ಚಿಕ್ಕಬಳ್ಳಾಪುರ: ಅಂತರ್ಜಲ ಪಾತಾಳಕ್ಕೆ ಕುಸಿದು ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಪೂರಕ ವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರೂಪಿತಗೊಂಡ ಮಹತ್ವಕಾಂಕ್ಷಿ ಹೆಬ್ಟಾಳ ನಾಗವಾರ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕಂದವಾರ ಕೆರೆಗೆ ನೀರು ಹರಿದು ಭರ್ತಿಯಾಗುವ ಹಂತ ತಲುಪಿದರೂ ಸಿವಿಲ್ ಕಾಮಗಾರಿ ವಿಳಂಬದಿಂದ ಇತರೆ ಕೆರೆಗಳಿಗೆ ನೀರು ಹರಿಸುವುದಕ್ಕೆ ಅಡ್ಡಿಯಾಗಿದೆ.
883 ಕೋಟಿ ರೂ. ವೆಚ್ಚ: ಎತ್ತಿನಹೊಳೆ ಅನುಷ್ಠಾನ ವಿಳಂಬ ಆಗುತ್ತದೆಂಬ ಕಾರಣದಿಂದ 883 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬತ್ತಿ ಹೋಗಿರುವ ಜಿಲ್ಲೆರುವ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕನಸು ಹೊತ್ತು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿದ್ದ ಸಿದ್ದ ರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದರು.
ಎರಡೂವರೆ ಅಡಿ ಬಾಕಿ: ಯೋಜನೆ ಸಾಕರಗೊಂಡು ಇದೀಗ ನಗರದ ಕಂದರವಾರ ಕೆರೆಗೆ ನೀರು ಹರಿದು ಬರುತ್ತಿದ್ದು, ಇನ್ನೂ ಕೆಲ ಸಿವಿಲ್ ಕಾಮಗಾರಿಗಳು ಬಾಕಿ ಇರುವುದರಿಂದ ಕಂದವಾರ ಕೆರೆಯಿಂದ ಇತರೆ ಕೆರೆಗಳಿಗೆ ನೀರು ಹರಿಸುವುದು ವಿಳಂಬವಾಗಿವೆ. ಕಂದವಾರ ಕೆರೆ ಭರ್ತಿಯಾಗಲು ಕೇವಲ ಎರಡೂವರೆ ಅಡಿಯಷ್ಟು ಬಾಕಿ ಇದ್ದು, ಅಷ್ಟರೊಳಗೆ ಬಾಕಿ ಕಾಮಗಾರಿ ಮುಗಿಯುತ್ತಾ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಪೈಪ್‌ಲೈನ್ ಮೂಲಕ ನೀರು ಹರಿಸಲು ವಿಳಂಬ: ಕಂದ ವಾರ ಕೆರೆಯಿಂದ ಕಾಲುವೆ ಮೂಲಕ ಗೋಪಾಲಕೃಷ್ಣ ಅಮಾ ನಿಕೆರೆಗೆ ನೀರು ಹರಿಸುವ ಯೋಚನೆ ಇದ್ದು, ನಗರದ ವಿವಿಧ ಕಡೆ ಚರಂಡಿ ಕಾಮಗಾರಿಗಳು ಬಾಕಿ ಇರುವುದರಿಂದ ನೀರು ಹರಿಸಲು ಸಾಧ್ಯವಾಗಿಲ್ಲ. ಇನ್ನೂ ಪೆರೇಸಂದ್ರ, ಶ್ರೀನಿವಾಸ ಸಾಗ ರದ ಕಡೆಗೆ ನೀರು ಹರಿಸಲು ಪೈಪ್‌ಲೈನ್ ಕಾಮಗಾರಿ ಮುಗಿ ದರೂ ಕಂದವಾರ ಕೆರೆ ಬಳಿ ಸ್ಥಾಪಿಸಲಾಗಿರುವ ಪಂಪ್‌ಹೌಸ್ ಗೆ ಇನ್ನೂ ವಿದ್ಯುತ್ ಸಂಪರ್ಕವೇ ಸಿಗದ ಕಾರಣ ಪೆರೇಸಂದ್ರ ಹಾಗೂ ಶ್ರೀನಿವಾಸ ಸಾಗರದ ಕಡೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ವಿಳಂಬ ಆಗಿದೆ.
ಜಿಲ್ಲೆಯ ಒಟ್ಟು 44 ಕೆರೆಗಳ ಪೈಕಿ ಚಿಕ್ಕಬಳ್ಳಾಪುರ 26, ಗೌರಿ ಬಿದನೂರು 12, ಶಿಡ್ಲಘಟ್ಟ 9 ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆ ವ್ಯಾಪ್ತಿಗೆ ಜಿಲ್ಲೆಯ ಅತಿ ಹಿಂದುಳಿದ ತಾಲೂಕಾಗಿರುವ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚಿಂತಾಮಣಿ ತಾಲೂಕುಗಳು ಸೇರಿಲ್ಲ.
ಕಂದವಾರ ಕೆರೆ ಭರ್ತಿಗೆ ಎರಡೂವರೆ ಅಡಿ ಬಾಕಿ ಇದೆ. ಕೆರೆಯಿಂದ ಶ್ರೀನಿವಾಸ ಸಾಗರ ಹಾಗೂ ಪೆರೇಸಂದ್ರ ಕಡೆಗೆ ಪಂಪಿಂಗ್ ಮೂಲಕ ನೀರು ಹರಿಸಲು ಪೈಪ್‌ಲೈನ್ ಕಾಮಗಾರಿ ಮುಗಿ ದಿದೆ. ಸದ್ಯಕ್ಕೆ ಸಿವಿಲ್ ಕಾಮಗಾರಿಗಳು ಬಾಕಿ ಇರುವುದರಿಂದ ಕಂದವಾರ ಕೆರೆಯಿಂದ ನೀರು ಹರಿ ಸಲು ಸಾಧ್ಯವಾಗಿಲ್ಲ. ನಾಲ್ಕೈದು ದಿನಗಳಲ್ಲಿ ಬಾಕಿ ಕಾಮಗಾರಿ ಮುಗಿದ ಕೂಡಲೇ ನೀರು ಹರಿಸಲಾ ಗುವುದು. ನೀರು ಹರಿಸಲು ಕೆರೆ ಭರ್ತಿ ಆಗಬೇಕೆಂದಿಲ್ಲ. ಗೇಟ್ ಮೂಲಕ ನೀರು ಹರಿಸಬಹುದು.
-ರವೀಂದ್ರನಾಥ್, ಎಇಇ, ಹೆಚ್‌ಎನ್ ವ್ಯಾಲಿ ಯೋಜನೆ