ಪರದಾಡುತ್ತಿದ್ದ ಸುಮಾರು 9,600 ಮಂದಿಗೆ ಸೋಮವಾರ ಜಿಎಸ್‌ಟಿಐಎನ್ ಸಂಖ್ಯೆ ದೊರಕಿದ್ದು, ವ್ಯವಹಾರ
ಮುಂದುವರಿಸಲು ಅನುಕೂಲವಾಗಿದೆ. ಹೊಸ ತೆರಿಗೆ ಪದ್ಧತಿಯಡಿ ನೋಂದಣಿಗೆ ಮುಂದಾದರೂ ಕೆಲ ತಾಂತ್ರಿಕ ದೋಷ ಕಾರಣಕ್ಕೆ ಜಿಎಸ್‌ಟಿಐಎನ್ (ಜಿಎಸ್‌ಟಿನ್) ಸಂಖ್ಯೆ ದೊರಕದ ಕಾರಣ ಸುಮಾರು 10,000ಕ್ಕೂ ಹೆಚ್ಚು ವ್ಯಾಪಾರಿಗಳು
ಪರದಾಡುವಂತಾಗಿತ್ತು. ಇದರ ನೆಪದಲ್ಲೇ ಕೆಲವರು ನಿಯಮಾನುಸಾರ ಜಿಎಸ್‌ಟಿಯಡಿ ವ್ಯವಹರಿಸದೆ ಹಳೆಯ ಪದ್ಧತಿಯಂತೆ ರಸೀದಿ ನೀಡಿ ವ್ಯವಹಾರ ನಡೆಸಲು ಮುಂದಾಗುತ್ತಿರುವುದು ಕಂಡುಬಂದಿತ್ತು. ಇದೀಗ ಜಿಎಸ್‌ಟಿನ್ ಸಂಖ್ಯೆ ಹಂಚಿಕೆಯಾಗಿರುವುದರಿಂದ ಗೊಂದಲ ನಿವಾರಣೆಯಾಗಿದೆ.
Advertisement
ತಾಂತ್ರಿಕ ದೋಷ: ರಾಜ್ಯದಲ್ಲಿ ಜಿಎಸ್‌ಟಿಯಡಿ ನೋಂದಣಿ ಪ್ರಕ್ರಿಯೆ ಚುರುಕಾಗಿ ನಡೆದಿದ್ದು, ಈವರೆಗೆ ಸುಮಾರು6.50 ಲಕ್ಷಕ್ಕೂ ಹೆಚ್ಚು ಮಂದಿ ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 5.5 ಲಕ್ಷಕ್ಕೂ ಹೆಚ್ಚು ಮಂದಿ
ವ್ಯಾಟ್ ವ್ಯವಸ್ಥೆಯಿಂದ ವರ್ಗಾವಣೆಗೊಂಡವರು ಎಂಬ ಮಾಹಿತಿ ಇದೆ. ಜೂನ್ ಅಂತ್ಯದಲ್ಲಿ ಜಿಎಸ್‌ಟಿಯಡಿ
ನೋಂದಣಿಗೆ ಪ್ರಸ್ತಾವ ಸಲ್ಲಿಸಿದರೂ ಜಿಎಸ್‌ಟಿನ್ ಸಂಖ್ಯೆ ಸೃಷ್ಟಿಯಾಗದ ಕಾರಣ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು.
ಏಕೆಂದರೆ ಜಿಎಸ್‌ಟಿನ್ ಸಂಖ್ಯೆಯಿಲ್ಲದೆ ಸರಕು ಖರೀದಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಜಿಎಸ್‌ಟಿಯಡಿ ನೋಂದಣಿಯಲ್ಲಿ ಸಣ್ಣ ಪುಟ್ಟ ದೋಷಗಳ ನೆಪದಲ್ಲಿ ಜಿಎಸ್‌ಟಿನ್ ಸಂಖ್ಯೆ ದೊರೆಯದ ಕಾರಣ ತೊಂದರೆ ಅನುಭವಿಸುವಂತಾಗಿದೆ. ನಮ್ಮ ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳಲು ನಿರಂತರವಾಗಿ ಅವರಿಗೆ ಸರಕು- ಸೇವೆ ಪೂರೈಸಬೇಕಾಗುತ್ತದೆ. ಒಂದು ವಸ್ತು ಇಲ್ಲವೆಂದರೆ ಇತರೆ ವಸ್ತು ಖರೀದಿಗೂ ಆಸಕ್ತಿ ತೋರುವುದಿಲ್ಲ.
Related Articles
Advertisement