Advertisement

ರಸ್ತೆ ಅತಿಕ್ರಮಣ ತೆರವಿಗೆ ಅಡ್ಡಿ -ವಾಗ್ವಾದ

03:41 PM Jun 10, 2022 | Shwetha M |

ಮುದ್ದೇಬಿಹಾಳ: ಪಟ್ಟಣದ ಎಂಜಿಎಂಕೆ ಶಾಲೆ ಮುಂಭಾಗದ ಬಿದರಕುಂದಿ-ತಾರನಾಳ ಸಂಪರ್ಕ ರಸ್ತೆ ಅತಿಕ್ರಮಣ ತೆರವಿಗೆ ಮುಂದಾದ ಪುರಸಭೆ ಸಿಬ್ಬಂದಿ ಜೊತೆ ಅತಿಕ್ರಮಣದಾರರು ಗುರುವಾರ ವಾಗ್ವಾದ ನಡೆಸಿದರು.

Advertisement

ರಸ್ತೆಯ ಎರಡೂ ಬದಿ ಹೋಟೆಲ್‌, ಖಾನಾವಳಿ ಮುಂತಾದ ಅಂಗಡಿ ಹಾಕಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದನ್ನು ಮತ್ತು ಈ ರಸ್ತೆಯಲ್ಲಿ ಕುಡಿವ ನೀರಿನ ಪೈಪ್‌ಲೈನ್‌ ಅಳವಡಿಸಬೇಕಿರುವುದರಿಂದ ಅತಿಕ್ರಮಣ ತೆರವಿಗೆ ಪುರಸಭೆ ಅಧಿಕಾರಿ ವರ್ಗ ಮುಂದಾಗಿತ್ತು. ಆದರೆ 103 ಮತ್ತು 104 ಸಂಖ್ಯೆಯ ಆಸ್ತಿಗಳ ಮಾಲೀಕರು ತಕರಾರು ತೆಗೆದು ರಸ್ತೆ ಜಾಗ ಕುರಿತು ಮೊದಲಿನಿಂದಲೂ ಗೊಂದಲ ಇದೆ. ಆ ಗೊಂದಲ ಬಗೆಹರಿಯುವವರೆಗೂ ಅತಿಕ್ರಮಣ ತೆರವು ಅಥವಾ ಇತರೆ ಕಾಮಗಾರಿ ನಡೆಸದಂತೆ ಒತ್ತಾಯಿಸಿದರು.

ಆದರೆ ಶಾಲೆ ಮುಂದೆ ಮೊದಲಿನಿಂದಲೂ ರಸ್ತೆ ಇದೆ, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಬೇರೆಯವರು ಖರೀದಿಸಿದ್ದರಿಂದ ರಸ್ತೆ ಬಿಡುವ ಮತ್ತು ಕಟ್ಟಡ ನಿರ್ಮಿಸುವ ಕುರಿತು ತಕರಾರು ಇದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡ ಪುರಸಭೆ ಅಧಿಕಾರಿ ವರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ಕೈ ಬಿಟ್ಟು ಪೈಪ್‌ಲೈನ್‌ ಕಾಮಗಾರಿ ಬದಲಾಯಿಸಿ ರಸ್ತೆ ಮಧ್ಯೆ ಅಗೆದು ಪೈಪ್‌ಲೈನ್‌ ಅಳವಡಿಸಲು ಕ್ರಮ ಕೈಗೊಂಡರು.

ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ, ಪುರಸಭೆ ಸಿಬ್ಬಂದಿ ಮತ್ತು ನಿವಾಸಿಗಳಾದ ಮುಖೇಶ ಓಸ್ವಾಲ್‌, ಜಗದೀಶ ಕಂಚ್ಯಾಣಿ, ವಿನಾಯಕ ಝಿಂಗಾಡೆ, ಗಂಗನಗೌಡರ, ಗೋಪಿ ಮಡಿವಾಳರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next