Advertisement

ಅನರ್ಹ ಶಾಸಕರು ಮಂಜುನಾಥ ಕೃಪೆಯಿಂದ ಗೆದ್ದು ಬರುತ್ತಾರೆ: ಎಚ್.ನಾಗೇಶ್

09:28 AM Oct 03, 2019 | keerthan |

ಧರ್ಮಸ್ಥಳ: ಅನರ್ಹ ಶಾಸಕರು ಅವರದೇ ಚಿಂತನೆಯಿಂದ ರಾಜೀನಾಮೆ ನೀಡಿದ್ದಾರೆ. ಬೇರೆ ಉದ್ದೇಶದಿಂದಲ್ಲ. ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಮರು ಚುನಾವಣೆಯಲ್ಲಿ ಗೆದ್ದು ಬಂದು ಮತ್ತೆ ಅವರ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ತಿಳಿಸಿದ್ದಾರೆ.

Advertisement

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಅವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ಬಳಿಕ ದೇವರ ದರ್ಶನ ಪಡೆದು ಮಾಧ್ಯಮದೊಂದಿಗೆ ಮಾತನಾಡಿದರು.

ಅನರ್ಹ ಶಾಸಕರು ಯಾವುದೇ ಒತ್ತಡದಿಂದ ರಾಜೀನಾಮೆ ನೀಡಿರಲಿಲ್ಲ. ಅವರ ಬಳಿ ಮಾತುಕತೆ ನಡೆಸಿದರೆ ಸಮಸ್ಯೆ ಅನಾವರಣವಾಗುತ್ತದೆ.
ಮಂಗಳೂರಿನಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆಗಾಗಿ ಬಂದಿದ್ದೇನೆ. ಮಾರ್ಗ ಮದ್ಯ ದೇವರ ದರ್ಶನ ಪಡೆಯಲು ಬಂದಿದ್ದೇನೆ. ಸರಕಾರಕ್ಕೆ ಇಲಾಖೆಯಿಂದ ಬರುವ ಆದಯವನ್ನೇ ನಿರೀಕ್ಷಿಸುತ್ತಿದ್ದೇವೆ ಹೊರತು ಹೊಸ ವೈನ್ ಶಾಪ್ ಅನುಮತಿ ನೀಡಲಾಗುತ್ತಿಲ್ಲ. ಯಾವುದೇ ಒತ್ತಡಕ್ಕೆ ಒಳಗಾಗದೆ ಸರಾಸರಿ ಆದಾಯ ತರುವುದು ಇಲಾಖೆ ಗುರಿಯಾಗಿದೆ ಎಂದರು.

ಧರ್ಮಸ್ಥಳ ಜನಜಾಗೃತಿ ವೇದಿಕೆ ಮೂಲಕ ಮದ್ಯವರ್ಜನ ಹಾಗೂ ದುಷ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ಕೆ ಪೂಜ್ಯ ಹೆಗ್ಗಡೆ ಅವರ ಮಾರ್ಗದರ್ಶನ ಹಾಗೂ ಸೇವೆಗೆ ಸರಕಾರದಿಂದ ಯಾವುದೇ ಅಡ್ಡಿಯಿಲ್ಲ. ಸಮಾಜ ಕಟ್ಟುವ ಸೇವೆಗೆ ನಮ್ಮದು ಬೆಂಬಲವಿದೆ. ಅವರವರ ಭಾವನೆಗಳಿಗೆ ಯಾವುದೇ ಧಕ್ಕೆ ತರುವ ಕೆಲಸ ನಮ್ಮಿಂದಾಗದು ಎಂದು ಹೇಳಿದರು

ಮಂಗಳೂರು ಸಭೆ ಬಳಿಕ ಸಾಯಂಕಾಲ ಉಡುಪಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದರು.

Advertisement

ಧರ್ಮಸ್ಥಳ ಎಸ್.ಐ. ಅವಿನಾಶ್, ಮಂಗಳೂರು ಅಬಕಾರಿ ಉಪ ಆಯುಕ್ತೆ ಶೈಲಜಾ ಎ.ಕೋಟೆ, ಉಪ ಅಧೀಕ್ಷಕಿ ಪದ್ಮಾ ವಿ., ಬೆಳ್ತಂಗಡಿ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್., ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮತ್ತಿತರ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next