Advertisement

ಕನ್ನಡಿಗ ಉದ್ಯಮಿಗಳಿಂದ 21,000 ಜನರಿಗೆ ಆಹಾರ ವಿತರಣೆ

05:33 PM Oct 04, 2020 | Suhan S |

ಮುಂಬಯಿ, ಅ. 3: ವಸಾಯಿಯ ರುದ್ರಶೆಲ್ಟರ್‌ ಗ್ರೂಪ್‌ ಮತ್ತು ಫಾರ್ಮ್ ಹೌಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ವತಿಯಿಂದ ವಸಾಯಿ-ವಿರಾರ್‌ ಮಹಾನಗರ ಪಾಲಿಕೆಯ ಸಹಾಯದಿಂದ ಮೇಘಾ ಕಮ್ಯೂನಿಟಿ ಕಿಚನ್‌ ಮೂಲಕ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಪರಿಸರದ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ದಿನನಿತ್ಯ 21,000ಕ್ಕೂ ಹೆಚ್ಚು ಮಂದಿಗೆ ಆಹಾರ ವಿತರಿಸಲಾಗಿದೆ.

Advertisement

ವಸಾಯಿ-ವಿರಾರ್‌ ಮೇಯರ್‌ ಪ್ರವೀಣ್‌ ಸಿ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉದ್ಯಮಿಗಳಾದ ಪಾಂಡು ಎಲ್‌. ಶೆಟ್ಟಿ, ಹರೀಶ್‌ ಪಾಂಡು ಶೆಟ್ಟಿ, ಭರತ್‌ ಪಾಂಡು ಶೆಟ್ಟಿ ಮೊದಲಾದವರ ಸಹಕಾರದಿಂದ ಈ ಯೋಜನೆಯನ್ನು ಆಯೋಜಿಸಲಾಗಿತ್ತು. ಶೆಲ್ಟರ್‌ ಗ್ರೂಪ್‌ನ ಹರೀಶ್‌ ಪಾಂಡು ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿ, ನಮ್ಮನ್ನು ಈ ಮಟ್ಟಕ್ಕೆ ತಂದ ನಮ್ಮ ಪರಿಸರದ ಜನರು ಕಷ್ಟದ ಪರಿಸ್ಥಿತಿ ಎದುರಿಸುವಾಗ ಅವರಿಗೆ ಸಹಕರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ಈ ಪರಿಸರದಲ್ಲಿ ಯಾರೂಹಸಿವಿನಿಂದಿರಬಾರದು. ಹೊಟೇಲ್‌ ನೌಕರರು ಕೂಡ ಇಂದು ಅನನುಕೂಲ ಎದುರಿಸು ತ್ತಿದ್ದು, ಈ ಸಮಯದಲ್ಲಿ ಅವರಿಗೂಸಹಕರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಈ ಸಂದಿಗ್ಧ ಸಂದರ್ಭ ಅಶಕ್ತ ಕುಟುಂಬಗಳಿಗೆ ಅನ್ನದಾನ ನೀಡುತ್ತಿರುವ ಪಾಂಡು ಶೆಟ್ಟಿ ಅವರ ಪರಿವಾರದ ಸೇವಾ ಕಾರ್ಯ ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಶೆಲ್ಟರ್‌ ಗ್ರೂಪ್‌ನ ರವಿನಾಥ್‌ ಶೆಟ್ಟಿ ತೋನ್ಸೆ, ಬಂಟರ ಸಂಘದ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಪಕ್ಕಳ, ಸಂಚಾಲಕ ಶಶಿಧರ್‌ ಶೆಟ್ಟಿ ಇನ್ನಂಜೆ, ಎಂಎಂ ಹೊಟೇಲ್‌ನ ಹರೀಶ್‌ ಶೆಟ್ಟಿ ಗುರ್ಮೆ, ವಸಾಯಿ ತಾಲೂಕಿನ ಸಂಘ-ಸಂಸ್ಥೆಗಳು, ವಸಾಯಿ ತಾಲೂಕುಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಮೊದಲಾದವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next