ಗುತ್ತಲ: ಮಳೆಯ ನೀರಿನೊಂದಿಗೆ ಚರಂಡಿ ನೀರುಜಮೀನುಗಳಿಗೆ ನುಗ್ಗುತ್ತದೆ ಎಂದು ಆರೋಪಿಸಿಚರಂಡಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದ ಗ್ರಾಪಂಸಿಬ್ಬಂದಿಗೆ ರೈತನೋರ್ವ ಅಡ್ಡಿಪಡಿಸಿದ್ದಲ್ಲದೇ,ವಾಗ್ಧಾದ ಹಾಗೂ ಹಲ್ಲೆಗೆ ಯತ್ನಿಸಿರುವ ಘಟನೆನೆಗಳೂರ ಗ್ರಾಮದಲ್ಲಿ ಶನಿವಾರ ನಡೆದಿದೆ. ಈಕುರಿತು ಗ್ರಾಪಂ ಅಧ್ಯಕ್ಷರು ರೈತನ ವಿರುದ್ಧ ದೂರುದಾಖಲಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಸುರೇಶ ಸಪ್ಪಣ್ಣನವರ,ಸದಸ್ಯರಾದ ಸಿಕಂದರ್ ಮುಲ್ಲಾ, ಹನುಮಂತಪ್ಪದೊಡ್ಡವೀರಪ್ಪನವರ ಹಾಗೂ ಗ್ರಾಪಂ ಸಿಬ್ಬಂದಿಶೇಖಪ್ಪ ಜಾಲಣ್ಣನವರ ಹಾಗೂ ಸ್ಥಳೀಯರಾದಸುಲೇಮಾನ ಸುಂಕದ ಎಂಬುವವರಮೇಲೆ ಗ್ರಾಮದ ರೈತ ಶರಣಪ್ಪ ನಿಂಗರಡ್ಡಿಚಪ್ಪರದ ಎಂಬುವರು ಹಲ್ಲೆ ನಡೆಸಿದ್ದಾರೆಂದುಆರೋಪಿಸಲಾಗಿದೆ.
ಕಳೆದ ಅನೇಕ ವರ್ಷಗಳಿಂದ ಚರಂಡಿನೀರು ಜಮೀನಿನಲ್ಲಿ ಹರಿಯುತ್ತಿದ್ದರಿಂದಜಮೀನು ಹಾಳಾಗುತ್ತದೆ ಎಂದು ಕಳೆದವರ್ಷ ಜುಲೈ 15ರಂದು ಚರಂಡಿ ನೀರುತಮ್ಮ ಜಮೀನುಗಳಿಗೆ ಬಾರದಂತೆ ರೈತರುತಡೆಯೊಡ್ಡಿದ್ದರು.
ಈ ಸಂದರ್ಭದಲ್ಲಿ ಗ್ರಾಪಂಆಡಳಿತಾಧಿ ಕಾರಿ, ತಹಶೀಲ್ದಾರ್, ತಾಪಂ ಇಒ,ಪಿಡಿಒ ರೈತರಿಗೆ ಚರಂಡಿ ನೀರು ಬಾರದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆಅದು ಕಾರ್ಯಗತವಾಗಿರಲಿಲ್ಲ ಎನ್ನಲಾಗಿದೆ.ಶನಿವಾರ ಗ್ರಾಪಂ ಸಿಬ್ಬಂದಿ ಜೆಸಿಬಿ ಯಂತ್ರದಮೂಲಕ ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಸ್ವತ್ಛಗೊಳಿಸುತ್ತಿದ್ದ ವೇಳೆ ಸ್ಥಳಕ್ಕೆಆಗಮಿಸಿದ ರೈತ ಶರಣಪ್ಪ ಚಪ್ಪರದ ಗ್ರಾಪಂಸಿಬ್ಬಂದಿಗೆ ತಕರಾರು ಮಾಡಿದ್ದಾನೆ.
ಈ ಸಂದರ್ಭದಲ್ಲಿ ಚರಂಡಿಯಲ್ಲಿನ ಕೊಳೆತೆಗೆಯುತ್ತಿದ್ದ ಗ್ರಾಪಂ ಸಿಬ್ಬಂದಿ ಮೇಲೆ ಮತ್ತೂಂದುಸಲಕೆಯಿಂದ ಕೊಳಚೆ ಎರಚಿದ್ದಾನೆ. ಇದಕ್ಕೆಸ್ಥಳದಲ್ಲಿದ್ದ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರುಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರಿಂದ ಮತ್ತಷ್ಟುಕೋಪಗೊಂಡು ಅಧ್ಯಕ್ಷ ಸುರೇಶ ಸಪ್ಪಣ್ಣನವರಅವರೊಂದಿಗೆ ವಾಗÌದ ನಡೆಸಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆಗಸ್ಥಳೀಯರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.ಈ ಘಟನೆಯಿಂದ ಆಕ್ರೋಶಗೊಂಡಗ್ರಾಪಂ ಅಧ್ಯಕ್ಷ ಸುರೇಶ ಸಪ್ಪಣ್ಣನವರ,ಸದಸ್ಯರಾದ ಸಿಕಂದರ್ ಮುಲ್ಲಾ, ಹನುಮಂತಪ್ಪದೊಡ್ಡವೀರಪ್ಪನವರ ಹಾಗೂ ಇತರರು ಗುತ್ತಲಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.