Advertisement

ಪನ್ವೆಲ್‌ ಪರಿಸರದ ಎರಡು ಆಶ್ರಮಗಳಿಗೆ ಆಹಾರ ಸಾಮಗ್ರಿ ವಿತರಣೆ

02:39 PM Sep 08, 2021 | Team Udayavani |

ಪನ್ವೆಲ್‌: ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅವರ ಆಶಯದಂತೆ ಬಂಟರ ಸಂಘ ಮುಂಬಯಿ ಇದರ ಪೂರ್ವ ವಲಯ ಸಮನ್ವಯಕ ಸುಬ್ಬಯ್ಯ ಶೆಟ್ಟಿಯವರ ನಿರ್ದೇಶನದಲ್ಲಿ ಜನಪರ ಕಾರ್ಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯು ಕಾರ್ಯಪ್ರವೃತ್ತಿಯಲ್ಲಿದೆ.

Advertisement

ಸುಬ್ಬಯ್ಯ ಶೆಟ್ಟಿ ನೇತೃತ್ವದಲ್ಲಿ ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರಿ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳ ಕೂಡುವಿಕೆಯಲ್ಲಿ ಆ. 29ರಂದು ಪನ್ವೆಲ್‌ನಿಂದ 15 ಕಿ. ಮೀ. ದೂರದಲ್ಲಿರುವ ನೆರೆ ವಿಲೇಜ್‌ನ ಶುಭಂ ವೃದ್ಧಾಶ್ರಮಕ್ಕೆ ಮತ್ತು ಪನ್ವೆಲ್‌ನ ಕೊಪೋಲಿ ವಿಲೇಜ್‌ನಲ್ಲಿರುವ ಬಂಟ ಬಾಂಧವರ ಸಂಚಾಲಿತ ಆಶ್ರಯ ಫೌಂಡೇಶನ್‌ ಸಂಸ್ಥೆಯ ವೃದ್ಧಾಶ್ರ ಮಗಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭ ಅಲ್ಲಿರುವ ನಿರಾಶ್ರಿತರಿಗೆ ಒಂದು ತಿಂಗಳಿಗೆ ಬೇಕಾಗುವ ಎಲ್ಲ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿ, ಅಲ್ಲಿರುವ ಎಲ್ಲ ವಯೋವೃದ್ಧರಿಗೆ ಮತ್ತು ಮಾನಸಿಕ ಅಸ್ವಸ್ಥರಿಗೆ ಫಲವಸ್ತುಗಳನ್ನು ನೀಡಿ ಸಂತೈಸಲಾಯಿತು.

ಇದನ್ನೂ ಓದಿ:ವೈರಲ್ ವೀಡಿಯೋ | ಹಜೀಬ್ ಇಲ್ಲದ ಮಹಿಳೆ, ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ : ತಾಲಿಬಾನ್ ಉಗ್ರ

ಈ ಸಂದರ್ಭ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ ಉಪ ಕಾರ್ಯಾಧ್ಯಕ್ಷ ಭಾಸ್ಕರ್‌ ಶೆಟ್ಟಿ ದಕ್ಷಿಣ್‌, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ಜತೆ ಕೋಶಾಧಿಕಾರಿ ಭಾಸ್ಕರ್‌ ಶೆಟ್ಟಿ ಪದ್ಮಾ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅನಿಲ್‌ ಶೆಟ್ಟಿ ಪಾಂಗಾಳ, ಪನ್ವೆಲ್‌ ವಲಯದ ಮುಖ್ಯಸ್ಥ ಗುರು ಶೆಟ್ಟಿ ಪನ್ವೆಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಸಿ. ಶೆಟ್ಟಿ, ಮಹಿಳಾ ಸಲಹಾ ಸಮಿತಿ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ಗೀತಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ನಿಶ್ಮಿತಾ ಎಸ್‌. ಶೆಟ್ಟಿ ಹಾಗೂ ಯುವ ವಿಭಾಗದ ಶೈನಿಷಿ ಶೆಟ್ಟಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next