Advertisement

ಮತ್ತೆ BJP ಭಿನ್ನಮತ ಸ್ಫೋಟ? ಬಿಎಸ್‌ವೈV/S ಸಂತೋಷ್‌ 

10:36 AM Sep 23, 2017 | |

ಬೆಂಗಳೂರು: ಶತಾಯ ಗತಾಯ ಮತ್ತೆ ಅಧಿಕಾರ ಹಿಡಿಯುವ ಮಹದಾಸೆಯೊಂದಿಗೆ ವಿಧಾನ ಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಕಾಣಿಸಿಕೊಂಡಂತಿದೆ. 

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಬಣಗಳ ನಡುವೆ ಮತ್ತೆ ಭಿನ್ನಮತ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಮಹತ್ವದ ಸಭೆಗೆ ಸಂತೋಷ್‌ ಬಣದ ಹಲವು ನಾಯಕರನ್ನು ಬಾರದಂತೆ ಸೂಚಿಸಲಾಗಿದೆ.

ಬೂತ್‌ ಉಸ್ತುವಾರಿ ಸಮಿತಿ ರಚನೆ ಹಿನ್ನಲೆಯಲ್ಲಿ ಭಿನ್ನಮತ ಕಾಣಿಸಿಕೊಂಡಿದ್ದು, ಇಂದಿನ ಸಭೆಗೆ ನಿರ್ಮಲ್‌ ಕುಮಾರ್‌ ಸುರಾನಾ, ಭಾನುಪ್ರಕಾಶ್‌, ಗಿರೀಶ್‌ ಪಟೇಲ್‌, ಕೇಶವ್‌ ಪ್ರಸಾದ್‌, ಬಿ.ಎಂ. ನಂದೀಶ್‌,ಅಶೋಕ್‌ ಗಸ್ಕಿ ಸೇರಿದಂತೆ ಕೆಲ ನಾಯಕರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಬಾರದಂತೆ ಹೇಳಿರುವುದು ವರದಿಯಾಗಿದೆ. 

ಯಡಿಯೂರಪ್ಪ ಸೂಚನೆ ಮೇರೆಗೆ ಬಿಜೆಪಿ ಕಚೇರಿಯಿಂದ ದೂರವಾಣಿ ಕರೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಮಧುಸೂದನ್‌ಗೆ ತಡೆ 

Advertisement

ರಾಜ್ಯ ವಕ್ತಾರರಾಗಿ ನೇಮಕಗೊಂಡಿದ್ದ ಗೋ ಮಧುಸೂದನ್‌ ನೇಮಕ್ಕೆ ತಡೆ ನೀಡಿರುವ ಬಗ್ಗೆ ತಿಳಿದು ಬಂದಿದೆ. ಬಿಜೆಪಿ ವರಿಷ್ಠರ ಸೂಚನೆ ಹಿನ್ನಲೆ ತಡೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next