Advertisement

Lakshadweep: ಸಂಸದ ಫೈಜಲ್‌ ಅನರ್ಹತೆ ವಾಪಸ್‌

08:49 PM Nov 02, 2023 | Team Udayavani |

ನವದೆಹಲಿ: ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌ ಪಿ.ಪಿ.ಅವರಿಗೆ ನೀಡಲಾಗಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಅಮಾನತುಗೊಳಿಸಿದ ಬೆನ್ನಲ್ಲೇ, ಲೋಕಸಭೆ ಸದಸ್ಯತ್ವದಿಂದ ಫೈಜಲ್‌ರನ್ನು ಅನರ್ಹಗೊಳಿಸಿದ್ದ ನಿರ್ಣಯವನ್ನು ಲೋಕಸಭೆ ಕಾರ್ಯಾಲಯ ಹಿಂಪಡೆದಿದೆ. ನ್ಯಾಯಾಲಯದ ತೀರ್ಪನ್ನು ಆಧರಿಸಿ ಅನರ್ಹತೆಯನ್ನು ಹಿಂಪಡೆದಿರುವುದಾಗಿ ಲೋಕಸಭೆ ಪ್ರಧಾನ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

Advertisement

2009ರ ಕೊಲೆಯತ್ನ ಪ್ರಕರಣದಲ್ಲಿ ಕವರಟ್ಟಿಯ ಸೆಷನ್ಸ್‌ ನ್ಯಾಯಾಲಯವು ಫೈಜಲ್‌ಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳ ದಂಡ ವಿಧಿಸಿತ್ತು. ಹೀಗಾಗಿ, ಜ.11ರರಂದು ಮೊದಲ ಬಾರಿಗೆ ಅನರ್ಹಗೊಳಿಸಲಾಗಿತ್ತು. ನಂತರ ಫೈಜಲ್‌ಗೆ ನೀಡಿದ್ದ ಶಿಕ್ಷೆಯನ್ನು ವಜಾಗೊಳಿಸಲು ಕೇರಳ ಹೈಕೋರ್ಟ್‌ ನಿರಾಕರಿಸಿದ್ದರಿಂದ ಅ.4ಕ್ಕೆ 2ನೇ ಬಾರಿಗೆ ಅನರ್ಹಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next