Advertisement

3 ತಿಂಗಳೊಳಗೆ ಎಲ್ಲ 94 ಸಿ, 94ಸಿಸಿ ಅರ್ಜಿ ವಿಲೇವಾರಿ

01:51 AM Jun 19, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 94 ಸಿ ಮತ್ತು 94 ಸಿಸಿಯಡಿಯಲ್ಲಿ ಬಂದಿರುವ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ಶ್ರೇಣಿಯ ಅಧಿಕಾರಿಗಳು 5 ದಿನಗಳೊಳಗೆ ವಿಂಗಡಿಸಿ, ವಿಶೇಷ ಆಂದೋಲನ ನಡೆಸಿ ಮುಂದಿನ 3 ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸೂಚಿಸಿದ್ದಾರೆ.

Advertisement

ಪ್ರವಾಹ, ಬರ ಪರಿಹಾರ ಕ್ರಮಗಳು ಮತ್ತು ಕಂದಾಯ ಇಲಾಖಾ ವಿಷಯಗಳ ಕುರಿತಂತೆ ಮಂಗಳವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಬಂದಿರುವ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಗ್ರಾಮ ಕರಣಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

994 ಸಿಯಡಿ ಜಿಲ್ಲೆಯಲ್ಲಿ 1,07,190 ಅರ್ಜಿ ಸ್ವೀಕೃತ ವಾಗಿದ್ದು, 45,012 ಜನರಿಗೆ ಹಕ್ಕುಪತ್ರ ನೀಡಲಾಗಿದೆ. 94 ಸಿಸಿಯಡಿ 40,245 ಅರ್ಜಿಗಳ ಪೈಕಿ 23,038 ಜನರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು. ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾೖಕ್‌ ಮತ್ತು ಹರೀಶ್‌ ಪೂಂಜ ಮಾತನಾಡಿ, ಜಿಲ್ಲೆಯಲ್ಲಿ 94 ಸಿ ಹಾಗೂ 94ಸಿಸಿ ಅರ್ಜಿಗಳು ಪೂರ್ಣ ಪ್ರಮಾಣದಲ್ಲಿ ಇತ್ಯರ್ಥವಾಗುತ್ತಿಲ್ಲ. ಗ್ರಾಮಕರಣಿಕರಿಂದ ಆರಂಭವಾಗಿ ವಿವಿಧ ಸ್ತರದ ಅಧಿಕಾರಿಗಳು ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಚಿವ ಖಾದರ್‌ ಮಾತನಾಡಿ, ಅರ್ಜಿ ಪಡೆದಂತಹ ಗ್ರಾ.ಪಂ.ಗಳು ನಿಗದಿತ ದಿನಾಂಕದೊಳಗೆ ತಲಾ 100 ಅರ್ಜಿ ಗಳಂತೆ ಬಂದಿರುವ ಅರ್ಜಿಗಳನ್ನು ಇತ್ಯರ್ಥ ಮಾಡ ಬೇಕು. ಹಕ್ಕುಪತ್ರಗಳನ್ನು ಒಂದೇ ಬಾರಿ ನೀಡಬೇಕು ಎಂದರು.

ಪ್ರಾಪರ್ಟಿ ಕಾರ್ಡ್‌ ಸಮಸ್ಯೆ; ಸೂಚನೆ
ಮಂಗಳೂರಿನಲ್ಲಿ ಜಾರಿಯಲ್ಲಿರುವ ಪ್ರಾಪರ್ಟಿ ಕಾರ್ಡ್‌ ನಿಯಮದಲ್ಲಿ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಇತ್ಯರ್ಥ ಪಡಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿ ದರು. ನಗರದ ಭೂಮಿಯ ವಿವರದಲ್ಲಿ ಸೂಕ್ತ ದಾಖಲೆ ಮತ್ತು ಅರ್ಹತೆ ಒದಗಿಸುವ ನಿಟ್ಟಿನಲ್ಲಿ ಪ್ರಾಪರ್ಟಿ ಕಾರ್ಡ್‌ ಅಗತ್ಯ.

Advertisement

ಲೋಪಗಳನ್ನು ಸರಿಪಡಿಸೋಣ ಎಂದು ಸಚಿವ ಖಾದರ್‌ ಹೇಳಿದರು. ಸಮಸ್ಯೆ ಇರುವ ನಿಗದಿತ 5 ಜನರ ಅರ್ಜಿಗಳನ್ನು ತರಿಸಿಕೊಂಡು ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ದೇಶಪಾಂಡೆ ಹೇಳಿದರು.

ಶಾಸಕ-ತಹಶೀಲ್ದಾರ್‌ ಮಾತಿನ ಚಕಮಕಿ
ಶಾಸಕ ಹರೀಶ್‌ ಪೂಂಜ ಮಾತನಾಡಿ, 94 ಸಿ, 94ಸಿಸಿ ಯಡಿ ಅಕ್ರಮ-ಅವ್ಯವಹಾರಗಳು ನಡೆಯುತ್ತಿವೆ. ಗ್ರಾಮ ಕರಣಿಕರಿಂದ ತಹಶೀಲ್ದಾರ್‌ವರೆಗಿನ ಅಧಿಕಾರಿಗಳು ಪಾಲು ದಾರರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದರು. ತತ್‌ಕ್ಷಣವೇ ಸಚಿವ ದೇಶಪಾಂಡೆ ಬೆಳ್ತಂಗಡಿ ತಹಶೀಲ್ದಾರ್‌ ಅವರನ್ನು ಕರೆಸಿ ಈ ಬಗ್ಗೆ ಉತ್ತರ ಕೇಳಿದರು. ತಹಶೀಲ್ದಾರ್‌ ಮಾತನಾಡಿ, ಇದು ಸುಳ್ಳು ಎಂದರು. ಈ ವೇಳೆ ಶಾಸಕರಾದ ಸಂಜೀವ ಮಠಂದೂರು ಸೇರಿದಂತೆ ಇತರರು ತಹಶೀಲ್ದಾರ್‌ ಮಾತನ್ನು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಯಿತು.

ತಹಶೀಲ್ದಾರ್‌ ಮಾತನಾಡಿ, ಚುನಾವಣಾ ನೀತಿಸಂಹಿತೆ ಮತ್ತು ತಾಂತ್ರಿಕ ಕಾರಣದಿಂದಾಗಿ ಮಾತ್ರ ಅರ್ಜಿ ವಿತರಣೆ ಯಲ್ಲಿ ತಡವಾಗಿದೆ. ಆದರೆ ಈ ವಿಚಾರದಲ್ಲಿ ನನ್ನ ಮೇಲೆ ಯಾರಾದರೂ ಯಾವುದೇ ಆರೋಪವನ್ನು ಬೊಟ್ಟುಮಾಡಿ ತೋರಿಸಿದರೆ ನಾನು ಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದರು. ಹರೀಶ್‌ ಪೂಂಜ ಮಾತನಾಡಿ, ತಹಶೀಲ್ದಾರ್‌ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿಲ್ಲ ಎಂದರು. ಜಿಲ್ಲಾಧಿಕಾರಿ ಮಾತನಾಡಿ, ಎಲ್ಲ ಅಧಿಕಾರಿಗಳನ್ನು ದೂರುವ ಬದಲು ನಿಗದಿತವಾಗಿ ಇಂತಹ ಅಧಿಕಾರಿ ಎಂಬುದನ್ನು ತಿಳಿಸಿದರೆ ಅವರ ಬಗ್ಗೆ ತನಿಖೆ ಮಾಡಿಸಬಹುದು ಎಂದರು. ಸಚಿವ ದೇಶಪಾಂಡೆ ಮಾತನಾಡಿ, ಜಿಲ್ಲಾಧಿಕಾರಿ ಅವರು ಬೆಳ್ತಂಗಡಿ ತೆರಳಿ ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಮಂಗಳೂರು ನಗರದ ಮಳೆ ನೀರಿನ ಚರಂಡಿಗಳಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಬಾವಿಗಳು ಕಲುಷಿತವಾ ಗುತ್ತಿದೆ. ರಾಜ ಕಾಲುವೆಗಳ ಹೂಳು ತೆಗೆದಿದ್ದರೂ ಚರಂಡಿ ಹೂಳು ತೆಗೆದಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.

ಐವನ್‌ ಡಿ’ಸೋಜಾ, ಮೀನಾಕ್ಷಿ ಶಾಂತಿಗೋಡು, ಡಾ| ಸೆಲ್ವಮಣಿ ಉಪಸ್ಥಿತರಿದ್ದರು.

ಉಡುಪಿ-ಮಂಗಳೂರಲ್ಲಿ ಸಚಿವರ ಮಾತಿನ ಚಾಟಿ
– ನನಗಾದರೆ ವಯಸ್ಸಾಯಿತು, ನೀವು ಯುವಕರಿದ್ದೀರಿ. ನಿಮಗ್ಯಾಕೆ ಕೆಲಸ ಮುಗಿಸಲು ಹೆಚ್ಚುವರಿ ಕಾಲಾವಕಾಶ?- ಅಧಿಕಾರಿಗಳಿಗೆ ಸಚಿವರ ಪ್ರಶ್ನೆ.
– ಅಧಿಕಾರಿಗಳು ರಾತ್ರಿ 8ರವರೆಗೂ ಕೆಲಸ ಮಾಡಿ. ಮನೆಯವರು ಬಯ್ಯದೆ ಹೊಗಳಬಹುದು. ಬೇರೆಲ್ಲಿಗೂ ಹೋಗದೆ ಕಚೇರಿಯಲ್ಲೇ ಇದ್ದಾರೆ ಎಂಬ ಸಮಾಧಾನವೂ ಅವರಿಗೆ ಉಂಟಾಗಬಹುದು- ಹಾಸ್ಯಮಿಶ್ರಿತ ಹಿತವಚನ.
– ಅಧಿಕಾರಿಗಳನ್ನು ತನ್ನ ಪಕ್ಕಕ್ಕೆ ಕರೆದು ವಿಚಾರಿಸಿ, ಸೂಚನೆ.
– ಸ್ವತ್ಛತಾ ಆಂದೋಲನದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಳ್ಳಿ.
– ಟ್ಯಾಂಕರ್‌ನ ಬೆನ್ನು ಬೀಳುವ ಬದಲು, ನೀರಿಂಗಿಸುವ ಬಗ್ಗೆ ವಿಶೇಷ ಒತ್ತು ನೀಡಲು ಸೂಚನೆ.
– ಅಡಿಕೆ ಕೊಳೆರೋಗಕ್ಕೆ ತೋಟಗಾರಿಕೆ ಇಲಾಖೆಯಿಂದ ಪರಿಹಾರದ ಪರಿಶೀಲನೆ
– ಅಧಿಕಾರಿಗಳು ಬೆಳಗ್ಗೆ ಸ್ಥಳ ಭೇಟಿ ಮಾಡಲೇಬೇಕು; ಈ ಬಗ್ಗೆ ದಾಖಲೀಕರಣ ಆಗಬೇಕು.
– ರಾಜಕಾಲುವೆ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಿ.
– ಬಗರ್‌ಹುಕುಂ ಸಮಿತಿ ರಚನೆ ಕಡ್ಡಾಯ.

ಘಾಟಿ ರಸ್ತೆ ಸುಧಾರಣೆಗೆ ಕ್ರಮ
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮಾತನಾಡಿ, ಘಾಟಿಗಳಲ್ಲಿ ಈ ಬಾರಿ ಸಮಸ್ಯೆ ಆಗದಂತೆ ಪಿಡಬ್ಲ್ಯುಡಿ ಮತ್ತು ರಾ.ಹೆ. ಪ್ರಾಧಿಕಾರದ ನೆರವು ಅಗತ್ಯವಿದೆ ಎಂದರು. ಸಂಜೀವ ಮಠಂದೂರು ಮಾತನಾಡಿ, 6 ತಿಂಗಳು ಏರ್‌ಪೋರ್ಟ್‌ ಬಂದ್‌ ಮಾಡಿದರೆ ಘಾಟಿಯ ಸಮಸ್ಯೆ ಏನು ಎಂಬುದು ಗೊತ್ತಾಗುತ್ತದೆ ಎಂದರು. ಹೆದ್ದಾರಿ ಇಲಾಖೆಯ ಅಧಿಕಾರಿ ಮಾತನಾಡಿ, ಸಂಪಾಜೆ ಘಾಟಿಯಲ್ಲಿ ಶಾಶ್ವತ ಕಾಮಗಾರಿ ನಡೆಸಲು 47 ಕೋ.ರೂ. ಅಗತ್ಯವಿದೆ ಎಂದು ಈಗಾಗಲೇ ಕೇಂದ್ರ, ರಾಜ್ಯಕ್ಕೆ ಪತ್ರ ಬರೆಯಲಾಗಿದೆ. ಶಿರಾಡಿ ರಸ್ತೆ ಸುಧಾರಣೆಗೆ 35 ಕೋ.ರೂ. ಅಗತ್ಯವಿದೆ ಎಂದರು. ಈ ಬಗ್ಗೆ ಸರಕಾರಕ್ಕೆ ಕೊಟ್ಟ ಡಿಪಿಆರ್‌ ಕುರಿತ ವಿವರವನ್ನು ಉಲ್ಲೇಖೀಸಿ ಡಿಸಿ ಕೇಂದ್ರ, ರಾಜ್ಯದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ದೇಶಪಾಂಡೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next