Advertisement

ನಿತ್ಯ 50 ಸಾವಿರ ಪ್ಯಾಕೇಟ್‌ ಹಾಲು ವಿತರಣೆ

06:05 PM Apr 12, 2020 | mahesh |

ತುಮಕೂರು: ಕೋವಿಡ್-19 ಮಹಾಮಾರಿಯಿಂದ ಇಡೀ ದೇಶ ಲಾಕ್‌ ಡೌನ್‌ ಆಗಿದೆ, ಇಂಥ ವೇಳೆಯಲ್ಲಿ ರಾಜ್ಯ ಸರ್ಕಾರ ಕೊಳಚೆ ಪ್ರದೇಶದ ಜನರಿಗೆ ನಂದಿನಿ ಹಾಲು ವಿತರಣೆ ಮಾಡುತ್ತಿರುವುದರಿಂದ ಕೊಳಚೆ ಪ್ರದೇಶದ ಮಕ್ಕಳು ಹಾಲು ಕುಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬಡವರಿಗೆ ನೀಡುವ ಹಾಲನ್ನೂ ಕೆಲವು ಕಡೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿದೆ. ಇನ್ನೂ ಕೆಲವು ಕಡೆ ಬಡವರಿಗೆ ಹಾಲು ದೊರೆಯುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಕೊಳಚೆ ನಿವಾಸಿಗಳು ಹಾಗೂ ನಿರ್ಗತಿಕರು ಮತ್ತು
ಕಡುಬಡವರಿಗೆ ಉಚಿತವಾಗಿ ಹಾಲನ್ನು ವಿತರಿಸಲಾಗುತ್ತಿದೆ.

Advertisement

ಜಿಲ್ಲೆಯ ಕೊಳಚೆ ಪದೇಶಗಳ ಜನರು ಲಾಕ್‌ಡೌನ್‌ ನಿಂದ ಸಂಕಷ್ಟಪಡುತ್ತಿರುವ ಸಂದರ್ಭದಲ್ಲಿ ಅಲ್ಲಿಯ ಮಕ್ಕಳಿಗೆ ಹಾಲು ವಿತರಿಸುವ ನಿರ್ಧಾರ ಕೈಗೊಂಡು ಕಳೆದ ಒಂದು ವಾರದಿಂದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಸಹಕಾರದಿಂದ ಕೊಳಚೆ ಪ್ರದೇಶಗಳಲ್ಲಿ ಪ್ರಾರಂಭದಲ್ಲಿ ಒಂದು ಲೀಟರ್‌ ಹಾಲು ವಿತರಿಸಲಾಗುತ್ತಿತ್ತು. ಆನಂತರ ಜನರಿಂದ ಬೇಡಿಕೆ ಹೆಚ್ಚಾದ  ಹಿನ್ನೆಲೆಯಲ್ಲಿ ಈಗ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ ಹಾಲು ವಿತರಿಸಲಾಗುತ್ತಿದ್ದು, ಈ
ಹಾಲು ವಿತರಣೆಯಿಂದ ಬಡವರಿಗೆ ಹೆಚ್ಚು ಸಹಕಾರಿಯಾಗಿದೆ. ಕಲ್ಪತರು ನಾಡಿನಲ್ಲಿ 129 ಕೊಳಚೆ ಪ್ರದೇಶಗಳಿದ್ದು ಈ ಪ್ರದೇಶಗಳಲ್ಲಿ 25 ಸಾವಿರ ಹೆಚ್ಚು ಕುಟುಂಬಗಳಿದ್ದು ಪ್ರಾರಂಭದಲ್ಲಿ ಈ ಪ್ರದೇಶದಲ್ಲಿನ ಮನೆಗಳಿಗೆ  ಸರ್ಕಾರದ ಆದೇಶದ ಅನ್ವಯ ಪ್ರತಿ ಮನೆಗೆಹಾಲನ್ನು ತುಮಕೂರು ಜಿಲ್ಲಾ ಹಾಲು
ಒಕ್ಕೂಟದಿಂದ ವಿತರಿಸಲು ಆದೇಶದ ಹಿನ್ನೆಲೆಯಲ್ಲಿ ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ
ನೇಮಿಸಿರುವ ನೋಡಲ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಕೊಳಗೇರಿಗಳಲ್ಲಿ ವಿತರಿಸಲಾಗುತ್ತಿದೆ.
ಕೆಲವು ಕಡೆಗಳಲ್ಲಿ ಬಡವರಿಗೆ ಕೊಡುವ ಹಾಲನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ ಹಣಕ್ಕೆ ಹಾಲು ಮಾರಿದರೆ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರ ಮೊ. 7760536536 ಕರೆ ಮಾಡಿ ದೂರು ನೀಡಬಹುದಾಗಿದೆ.

ಕೆಎಂಎಫ್ ವತಿಯಿಂದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಬಡವರಿಗೆ ಉಚಿತವಾಗಿ ವಿತರಿಸುತ್ತಿರುವ ಹಾಲನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.
ಡಾ.ಕೆ.ರಾಕೇಶ್‌ ಕುಮಾರ್‌ ಜಿಲ್ಲಾಧಿಕಾರಿ.

ತುಮಕೂರಿನ ಕೊಳೆಗೇರಿಗಳಲ್ಲಿ ಇರುವ ಬಡ ಜನರಿಗೆ ವಿತರಿಸುವ ಹಾಲು ಸಮರ್ಪಕವಾಗಿ ಸಿಗಲಿ ಎಂದು ಪಾಲಿಕೆ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ನಗರದಲ್ಲಿ 18,100 ಪ್ಯಾಕೇಟ್‌ ಹಾಲು ವಿತರಣೆಯಾಗುತ್ತಿದೆ.
ಟಿ.ಭೂಬಾಲನ್‌ ಪಾಲಿಕೆ ಆಯುಕ

ಚಿ.ನಿ.ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next