Advertisement

ಗೋಶಾಲೆಯಲ್ಲಿ ಪ್ರತಿದಿನ ಮೇವು ವಿತರಣೆ

04:59 PM Aug 06, 2019 | Suhan S |

ಕೊರಟಗೆರೆ: ಮೇವು ಬ್ಯಾಂಕಿನಲ್ಲಿ ವಾರಕ್ಕೊಮ್ಮೆ ಮೇವು ಸಿಗುತಿತ್ತು. ಗೋಶಾಲೆಯಲ್ಲಿ ಪ್ರತಿದಿನ ಮೇವು ಸಿಗಲಿದೆ ಎಂದು ತಾಪಂ ಅಧ್ಯಕ್ಷೆ ನಜೀಮಾಭೀ ತಿಳಿಸಿದರು.

Advertisement

ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಕಂದಾಯ ಮತ್ತು ಪಶು ಇಲಾಖೆಯಿಂದ ಸೋಮ ವಾರ ಏರ್ಪಡಿಸಿದ್ದ ಗೋಶಾಲೆ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯ ಕಂದಾಯ ಮತ್ತು ಪಶು ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ಗೋವಿಂದರಾಜು ಮಾತನಾಡಿ, ಹೈಕೋಟ್ ಆದೇಶ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಮೇವು ಬ್ಯಾಂಕ್‌ ಬದಲು ಗೋಶಾಲೆ ಪ್ರಾರಂಭವಾಗಿದೆ. ಜಾನುವಾರು ತಂದರಷ್ಟೇ ಮೇವು ನೀಡುತ್ತೇವೆ. ರೈತರು ವಿನಾಕಾರಣ ಗಲಾಟೆ ಮಾಡಿದರೆ ಕ್ರಮಕ್ಕೆ ಸೂಚಿ ಸುತ್ತೇನೆ ಎಂದು ಎಚ್ಚರಿಸಿದರು.

ಮೇವಿನೊಂದಿಗೆ ಅಗತ್ಯ ನೀರು, ನೆರಳು, ಪಶು ವ್ಯದ್ಯರು ಸೇರಿದಂತೆ ಎಲ್ಲ ಸೌಕರ್ಯ ಒದಗಿಸ ಲಾಗುವುದು. ಯಾವುದೇ ಕಾರಣಕ್ಕೂ ರೈತರ ಮನೆಗೆ ಮೇವು ನೀಡಲು ಸಾಧ್ಯವಿಲ್ಲ. ಗೋಶಾಲೆಯಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ ನೇರವಾಗಿ ನನ್ನನ್ನು ಭೇಟಿಯಾಗುವಂತೆ ತಿಳಿಸಿದರು.

Advertisement

ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ ಮಾತನಾಡಿ, ಗ್ರಾಪಂಗೆ ಒಂದು ಗೋಶಾಲೆ ತೆರೆದು ಮೇವು ಪೂರೈಕೆ ಮಾಡಿ. ರೈತರು 20 ಕಿ.ಮೀ ದೂರದಿಂದ ಗೋಶಾಲೆಗೆ ಬಂದು ಹೋಗಲು ಕಷ್ಟ. ನೆಪಮಾತ್ರಕ್ಕೆ ಗೋಶಾಲೆ ತೆರೆಯಲಾಗಿದೆ. ಕ್ಷೇತ್ರದ ನಾಲ್ಕು ಹೋಬಳಿ ಯಲ್ಲಿಯು ಗೋಶಾಲೆ ತೆರೆದು ರೈತರಿಗೆ ಅನುಕೂಲ ಕಲ್ಪಿಸ ಬೇಕಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ತಾಪಂ ಸದಸ್ಯ ಕೆಂಪಣ್ಣ, ಕೃಷಿ ಸಹಾಯಕ ನಿರ್ದೇಶಕ ನಾಗರಾಜು. ತೋಟಗಾರಿಕೆ ನಿರ್ದೇಶಕಿ ಪುಪ್ಪಲತಾ, ಇಒ ಶಿವ ಪ್ರಕಾಶ್‌, ಪಶು ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ, ಕಂದಾಯ ಅಧಿಕಾರಿ ಲಕ್ಷ್ಮಣ್‌, ಗ್ರಾಪಂ ಪಿಡಿಒ ಯಶೋಧ, ರೈತ ಸಂಘದ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಯುವ ಅಧ್ಯಕ್ಷ ಕೊಡ್ಲಹಳ್ಳಿ ವೆಂಕಟೇಶ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕವಿತಾ, ಮುಖಂಡರಾದ ಕೊಡ್ಲಹಳ್ಳಿ ಚಂದ್ರಶೇಖರ್‌, ಮೈಲಾರಪ್ಪ, ಎಲ್. ರಾಜಣ್ಣ, ಚಿಕ್ಕರಂಗಯ್ಯ, ರಂಗಣ್ಣ, ಉಮಶಂಕರ್‌, ಜಯರಾಂ, ನರಸಿಂಹಮೂರ್ತಿ ಇತರರು ಇದ್ದರು.

ಅನಾವೃಷ್ಟಿಗೂ ಸಹಾಯ ಮಾಡಬೇಕಿದೆ:

ಹಿಂದೆ ಶಾಸಕನಾಗಿಲ್ಲದಿದ್ದರೂ ರಾಸುಗಳ ಮೇವಿಗೆ ಯಾವುದೇ ತೊಂದರೆ ಬಾರದಂತೆ ಎಚ್ಚರ ವಹಿಸಿದ್ದೆ ಎಂದು ಶಾಸಕ ಬಿ.ಸತ್ಯನಾರಾಯಣ್‌ ತಿಳಿಸಿದರು. ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಗಂಡಿಹಳ್ಳಿಯಲ್ಲಿ ಗೋಶಾಲೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬರಗಾಲ ಬಂದಿದೆ. ಕೆಲವು ಕಡೆ ರೈತರು ಇನ್ನೂ ಬಿತ್ತನೆ ಆರಂಭಿಸಿಲ್ಲ. 1200 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಸರ್ಕಾರ ಅತೀವೃಷ್ಟಿಗೂ ಸಹಾಯ ಮಾಡಬೇಕು. ಅನಾವೃಷ್ಟಿಗೂ ಸಹಾಯ ಮಾಡಬೇಕಾದ ಪರಿಸ್ಥಿತಿ ಬಂದಿದೆ. ರಾಸುಗಳಿಗೆ ಮೇವಿನ ಅವಶ್ಯಕತೆ ಇರುವುದನ್ನು ಗಮನಿಸಿ ತಾಲೂಕಿನ ಗಡಿಭಾಗ ಹುಲಿಕುಂಟೆ ಹೋಬಳಿಯ ಗಂಡಿಹಳ್ಳಿ ಗ್ರಾಮದಲ್ಲಿ ಗೋಶಾಲೆ ಆರಂಭಿಸಿದ್ದು, ಮತ್ತೂಂದು ಗೋಶಾಲೆ ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ಜಿಪಂ ಸದಸ್ಯ ರಾಮಕೃಷ್ಣಪ್ಪ ಮಾತನಾಡಿ, ತಾಲೂಕಿಗೆ ಒಂದೇ ಗೋಶಾಲೆ ಕೊಡಲು ಅವಕಾಶವಿತ್ತು. ಶಾಸಕರ ಮನವಿ ಮೇರೆಗೆ ಪಟ್ಟನಾಯಕನಹಳ್ಳಿಗೆ ಮತ್ತೂಂದು ಗೋಶಾಲೆ ಕಲ್ಪಿಸಲು ಅನುಮತಿ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಹಿಮಾ ಜಂಜಂ, ಇಒ ಮೋಹನ್‌ ಕುಮಾರ್‌, ತಾಲೂಕು ಪಶು ವೈದ್ಯಾಧಿಕಾರಿ ಡಾ.ರಂಗನಾಥ್‌, ಉಪತಹಶೀಲ್ದಾರ್‌ ಚಿದಾನಂದ್‌, ಮೇಲ್ಕುಂಟೆ ಪಶು ವೈದ್ಯಾಧಿಕಾರಿ ನಾಗೇಶ್‌, ಗ್ರಾಪಂ ಸದಸ್ಯ ದಯಾನಂದ್‌, ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಡಿ.ಎನ್‌. ಪರಮೇಶ್‌ ಗೌಡ, ಗ್ರಾಮಲೆಕ್ಕಾಧಿಕಾರಿಗಳಾದ ಪ್ರತಿಭಾ, ಆಯಿಸಾ, ಭೀಮ್‌ ಕುಮಾರ್‌, ರಾಜೇಂದ್ರ, ಪಿಡಿಒ ಸೌಮ್ಯವತಿ, ಡಾ.ನಂದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next