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next