Advertisement

ರಸಗೊಬ್ಬರ ವಿತರಣೆ, ದರಕ್ಕೆ ಶೀಘ್ರ ಕಾಯ್ದೆ?

07:47 PM Feb 16, 2022 | Team Udayavani |

ನವದೆಹಲಿ: ರಸಗೊಬ್ಬರ ವಿತರಣೆ, ಅದರ ಗುಣಮಟ್ಟ, ದರ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾಯ್ದೆ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Advertisement

ಕೇಂದ್ರ ರಸಗೊಬ್ಬರ ಸಚಿವಾಲಯ ದೇಶವಾಸಿಗಳಿಂದ ಅದಕ್ಕೆ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಫೆ.26ರ ಒಳಗಾಗಿ ಅದನ್ನು ಸಲ್ಲಿಸುವಂತೆಯೂ ಸಚಿವಾಲಯ ಮನವಿ ಮಾಡಿದೆ.

ಏಕೀಕೃತ ಘಟಕ ಪೋಷಕಾಂಶ ನಿರ್ವಹಣಾ ವಿಧೇಯಕ 2022 (ಇಂಟೆಗ್ರೇಟೆಡ್‌ ಪ್ಲಾಂಟ್‌ ನ್ಯೂಟ್ರಿಶಿಯನ್‌ ಮ್ಯಾನೇಜ್‌ಮೆಂಟ್‌ ಬಿಲ್‌ 2022) ಅನ್ನು www.fert.nic.in/node/2170 ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅದನ್ನು ನೋಡಿ ಸಲಹೆ, ಅಭಿಪ್ರಾಯಗಳನ್ನು Under Secretary (Fertilizers Act), Department of Fertilizers, Room No. 222, A-wing, Shastri Bhawan, New Delhi 110001. ಅಂಚೆ ಮೂಲಕ ಮತ್ತು ಇ-ಮೇಲ್‌ ಮೂಲಕusfpp-fert@nic.in ಗೆ ಸಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ.

ವಿಧೇಯಕದ ಪ್ರಮುಖಾಂಶ
– ಬಯೋ ರಸಗೊಬ್ಬರ, ಸಾವಯವ ಗೊಬ್ಬರ, ನ್ಯಾನೋ ಫ‌ರ್ಟಿಲೈಸರ್‌ಗಳ ಬಳಕೆ.
– ದೇಶದಲ್ಲಿ ರಸಗೊಬ್ಬರ ಉತ್ಪಾದನೆ, ವಿತರಣೆ ಮತ್ತು ದರ ನಿಗದಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಆ ಕ್ಷೇತ್ರದ ಮಾರಾಟ ವ್ಯವಸ್ಥೆ ಉತ್ತಮ ಪಡಿಸುವ ಗುರಿ.
– ಸರಿಯಾದ ರೀತಿಯಲ್ಲಿ ರಸಗೊಬ್ಬರಗಳ ವಿತರಣೆ ಮಾಡುವ ಉತ್ಪಾದಕ, ಡೀಲರ್‌, ಖರೀದಿದಾರರಿಗೆ ಅನ್ಯಾಯವಾಗದಂತೆ ಬೆಲೆ ನಿಯಂತ್ರಣಕ್ಕೆ ಪರಿಹಾರೋಪಾಯಗಳು.
– ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾರಾಟ ಬೆಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ಡೀಲರ್‌, ಮಾರಾಟಗಾರರ ಮೇಲೆ ನಿಯಂತ್ರಣ.

Advertisement

Udayavani is now on Telegram. Click here to join our channel and stay updated with the latest news.

Next