Advertisement

ರಾಜ್ಯ ಸರಕಾರವನ್ನು ವಿಸರ್ಜಿಸಿ: ಈಶ್ವರಪ್ಪ

01:35 PM Feb 26, 2017 | Team Udayavani |

ಉಡುಪಿ: ರಾಜ್ಯದ ಇತಿಹಾಸದಲ್ಲೇ ಕಾಂಗ್ರೆಸ್ಸಿನ ಕಪ್ಪ ಕೊಟ್ಟ ಪ್ರಕರಣ ಒಂದು ಕಪ್ಪುಚುಕ್ಕೆಯಾಗಿದೆ. ಗೋವಿಂದ ರಾಜು ಡೈರಿಯಲ್ಲಿದ್ದಂತೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಕೋಟಿ ಕೋಟಿ ರೂ. ರವಾನೆಯಾಗಿದೆ. ಕಪ್ಪ ಕೊಟ್ಟಿರುವುದು ಈಗಾಗಲೇ ದಾಖಲೆ ಸಹಿತ ಬಹಿರಂಗಗೊಂಡಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪ ಆಗ್ರಹಿಸಿದರು.

Advertisement

ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ಪೇಜಾವರ ಶ್ರೀ  ಆಶೀರ್ವಾದ ಪಡೆದ ಬಳಿಕ ಉದಯವಾಣಿ ಜತೆ ಮಾತ ನಾಡಿದ ಅವರು, ಡೈರಿಯಲ್ಲಿರುವ ವಿಷಯ ದಾಖಲೆ ಸಹಿತ ಸತ್ಯವಾಗಿದ್ದರೆ ರಾಜೀನಾಮೆ ನೀಡುವುದಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು. ದಾಖಲೆ ಸಹಿತ ರಾಷ್ಟ್ರಾದ್ಯಂತ ವಿಷಯ ಬಹಿರಂಗ ಗೊಂಡಿದೆ.

ಆದರೆ ಈಗ ಅವರು ಮೌನಕ್ಕೆ ಶರಣಾಗಿದ್ದಾರೆ. ರಾಜೀನಾಮೆ ಚಿಂತನೆ ನಡೆಸುತ್ತಿರಬಹುದು. ಸಿಎಂ ಅವರು ರಾಜೀನಾಮೆ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ ಎಂದರು.

ಹೇಳಿಕೆ ಹಾಸ್ಯಾಸ್ಪದ’ ಬಿಜೆಪಿ ನಾಯಕರ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಇದರಲ್ಲಿ ಯಾವುದೇ ಹುರುಳಿಲ್ಲ. ಸತ್ಯವಿದ್ದರೆ ದಾಖಲೆ ಸಮೇತ ಬಿಡುಗಡೆ ಮಾಡಲಿ ಎಂದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕುರಿತ ಪ್ರತಿಕ್ರಿಯಿಸಿ, ಬ್ರಿಗೇಡ್‌ ಈಗ ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಿದೆ. ಕಲಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ 10,000 ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 2,500 ರೂ.ಗಳಂತೆ ಬಹುಮಾನ ನೀಡಲಾಗುವುದು ಎಂದರು. 

Advertisement

ಪ್ರತಿಭಟನೆ : ಈಶ್ವರಪ್ಪ ಸಮರ್ಥನೆ
ಮಂಗಳೂರಿನಲ್ಲಿ ಸಿಪಿಎಂ ಏಕತಾ ರ್ಯಾಲಿ ವಿರುದ್ಧ ಹಿಂದೂ ಸಂಘಟನೆಗಳಿಂದ ನಡೆದ ಪ್ರತಿಭಟನೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಕರ್ನಾಟಕ – ಕೇರಳದಲ್ಲಿ ಹಿಂದೂಗಳ ಕಗ್ಗೊಲೆಯಾಗುತ್ತಿದೆ. ದೇಶದ ವಿರುದ್ಧ ಮಾತನಾಡುವವರ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಹತ್ಯೆ ಪ್ರಕರಣಗಳನ್ನು ಸರಕಾರ ಹಗುರವಾಗಿ ಪರಿಗಣಿಸಿದೆ. ಮುಸ್ಲಿಮರ ಓಲೈಕೆಯಲ್ಲಿ ಸರಕಾರ ತೊಡಗಿದೆ. ಹಿಂದೂ ಯುವಕರ ಪ್ರಾಣಕ್ಕೆ ಬೆಲೆ ಇಲ್ಲವೇ. ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಅತ್ಯಗತ್ಯ. ಅದಕ್ಕೋಸ್ಕರವೇ ಮಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next