Advertisement

ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್‌ ವಿತರಣೆ

07:02 AM May 27, 2020 | Suhan S |

ಹೂವಿನಹಿಪ್ಪರಗಿ: ಎರಡು ತಿಂಗಳಿನಿಂದ ಕೋವಿಡ್ ವಿರುದ್ಧ ತಮ್ಮ ಜೀವನದ ಹಂಗು ತೊರೆದು ಮನೆ ಮಠ ಬಿಟ್ಟು ಹಗಲು ರಾತ್ರಿ ಎನ್ನದೆ ಹೊರಾಡುತ್ತಿರುವ ಕೋವಿಡ್ ಸೈನಿಕರಿಗೆ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಹಾರ ಕಿಟ್‌ ವಿತರಿಸಿದರು.

Advertisement

ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಮತ್ತು ಬೂದಿಹಾಳ ಗ್ರಾಮದಲ್ಲಿ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಬದುಕು ನಡೆಸಲು ಮಕ್ಕಳನ್ನು ಲೆಕ್ಕಿಸದೆ ಪರ ರಾಜ್ಯಕ್ಕೆ ಸಂಸಾರದ ಬಂಡಿ ಕಟ್ಟಿಕೊಂಡು ಹೋಗಿ ಬಂದವರಿಗೆ ಈಗ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಸರಕಾರ ಅದಕ್ಕೆ ತಕ್ಕ ಸಿದ್ಧತೆ ಮಾಡಿ ಅವರ ಆಹಾರ ಜತೆಗೆ ಆರೋಗ್ಯ ಸಹ ಕಾಪಾಡುತ್ತಿದೆ ಎಂದರು.

ರೇಷನ ಕಾರ್ಡ್‌ ಇಲ್ಲ ಎಂದರೆ ಅಂತವರು ನಮ್ಮ ಗ್ರಾಮ ಲೆಕ್ಕಾ ಧಿಕಾರಿಗಳ ಬಳಿ ತಮ್ಮ ಅಗತ್ಯ ದಾಖಲಾತಿಯೊಂದಿಗೆ ಸಂರ್ಪಕಿಸಲು ತಿಳಿಸಿದ ಅವರು, ನಾವು ಅದಕ್ಕೆ ಸರಕಾರದ ಮಟ್ಟದಲ್ಲಿ ಈಗಾಗಲೇ ಪಡಿತರ ನೀಡಬೇಕು ಎಂದು ಚರ್ಚಿಸಲಾಗಿದೆ ಎಂದರು.

ಮೇ 31ರ ಬಳಿಕ ಲಾಕ್‌ಡೌನ್‌ ಇನಷ್ಟು ಸಡಿಲಗೊಳಿಸಿ ಎಲ್ಲ ಕೆಲಸ ಕಾರ್ಯಗಳನ್ನು ನಡೆಯುವಂತೆ ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಆರೋಗ್ಯವಂತರಾಗಿ ಜೀವನ ನಡೆಸೋಣ ಎಂದರು.

ಹುಣಿಶ್ಯಾಳ, ಪಿ.ಬಿ. ಕುದರಿ ಸಾಲವಾಡಗಿ, ಕಾಮನಕೇರಿ, ದಿಂಡವಾರ, ಸಾತಿಹಾಳ, ಬೈರವಾಡಗಿ, ಯಾಳವಾರ, ವಡವಡಗಿ ಗ್ರಾಮಗಳಲ್ಲಿ ದಿನಸಿ ಕಿಟ್‌ ವಿತರಿಸಲಾಯಿತು. ಬಿಜೆಪಿ ಮಂಡಲ ಕಾರ್ಯದರ್ಶಿ ರಮೇಶ ಮಸಬಿನಾಳ, ಭೀಮನಗೌಡ ಸಿದರೆಡ್ಡಿ, ಸುರೇಶಗೌಡ ಪಾಟೀಲ ಸಾಸನೂರ, ಸಾಹೇಬಗೌಡ ಪಾಟೀಲ ಸಾಸನೂರ, ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಬಸವರಾಜ ಅಸ್ಕಿ, ಓತಗೇರಿ, ಬಿಇಒ ಬಸವರಾಜ ತಳವಾರ, ತಾಪಂ ಇಒ ಭಾರತಿ ಚಲುವಯ್ಯ, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next