ಮದ್ದೂರು: ತಾಲೂಕಿನ ಸಾದೊಳಲು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರಿಗೆ ಶ್ರೀನಿಧಿಗೌಡ ಪ್ರತಿಷ್ಠಾನದಿಂದ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸಲಾಯಿತು.
ಶ್ರೀನಿಧಿಗೌಡ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪಿ. ಸ್ವಾಮಿ ಮಾತನಾಡಿ, ಗ್ರಾಮಗಳ ವ್ಯಾಪ್ತಿಯಲ್ಲಿ ಕೋವಿಡ್-19 ಪ್ರಕರಣಗಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಅಗತ್ಯವಿರುವ ಮಾಸ್ಕ್ಗಳನ್ನು ವಿತರಿಸುತ್ತಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ಗಳನ್ನು ಬಳಸುವ ಮೂಲಕ ಕೋವಿಡ್ ದಿಂದ ದೂರ ಉಳಿಯಲು ಮುಂದಾಗಬೇಕು ಎಂದರು.
ಬೇರೆಡೆಯಿಂದ ಗ್ರಾಮಗಳಿಗೆ ಬರುವ ವ್ಯಕ್ತಿಗಳ ಮೇಲೆ ನಿಗಾವಹಿಸಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಜ್ವರ, ನೆಗಡಿ ಮತ್ತಿತರ ರೋಗದ ಲಕ್ಷಣಗಳು ಕಂಡುಬಂದಲ್ಲಿ ಹೋಂ ಕ್ವಾರಂಟೈನ್ ಮಾಡಬೇಕು. ಕೊರೊನಾ ಹರಡದಂತೆ ಎಚ್ಚರಿಕೆ ವಹಿಸಿ, ತಪಾಸಣೆ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
18 ಸಾವಿರ ಮಾಸ್ಕ್ ವಿತರಣೆ: ಸಾದೊಳಲು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ 18 ಸಾವಿರ ಮಾಸ್ಕ್ ವಿತರಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿರುವ ಕುಟುಂಬಗಳಿಗೆ ದಿನಸಿ, ಪ್ರತಿ ಮನೆಗಳಿಗೆ ಹಾಲನ್ನುವಿತರಿಸುತ್ತಿದ್ದೇವೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಎಂಪಿಸಿಎಸ್ ಅಧ್ಯಕ್ಷ ಎಸ್.ಡಿ.ಶಿವಣ್ಣ, ಮುಖಂಡರಾದ ಶಿವರಾಜು, ಮೋಹನ್, ಕೃಷ್ಣೇಗೌಡ, ಕಾಂತರಾಜು ಹಾಜರಿದ್ದರು.