Advertisement
ಕಸ ವಿಂಗಡಣೆ ಪ್ರಮಾಣ (ಸ್ಕೋರ್) ಈ ವಾರ್ಡ್ ಗಳಲ್ಲಿ ಕೇವಲ ಒಂದು ಪ್ರಮಾಣಕ್ಕೆ ಇಳಿದಿರುವುದು ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಇಳಿಜಾರಿಗೆ ಇಳಿದಿರುವುದು ಸಾಬೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಕಸವಿಂಗಡಣೆಗೆ ಆದ್ಯತೆ ನೀಡದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಪಾಲಿಕೆ ಮುಂದಾಗಿದೆ. ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಹಾಗೂ ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಗಳಿಗೆ ಎಷ್ಟು ತ್ಯಾಜ್ಯ ಹೋಗುತ್ತಿದೆ ಎಂದು ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಜುಲೈ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್‌ಗಳಲ್ಲಿ ಸಂಗ್ರಹವಾದಕಸದ ಪ್ರಮಾಣ, ಕಸ ವಿಂಗಡಣೆ, ಕಸ ವಿಲೇವಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡಪ್ರಮಾಣ ಎಲ್ಲವನ್ನೂ ಪರಿಶೀಲನೆ ಮಾಡಿ ಎಲ್ಲ ವಾರ್ಡ್ ಗಳಿಗೂ ರ್‍ಯಾಂಕ್ ನೀಡಲಾಗಿದೆ. ಇದರಲ್ಲಿ ಹಲವು ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೋಚನೀಯ ಸ್ಥಿತಿಗೆ ತಲುಪಿರುವುದು ಸ್ಪಷ್ಟವಾಗಿದೆ.
Related Articles
Advertisement
ನಗರದಲ್ಲಿಕಸ ವಿಂಗಡಣೆ ಚಿತ್ರಣ : ನಗರದಲ್ಲಿ ಯಾವ ವಾರ್ಡ್‌ನಲ್ಲಿ ಎಷ್ಟು ಕಸ ವಿಂಗಡಣೆ ಆಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದ್ದು,ಇದನ್ನು ಸರಿಪಡಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ತಿಳಿಸಿದರು. ನಗರದಲ್ಲಿ ಹಸಿಕಸ ಹಾಗೂ ಒಣಕಸ ವಿಂಗಡಣೆ ಪ್ರಮಾಣ ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಕಸ ವಿಂಗಡಣೆ ಮೇಲ್ವಿಚಾರಣೆ ಲೋಪ ವೆಸಗುವ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.