Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋಟ್ಯಂತರ ಹಣ ಬಿಡುಗಡೆ ಮಾಡಬೇಕು, ಅನುಮತಿ ಸಿಕ್ಕರೆ ಮಾಡುತ್ತೇನೆ. ಎಲ್ಲೆಲ್ಲಿ ನೆರೆ, ಬೆಳೆಹಾನಿಯಾಗಿದೆ ಅವರಿಗೆಲ್ಲಾ 100 ಪರ್ಸೆಂಟ್ ಪರಿಹಾರ ಕೊಡುತ್ತೇವೆ’ ಎಂದರು.
‘ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ನೀವು ಮಾತ್ರ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ’ ಎಂದು ಅಧಿಕಾರಿಗಳಿಗೆ ಸಚಿವ ಅಶೋಕ್ ಸೂಚನೆ ನೀಡಿದರು. ‘ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಬೆಳಗಾವಿಯಲ್ಲಿ 76 ಸಾವಿರ ರೈತರ ಬೆಳೆ ಹಾನಿ, ಬಾಗಲಕೋಟೆಯಲ್ಲಿ 20 ಸಾವಿರ ರೈತರ ಬೆಳೆ ಹಾನಿಯಾಗಿದೆ. ಇಂದು ಹಣ ಬಿಡುಗಡೆ ಮಾಡಬೇಕಿತ್ತು, ಆ ಫೈಲ್ ನನ್ನ ಬಳಿ ಬಂದಿದೆ’ ಎಂದು ತಿಳಿಸಿದರು.