Advertisement

‘ಕನಡ ಭಾಷಾಭಿಮಾನ ಮೂಡಿಸಿ’

11:18 AM Nov 02, 2017 | |

ಬಂಟ್ವಾಳ: ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಕನ್ನಡದ ಬಗ್ಗೆ ಭಾಷಾಭಿಮಾನ ಮೂಡಿಸಿದಾಗ ಒಟ್ಟು
ಸಾಮಾಜಿಕ ಜಾಗೃತಿ ಮೂಡುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ ಹೇಳಿದರು.

Advertisement

ಅವರು ನ. 1ರಂದು ಬಂಟ್ವಾಳ ತಾ| ಕೇಂದ್ರ ಬಿ.ಸಿ.ರೋಡ್‌ ಮಿನಿವಿಧಾನ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ
ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ರಾಜ್ಯವಾರು ವಿಂಗಡಣೆ ಆದಾಗ ಕರ್ನಾಟಕಕ್ಕೆ ಸೇರಬೇಕಾಗಿದ್ದ ಕಾಸರಗೋಡು ಇಂದಿಗೂ ಕರ್ನಾಟಕಕ್ಕೆ
ಸೇರಿಲ್ಲ ಎಂಬ ಕೊರಗು ನಮ್ಮದಾಗಿದೆ. ಬಂಟ್ವಾಳ ತಾ| ಕೇರಳದ ಗಡಿನಾಡ ತಾಲೂಕು ಎನ್ನಲಾಗುತ್ತದೆ. ಆದರೆ
ಕಾಸರಗೋಡು ಕರ್ನಾಟಕದ ಒಂದು ಜಿಲ್ಲೆಯಾಗಬೇಕಾದ ಭೂಭಾಗವಾಗಿದೆ ಎಂದವರು ತಿಳಿಸಿದರು.

ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣಾ ಪೊಲೀಸರು, ಸ್ಕೌಟ್‌ ಮತ್ತು ಗೈಡ್ಸ್‌ , ಬುಲ್‌ಬುಲ್‌, ಗೃಹರಕ್ಷಕ ದಳ ಸಹಿತ ವಿವಿಧ ಪದಾತಿ ದಳಗಳಿಂದ ನಡೆದ ಆಕರ್ಷಕ ಪಥ ಸಂಚಲನದ ಧ್ವಜವಂದನೆಯನ್ನು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಸ್ವೀಕರಿಸಿದರು. ಬಂಟ್ವಾಳ ತಾಲೂಕು ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿ ನಮಗೆ ಭಾಷೆಯ ಅಂದಾಭಿಮಾನ ಬೇಡ, ಸ್ವಾಭಿಮಾನ ಬೇಕು. ಘರ್ಷಣೆ ಬೇಡ. ಸಂಪರ್ಕ ಬೇಕು. ವಿವಾದ ಬೇಡ, ವಿಶ್ವಾಸ ಹೊಂದಬೇಕು ಎಂದು ಕರೆ ನೀಡಿದರು.

ಜಿ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಪುರಸಭಾ ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಶಿ,
ಉಪ ತಹಶೀಲ್ದಾರ್‌ ಸೀತಾರಾಮ, ವಾಸು ಶೆಟ್ಟಿ, ಗೋಪಾಲ್‌, ಗ್ರೆಟ್ಟಾ ಮಸ್ಕರೇನಸ್ಸ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ , ದಿವಾಕರ ಮುಗುಳ್ಯ, ನವೀನ್‌ ಬೆಂಜನಪದವು,ಸೀತಾರಾಮ ಕಮ್ಮಾಜೆ, ವಿಶು ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

 ಸೇವಾ ನಿವೃತ್ತಿಗೊಳ್ಳಲಿರುವ ತಾ.ಪಂ. ಕಾರ್ಯನಿರ್ವಹಣಾಕಾರಿ ಸಿಪ್ರಿಯಾನ್‌ ಮಿರಾಂದ, ಮಂಜು ವಿಟ್ಲ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ತಹಶೀಲ್ದಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next