Advertisement

ಸೂಕ್ತವಾಗಿ ಮಾತ್ರೆ ವಿತರಿಸಿ: ಅನಿರುದ್ಧ

11:10 AM May 20, 2018 | Team Udayavani |

ಬೀದರ: ಅತಿಸಾರ ಭೇದಿ ನಿಯಂತ್ರಣಕ್ಕಾಗಿ ಒಆರ್‌ಎಸ್‌ ದ್ರಾವಣ ಹಾಗೂ ಝಿಂಕ್‌ ಮಾತ್ರೆಗಳನ್ನು ನೀಡುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸೂಕ್ತವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ
ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅತಿಸಾರ ಭೇದಿ ಹಾಗೂ ಒಆರ್‌ ಎಸ್‌ ದ್ರಾವಣ ತಯಾರಿಸುವ ವಿಧಾನ ಹಾಗೂ ಕುಡಿಸುವ ಪ್ರಮಾಣ, ಝಿಂಕ್‌ ಮಾತ್ರೆ ಪಡೆಯುವ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವಿನ ಕೊರತೆ ಇರುತ್ತದೆ. ಈ ಬಗ್ಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
 
ಅಶುಚಿತ್ವದಿಂದಾಗಿ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಕೈ ತೊಳೆದುಕೊಳ್ಳುವುದರ ಬಗ್ಗೆ ಕಾರ್ಯಕ್ರಮ ಹಾಕಿಕೊಳ್ಳಬೇಕು. ಈ ವೇಳೆ ಊಟ ತಯಾರಿಸುವುದು ಹಾಗೂ ಬಡಿಸುವ ಮುಂಚೆ ಮತ್ತು ಶೌಚದ ನಂತರ ಎರಡು ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳುವ ಆರು ವಿಧಾನಗಳ ಬಗ್ಗೆ ಎಲ್ಲ ಶಾಲಾ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಎಲ್ಲ ಶಾಲೆಗಳಲ್ಲಿ 1098 ಮಕ್ಕಳ ಸಹಾಯವಾಣಿ ಸಂಖ್ಯೆ ಕಡ್ಡಾಯ ಬರೆಸಬೇಕು. ಇದರೊಟ್ಟಿಗೆ ಭ್ರೂಣಹತ್ಯೆ, ಬಾಲ್ಯವಿವಾಹ, ಮಕ್ಕಳ ಮಾರಾಟದ ಐದಾರು ಅಂಶಗಳನ್ನು ಬರೆಯಿಸಿ ಈ ಸಮಸ್ಯೆಗಳಿದ್ದರೆ 1098ಗೆ ಕರೆ ಮಾಡಿ ಎನ್ನುವ ಬಗ್ಗೆ ಪ್ರಚಾರ ಮಾಡಬೇಕು ಎಂದು ಹೇಳಿದರು.

ನಗರ ಪ್ರದೇಶದ ಶಾಲೆಗಳಲ್ಲಿ ಕೈ ತೊಳೆದುಕೊಳ್ಳುವ ವಿಧಾನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು
ನಗರಸಭೆ ಪೌರಾಯುಕ್ತ ಮನೋಹರ ಅವರಿಗೆ ಸೂಚಿಸಿದರು. ಕುಡಿಯುವ ನೀರಿನ ಟ್ಯಾಂಕ್‌ಗಳು ಶುಚಿತ್ವದಿಂದ ಇರುವುದು ಅತ್ಯಗತ್ಯವಾಗಿದೆ. ಆದ್ದರಿಂದ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಹಾಯ ಪಡೆದು ಸ್ವತ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. 

ಕಾರ್ಯಕ್ರಮ ಅಧಿಕಾರಿ ಡಾ| ರವೀಂದ್ರ ಸಿರ್ಸಗಿ ಮಾತನಾಡಿ, ಅತಿಸಾರ ಭೇದಿ ಸಮಸ್ಯೆಗೆ ಒಆರ್‌ಎಸ್‌ ಮತ್ತು ಜಿಂಕ್‌
ಸರಿಯಾದ ಚಿಕಿತ್ಸೆಯಾಗಿದೆ. ಮಕ್ಕಳಲ್ಲಿ ಅತಿಸಾರ ಭೇದಿ ಆದಾಗ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ನಿಯಂತ್ರಣಕ್ಕಾಗಿ ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌. ಸೆಲ್ವಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ. ಜಬ್ಟಾರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next