Advertisement

ಮಳೆಯಿಂದ ಭಾರತದ ಅಭ್ಯಾಸಕ್ಕೆ ಅಡ್ಡಿ

01:02 AM Jun 08, 2019 | Sriram |

ಲಂಡನ್‌: ಮುಂದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ತಂಡದ ಅಭ್ಯಾಸಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಇದರಿಂದ ಶುಕ್ರವಾರದ ಅಭ್ಯಾಸವನ್ನು ರದ್ದುಗೊಳಿಸಲಾಯಿತು.

Advertisement

ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಮ್‌ ಇಂಡಿಯಾ ಸೌತಾಂಪ್ಟನ್‌ನಿಂದ ಗುರುವಾರ ಲಂಡನ್‌ಗೆ ಆಗಮಿಸಿದೆ. ಮಳೆಯೂ ಜತೆ ನೀಡಿದೆ. ಹೀಗಾಗಿ ತಂಡದ ಸದಸ್ಯರೆಲ್ಲ ಶುಕ್ರವಾರ ಹೊಟೇಲ್‌ ರೂಮ್‌ನಲ್ಲೇ ಉಳಿಯಬೇಕಾಯಿತು.ದಕ್ಷಿಣ ಆಫ್ರಿಕಾ ಪಂದ್ಯದ ಹಿಂದಿನ ದಿನ ಹ್ಯಾಂಪಶೈರ್‌ ಬೌಲ್‌ನಲ್ಲಿ ಅಭ್ಯಾಸ ನಡೆಸಬೇಕಿದ್ದ ಭಾರತಕ್ಕೆ ಆಗಲೂ ಮಳೆ ಅಡಚಣೆಯೊಡ್ಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next