ರಾಮನಗರ: ಕೊನೆಗೂ ಎಚ್ಚೆತ್ತ ತಾಲೂಕು ಆಡಳಿತ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡುವ ಮನಸ್ಸು ಮಾಡಿದ್ದಾರೆ. ಹೀಗೆ ಮೊದಲ ಬಾರಿ ಆದ ನೆರೆ ಪರಿಹಾರ ಮೊತ್ತವನ್ನು ಆರ್ ಟಿಜಿಎಸ್ ಸಮಸ್ಯೆ ಪರಿಹರಿಸಿ ನೀಡಬೇಕಿದೆ. ಎರಡನೇ ಭಾರಿ ನೆರೆ ಬಂದರೂ ಪರಿಹಾರ ತಲುಪಿಲ್ಲ ಎನ್ನುವ ಬಗ್ಗೆ ಉದಯವಾಣಿ ಸುದ್ದಿ ಬಿತ್ತರಿಸಿದ್ದು, ನೇರವಾಗಿ ಪರಿಹಾರ ಸಿಗುವಂತಾಗಿದೆ.
ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ್ಕೆ ಮತ್ತಷ್ಟು ಮನೆಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲದೆ, ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಘೋಷಣೆಯಾದ ಪರಿಹಾರ ಮೊತ್ತ ಖಾತೆ ಸೇರಿಲ್ಲ ಎಂದು ನಿರಂತರವಾಗಿ ಉದಯವಾಣಿ ಸುದ್ದಿಬಿತ್ತರಿಸಿತ್ತು. ಅಲ್ಲದೆ, ನೆರೆ ಪರಿಹಾರ ನೀಡಲಾಗಿದೆ ಎಂದು ಹೇಳುತ್ತಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಪರಿಹಾರ ತಲುಪದ ಬಗ್ಗೆ ಉದಯವಾಣಿ ಸುದ್ದಿ ಬಿತ್ತರಿಸಿತ್ತು. ಎಚ್ಚೆತ್ತ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.
3 ದಿನದಿಂದ ಮಳೆ: ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಆಗಸ್ಟ್‌ನಲ್ಲಿ ಸಂಭವಿಸಿದ್ದ ಅನಾಹುತಗಳನ್ನೇ ಸರಿ ಮಾಡಲಾಗದ ಪರಿಸ್ಥಿತಿಯಲ್ಲಿ ಮತ್ತೂಮ್ಮೆ ವರುಣಾರ್ಭಟಕ್ಕೆ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಹಲವು ಮಂದಿ ಸಮಸ್ಯೆ ಎದುರಿಸುವಂತಾಗಿದೆ. ಮೊದಲ ನೆರೆ ಪರಿಹಾರ ಹಲವು ಮಂದಿಗೆ ಸೇರಿಲ್ಲ. ನೆಪವೊಡ್ಡಿ ನೆರೆ ಸಂತ್ರಸ್ತರನ್ನ ಕಚೇರಿಗೆ ಅಲೆಯುವಂತೆ ಮಾಡಲಾಗುತ್ತಿತ್ತು. ಅಲ್ಲದೆ, ಸಿಎಂ ಹೇಳಿದ್ದರೂ ದಾಖಲೆ ನೆಪವೊಡ್ಡಿ ಅಧಿಕಾರಿಗಳಿಗೆ ಎಷ್ಟು ಕೇಳಿದರೂ ಖಾತೆಗೆ ಹಣ ವರ್ಗಾವಣೆ ಮಾಡುವ ಆಸಕ್ತಿ ಇರಲಿಲ್ಲ. ಎರಡನೇ ಭಾರಿ ನೆರೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಂಡು ನೆರೆಗೂ ಮುನ್ನವೇ ಉದಯವಾಣಿ ಸುದ್ದಿ ಬಿತ್ತರಿಸಲಾಗಿತ್ತು.
ಮುಂಜಾಗೃತಾ ಕ್ರಮಗಳ ಬಗ್ಗೆ ಸ್ಥಳೀಯರ ಆತಂಕ ವ್ಯಕ್ತಪಡಿಸಿತ್ತು. ಇದೀಗ ಸರ್ವೆ ಮಾಡಿಸಿ, ಒಂದೇ ದಿನಕ್ಕೆ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿದ್ದಾರೆ. ತಹಶೀಲ್ದಾರ್ ಎಂ.ವಿಜಯ್ ಕುಮಾರ್ ನೇತೃತ್ವದಲ್ಲಿ ಸರ್ವೆ ನಡೆದಿದ್ದು, ಸಂತ್ರಸ್ತರಿಗೆ ಪರಿಹಾರದ ತಲಾ 10 ಸಾವಿರ ರೂ. ನೀಡಲಾಗಿದೆ.
ಆಗಸ್ಟ್‌ನಲ್ಲಿ ಆಗಿದ್ದ ನೆರೆ ಸರ್ವೆ ಮಾಡಿ ಅರ್ಹರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮಾಡುವಂತೆ ಚೆಕ್ ನೀಡಲಾಗಿತ್ತು. ತಾಂತ್ರಿಕ ತೊಂದರೆಯಿಂದ ಹಣ ಹೋಗಿರಲಿಲ್ಲ. ಇದೀಗ ನೇರವಾಗಿ ಚೆಕ್ ನೀಡಲು ತೀರ್ಮಾನಿಸಿದ್ದು, ನಾವೇ ಎಲ್ಲರಿಗೂ ಚೆಕ್ ವಿತರಿಸು ತ್ತಿದ್ದೇವೆ. ಸಂತ್ರಸ್ತರಿಗೆ ಹಣ ವರ್ಗಾಯಿಸುವ ಕಾರ್ಯ ಪ್ರವೃತ್ತರಾಗಿದ್ದೇವೆ. ಲೋಪವಾಗದಂತೆ ಕ್ರಮವಹಿಸಿದೆ
. – ಎಂ. ವಿಜಯ್ ಕುಮಾರ್, ತಹಶೀಲ್ದಾರ್, ರಾಮನಗರ
ಮೊದಲ ಭಾರಿ ಮಳೆಯಲ್ಲಿ ನೀರು ಬಂದಿ ತ್ತು. ನಮಗೆ ಪರಿಹಾರ ಸಿಕ್ಕಿಲ್ಲ. ಎರಡು ದಿನ ದಲ್ಲಿ ಮಾಡಿಸಿಕೊಡುವುದಾಗಿ ತಹಶೀಲ್ದಾರ್ ಹೇಳಿ ದ್ದಾರೆ. ಅಲ್ಲದೆ, ಈಗ ಮತ್ತೆ ಮನೆಗೆ ನೀರು ನುಗ್ಗಿದೆ
. – ನಿರ್ಮಲ, ಚನ್ನತಿಮ್ಮಯ್ಯ ಅರ್ಕೇಶ್ವರ ಕಾಲೋನಿ
ಎರಡನೇ ಭಾರಿಯೂ ನೆರೆಯಾಗಿದ್ದ ಮನೆಗಳ ಹಲವು ಮಂದಿಗೆ ಮೊದಲ ಸಲದ ನೆರೆ ಹಣ ತಲುಪದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ತಕ್ಷಣವೇ ಹಣ ಬಿಡುಗಡೆಯಾಗಿದೆ. ಉದಯವಾಣಿ ಪತ್ರಿಕೆ ನಮ್ಮ ನೋವಿಗೆ ಧನಿಯಾಗಿ ಕೆಲಸ ಮಾಡಿದೆ.
– ಕೊತ್ತೀಪುರ ಗೋವಿಂದರಾಜು, ಡಿಎಸ್‌ಎಸ್ ಜಿಲ್ಲಾಧ್ಯಕ್ಷ