Advertisement

Disqualified; ಭಾರತಕ್ಕೆ ಭಾರೀ ಶಾಕ್!!; ಚಿನ್ನದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಅನರ್ಹ

02:39 PM Aug 07, 2024 | Team Udayavani |

ಪ್ಯಾರಿಸ್ : ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಿಂದ ವಿನೇಶ್ ಫೋಗಟ್ ಅನರ್ಹಗೊಂಡಿರುವ ಬಗ್ಗೆ ವರದಿಯಾಗಿದ್ದು, ಫೈನಲ್ ನಲ್ಲಿ  ಬಂಗಾರದ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರೀಕ್ಷಿಸಲಾಗದ ಭಾರೀ ಆಘಾತ ನೀಡಿದೆ.

Advertisement

ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ. ರಾತ್ರಿಯಿಡೀ ತಂಡವು ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚು ತೂಕವನ್ನು ಹೊಂದಿದ್ದರು. ಈ ಸಮಯದಲ್ಲಿ ತಂಡದಿಂದ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ.

ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸುತ್ತದೆ. ತಂಡ ಇನ್ನು ಕೈಯಲ್ಲಿರುವ ಸ್ಪರ್ಧೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಬಯಸುತ್ತದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಕಟಣೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next