Advertisement

ವಿವಿಧೆಡೆ ದಿನನಿತ್ಯದ ಆಹಾರ ಸಾಮಗ್ರಿ ಕಿಟ್‌ ವಿತರಣೆ

09:00 PM Mar 30, 2020 | Sriram |

ಬೈಂದೂರು: ದೇಶಾದ್ಯಂತ ಕೋವಿಡ್‌ 19 ವೈರಸ್‌ ಕಾರಣದಿಂದಾಗಿ 21 ದಿನದ ಲಾಕ್‌ಡೌನ್‌ ಆದ ಪರಿಣಾಮ ದಾವಣಗೆರೆಯ ಕೂಲಿ ಕಾರ್ಮಿಕರ 2 ಕುಟುಂಬಗಳಿಗೆ ಆಹಾರವಿಲ್ಲದೆ ಶಿರೂರಿನ ದಾಸನಾಡಿ ಮತ್ತು ಮುದ್ರಮಕ್ಕಿಯಲ್ಲಿ ವಾಸವಾಗಿದ್ದ ಎರಡು ಕುಟುಂಬಳಿಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

Advertisement

ಅಧ್ಯಕ್ಷ ಹಸನ್‌ ಮಾವಡ್‌,ಬೈಂದೂರು ಠಾಣಾಧಿಕಾರಿ ಸಂಗೀತಾ,ಜಿಲ್ಲಾ ಸಮಿತಿ ಸದಸ್ಯ ತಬ್ರೇಜ್‌ ನಾಗೂರು,ಠಾಣಾ ಸಿಬಂದಿ ಅಶೋಕ,ಸಂತೋಷ್‌,ನಾಗೇಶ್‌, ಸುಧೀರ್‌ ಹಾಜರಿದ್ದರು.

ಉಪ್ಪುಂದ ಶ್ರೀವರಲಕ್ಷ್ಮೀ
ಚಾರಿಟೆಬಲ್‌ ಟ್ರಸ್ಟ್‌
ಬೈಂದೂರು: ಬಿಜೂರು,ಉಪ್ಪುಂದ,ಎಳಜಿತ್‌ ಮುಂತಾದ ಭಾಗಗಳ ಬಡ ಕುಟುಂಬಕ್ಕೆ ಶ್ರೀವರಲಕ್ಷ್ಮೀ ಚಾರಿಟೆಬಲ್‌ ಟ್ರಸ್ಟ್‌ ಉಪ್ಪುಂದ ಇದರ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಶ್ರೀವರಲಕ್ಷ್ಮೀ ಚಾರಿಟೆಬಲ್‌ ಟ್ರಸ್ಟ್‌ ಉಪ್ಪುಂದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ,ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ತಾ.ಪಂ ಸದಸ್ಯ ಜಗದೀಶ ದೇವಾಡಿಗ ಮೊದಲಾದವರು ಹಾಜರಿದ್ದರು.

ಬೈಂದೂರು ಸಾಗರ್‌ ಕ್ರೆ.ಕೋ.ಆ. ಸೊಸೈಟಿ
ಬೈಂದೂರು: ಸಾಗರ್‌ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಇದರ ವತಿಯಿಂದ ಕೋವಿಡ್‌ 19 ಆಹಾರ ಸಾಮಗ್ರಿ ಮತ್ತು ಔÐಧ ಖರೀದಿಗಾಗಿ ಐವತ್ತು ಸಾವಿರ ರೂಪಾಯಿ ಧನಸಹಾಯದ ಚೆಕ್‌ನ್ನು ಸಂಸ್ಥೆಯ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಬೈಂದೂರು ತಹಶೀಲ್ದಾರ ಬಿ.ಪಿ ಪೂಜಾರ್‌ ರವರಿಗೆ ಹಸ್ತಾಂತರಿಸಿದರು.

Advertisement

ಉಪಾಧ್ಯಕ್ಷ ಎಸ್‌.ರಾಜು ಪೂಜಾರಿ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಶೇಖರ ಪೂಜಾರಿ ಹಾಜರಿದ್ದರು.

ಉಪ್ಪುಂದ ಶ್ರೀ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌
ಬೈಂದೂರು: ಶ್ರೀಮೂಕಾಂಬಿಕಾ ಗ್ರಾಮೀಣಾಭಿವೃದ್ದಿ ಟ್ರಸ್ಟ್‌ ಉಪ್ಪುಂದ ಇದರ ವತಿಯಿಂದ ಬೈಂದೂರು ವಸತಿ ಗ್ರಹದಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಚೇರ್‌ಮನ್‌ ಬೇಬಿ ಕೊಠಾರಿ,ಬೈಂದೂರು ತಹಶೀಲ್ದಾರ ಬಿ.ಪಿ ಪೂಜಾರ್‌,ಟ್ರಸ್ಟಿ ರಾಮದಾಸ್‌ ಉಪ್ಪುಂದ,ವಕೀಲ ರಾಘವೇಂದ್ರ ಉಪ್ಪುಂದ,ಸಲಹೆಗಾರ ಸುಬ್ರಹ್ಮಣ್ಯ ಕುಮಾರ್‌, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಬಿಲ್ಲವ ಹಾಜರಿದ್ದರು.

ಇನ್ನಾ: ಲಾಕ್‌ಡೌನ್‌
ಸಂಕಷ್ಟದಲ್ಲಿದ್ದವರಿಗೆ ನೆರವು
ಬೆಳ್ಮಣ್‌: ಕೋವಿಡ್‌ 19 ಕಾರಣಕ್ಕಾಗಿ ಲಾಕ್‌ಡೌನ್‌ ನಡೆದ ಪರಿಣಾಮ ದೈನಂದಿನ ವಸ್ತುಗಳಿಗಾಗಿ ಚಡಪಡಿಸುತ್ತಿರುವ ಅಶಕ್ತ ಕುಟುಂಬಗಳಿಗೆ ಉದ್ಯಮಿ, ಇನ್ನಾ ಮೂಲದ ಪಿ. ರಾಮದಾಸ ಮಡ್ಮಣ್ಣಾಯ ಅವರ ಸಂಸ್ಥಾಪಕತ್ವದ ಭಾರ್ಗವ ಟ್ರಸ್ಟ್‌ ವತಿಯಿಂದ ಹತ್ತು ದಿನಗಳಿಗೆ ಬೇಕಾಗುವಷ್ಟು ಜೀವನಾವಶ್ಯಕ ಸಾಮಗ್ರಿಗಳ ಕಿಟ್‌ ವಿತರಣೆ ಮಂಗಳವಾರ ನಡೆಯಿತು.

ಇನ್ನಾದ 10 ಆಯ್ದ ಕುಟುಂಬಗಳಿಗೆ ಈ ನೆರವಿನ ವಿತರಣೆ ನಡೆದು ಪಿ.ರಾಮದಾಸ್‌ ಅವರು ಹುಟ್ಟಿ ಬೆಳೆದ ಪರಿಸರದ ಸುಖೇಶ್‌ ಮತ್ತವರ ತಾಯಿಗೆ ಮೊದಲ ಕಿಟ್‌ ನೀಡಲಾಯಿತು.ಇನ್ನಾ ಮುದ್ದಾಣುವಿನ ಭಾರ್ಗವ ಟ್ರಸ್ಟ್‌ ನ ಕಚೇರಿಯ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಅರ್ಚಕ ರಾಜ ಭಟ್‌, ಮುಂಬೈ ಉದ್ಯಮಿ ಏಕನಾಥ ಪ್ರಭು, ಭಾರ್ಗವ ಟ್ರಸ್ಟ್‌ ನ ಸಿಬಂದಿ ರಾಜು, ಮುದ್ದಾಣು ದೇಗುಲದ ಪ್ರಬಂಧಕ ಸತೀಶ್‌ ಕುಲಾಲ್‌, ಮುಂಡ್ಕೂರು ಪಂಚಾಯತ್‌ ಸದಸ್ಯ ರಘುವೀರ ಶೆಣೈ ಮತ್ತಿತರರಿದ್ದರು.

ಕುತ್ಯಾರು: ಮನೆಗೆ ತೆರಳಿ ಆಹಾರ ಸಾಮಗ್ರಿ ವಿತರಣೆ
ಶಿರ್ವ: ಕಳತ್ತೂರು ಜನಸಂಪರ್ಕ ಜನಸೇವಾ ವೇದಿಕೆ ಮತ್ತು ಸಮಾಜ ಸೇವಾ ವೇದಿಕೆಯ ವತಿಯಿಂದ ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಂದ್ರಪುರ ಶೇಡಿಕಟ್ಟೆ ನಿವಾಸಿ ಇಸ್ಮಾಯಿಲ್‌ ಅವರ ಮನೆಗೆ ತೆರಳಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಸುಮಾರು 18 ಸದಸ್ಯರಿರುವ ಕುಟುಂಬದ ಪರಿಸ್ಥಿತಿ ಹದಗೆಟ್ಟಿದ್ದು ಶಿರ್ವ ಪೊಲೀಸರ ಸೂಚನೆಯಂತೆ ವೇದಿಕೆಯ ಪದಾಧಿಕಾರಿಗಳು ಸುಮಾರು 50 ಕೆ.ಜಿ. ಕುಚ್ಚಲಕ್ಕಿ, ಸಕ್ಕರೆ,ಚಾಪುಡಿ ಮತ್ತಿತರ ದಿನಸಿ ಸಾಮಾಗ್ರಿಗಳ ಕಿಟ್‌ಅನ್ನು ವಿತರಿಸಿದರು.

ಜನಸಂಪರ್ಕ ಜನಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ ಕಳತ್ತೂರು,ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮಹಮ್ಮದ್‌ ಫಾರೂಕ್‌ ಚಂದ್ರನಗರ,ವೇದಿಕೆಯ ಸಂಚಾಲಕ ದಿವಾಕರ ಡಿ. ಶೆಟ್ಟಿ ಕಳತ್ತೂರು ಹಾಗೂ ಕುತ್ಯಾರು-ಕಳತ್ತೂರು ಗ್ರಾ.ಪಂ. ಸದಸ್ಯ ರಾಜೇಶ್‌ ಕುಲಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next