Advertisement

ವಿವಿಧ ಯೋಜನೆಗೆ ಅನುದಾನ ವಿತರಣೆ

06:57 AM Jul 07, 2020 | Lakshmi GovindaRaj |

ಕೋಲಾರ: ತಾಲೂಕು ಶಿಬಿರ ಕಚೇರಿಯಲ್ಲಿ ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ವಿವಿಧ ಯೋಜನೆಗಳ ಅನುದಾನ ವಿತರಿಸಿದರು. ರಾಸುಗಳ ಗುಂಪು ವಿಮೆ ಮೊತ್ತ 10 ಲಕ್ಷ ರೂ., ಮಹಿಳಾ ಹಾಲು ಉತ್ಪಾದಕರ ಸಂಘಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು 2 ಲಕ್ಷ ರೂ., ಬಿಎಂಸಿ ಸಿವಿಲ್‌ ಕಾಮಗಾರಿಗೆ 1 ಲಕ್ಷ ರೂ. ಮತ್ತು ನೂತನ ಕಟ್ಟಡ ಅನುದಾನ 3 ಲಕ್ಷ ರೂ. ವಿತರಿಸಿ ಹರೀಶ್‌ ಮಾತನಾಡಿದರು.

Advertisement

ಕೋವಿಡ್‌ 19ದಿಂದ  ರೈತರು ಬೆಳೆದಿರುವ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದು, ಇಂತಹ ಕ್ಲಿಸ್ಟಕರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ನಡೆಸುವ ರೈತರಿಗೆ ಯಾವುದೇ ತರಹ ತೊಂದರೆಯಾಗದಂತೆ ಸಕಾಲಕ್ಕೆ ಬಟವಾಡೆ ಮತ್ತು ಒಕ್ಕೂಟದಿಂದ ಸಿಗುವ  ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿ ಆಗಿದ್ದೇವೆ ಎಂದು ವಿವರಿಸಿದರು. ಸಂಘಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕಗಳನ್ನು ಅಳವಡಿಸಲು ಮತ್ತು ವಾರ್ಷಿಕ ಸಭೆಗಳಲ್ಲಿ ಬ್ಯಾನರ್‌ ಹಾಕುವಂತೆ ತಿಳಿಸಿದರು.

ಕೇಂದ್ರ ಸರ್ಕಾರದ ಆದೇಶದಂತೆ ಹಾಲು ಉತ್ಪಾದಕರು ಮತ್ತು ಸದಸ್ಯರಿಗೆ ಕೆ.ಸಿ.ಸಿ. (ಕಿಸಾನ್‌ ಕ್ರೆಡಿಟ್‌ ಕಾರ್ಡ್‌) ನೋಂದಾಯಿಸಿ ಕೊಂಡ ಆದರ ಪ್ರಯೋಜನೆಗಳನ್ನು ಪಡೆಯಲು ತಿಳಿಸಿದರು. ಶಿಬಿರದ ಉಪವ್ಯವಸ್ಥಾಪಕ ಡಾ.ಎ.ಸಿ. ಶ್ರೀನಿವಾಸಗೌಡ ವಾರ್ಷಿಕ  ಸಭೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿಸ್ತಾರಣಾಧಿಕಾರಿ ಶ್ರೀನಿವಾಸ್‌, ವಿ.ರಾಜಬಾಬು, ಎಸ್‌. ನಾಗಪ್ಪ, ಅಣ್ಣಪ್ಪ, ಭರತ್‌, ಸಮೀರ್‌ ನಾಗೇಂದ್ರ, ರಾಮಾಂಜಿನಪ್ಪ ತಾಲೂಕಿನ ಆಯ್ದ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಫ‌ಲಾನುಭವಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next