Advertisement

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

03:45 PM May 16, 2024 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಒಂದು ಮನೆಗೆ ಹೆಚ್ಚೆಂದರೆ ಸಾವಿರಾರು ರೂ. ವಿದ್ಯುತ್‌ ಬಿಲ್‌ ಬರಬಹುದು. ಆದರೆ, ಜೆಬಿ ಕಾವಲ್‌ನ ಕೃಷ್ಣಾನಂದ ನಗರ ಪೊಲೀಸ್‌ ಕ್ವಾರ್ಟರ್ಸ್‌ ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ರೂ. ಕರೆಂಟ್‌ ಬಿಲ್‌ ಬಂದಿದ್ದು, ಇದನ್ನು ಕಂಡು ಮನೆ ಮಾಲೀಕರು ಶಾಕ್‌ ಆಗಿದ್ದಾರೆ. ತಾಂತ್ರಿಕ ದೋಷದಿಂದ 17 ಕೋಟಿ ರೂ. ಎಂದು ನಮೂದಾಗಿರಬಹುದು ಎನ್ನಲಾಗಿದೆ.

Advertisement

ಜೆಬಿ ಕಾವಲ್‌ನ ಕೃಷ್ಣಾನಂದ ನಗರ ಪೊಲೀಸ್‌ ಕ್ವಾರ್ಟರ್ಸ್‌ ಮನೆಗೆ ಮೇ 5ರಂದು ವಿದ್ಯುತ್‌ ಬಿಲ್‌ ನೀಡಲಾಗಿತ್ತು. ಬಿಲ್‌ನಲ್ಲಿ ಒಟ್ಟು 17,15,75,596 ಎಂದು ನಮೂದಿಸಲಾಗಿದೆ. ಇದು ಬೆಸ್ಕಾಂ ಮೀಟರ್‌ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಬೇರೇನಾದರೂ ಸಮಸ್ಯೆ ಆಗಿದೆಯಾ ಎಂಬ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.

ನಗರದಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ 1 ರಿಂದ 3 ಕೋಟಿ ರೂ. ವಿದ್ಯುತ್‌ ಬಿಲ್‌ ಬರುವುದು ಸಾಮಾನ್ಯ. ಪೊಲೀಸ್‌ ಕ್ವಾರ್ಟರ್ಸ್‌ನ ಮನೆಯೊಂದಕ್ಕೆ 17 ಕೋಟಿ ರೂ. ಬಿಲ್‌ ನೀಡಿರುವ ಬೆಸ್ಕಾಂ ಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 17 ಕೋಟಿ ರೂ. ಕರೆಂಟ್‌ ಬಿಲ್‌ ಕಂಡು ಇಲ್ಲಿನ ನಿವಾಸಿಗಳು ದಂಗಾಗಿದ್ದಾರೆ.

ಇಷ್ಟೊಂದು ವಿದ್ಯುತ್‌ ಬಿಲ್‌ ಬರುವುದಕ್ಕೆ ಸಾಧ್ಯವಿಲ್ಲ. ಅಷ್ಟು ವಿದ್ಯುತ್‌ ಬಳಸಿಯೇ ಇಲ್ಲ ಎಂದು ಇಲ್ಲಿನ ನಿವಾಸಿಗಳು ಅಚ್ಚರಿಗೊಂಡಿದ್ದಾರೆ. ಇದೀಗ, 17 ಕೋಟಿ ಬಿಲ್‌ನ ಚಿತ್ರಗಳು ಎಲ್ಲೆಡೆ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್‌ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next