Advertisement

ನಿರುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯ: ವಿಲೇವಾರಿಗೆ ಕಾಯುತ್ತಿರುವ ಪಂಚಾಯತ್‌

01:43 AM Jan 31, 2020 | Sriram |

ಪಡುಬಿದ್ರಿ: ಇಲ್ಲಿನ ಗ್ರಾ. ಪಂ.ವ್ಯಾಪ್ತಿಯ ನಡ್ಸಾಲು ಅಥವಾ ಪಾದೆಬೆಟ್ಟು ಗ್ರಾಮಗಳಲ್ಲಿ ಎಲ್ಲೂ ಸ್ಥಳಾವಕಾಶವಿರದೇ ಗ್ರಾ.ಪಂ.ಕಟ್ಟಡದ ಮುಂದೆಯೇ ತಲೆ ಎತ್ತಿ ನಿಂತಿರುವ ಪಡುಬಿದ್ರಿಯ ಎಸ್‌ಎಲ್‌ಆರ್‌ಎಂ ಘಟಕಕ್ಕೆ ನಿತ್ಯ ಬರುತ್ತಿರುವ ತ್ಯಾಜ್ಯ ಸಂಗ್ರಹದಲ್ಲಿ ಪುನರ್‌ ಬಳಕೆಯಾಗದೇ ಉಳಿದುಕೊಳ್ಳುವ ನಿರುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿ
ಪಂಚಾಯತ್‌ ಅಂಗಳದಲ್ಲಿಯೇ ಕಳೆದ 9ತಿಂಗಳಿನಿಂದ ಹೆೇರಿಸಲ್ಪಟ್ಟಿದೆ.

Advertisement

ಇದರಲ್ಲಿ ಪ್ಯಾಡುಗಳು, ಪ್ಯಾಂಪರ್, ಚಪ್ಪಲಿ, ಥರ್ಮೋಕೂಲ್‌ನಂತಹಾ ತ್ಯಾಜ್ಯಗಳಿದ್ದು 9 ತಿಂಗಳ ಹಿಂದೆ ಸ್ಥಳೀಯರೊಬ್ಬರು ಗ್ರಾಮಸಭೆಯಲ್ಲೇ ದನಿ ಎತ್ತುವ ಮೊದಲು ಇವುಗಳನ್ನು ತಿಂಗಳಿಗೊಮ್ಮೆ ಪಂಚಾಯತ್‌ಅಂಗಳದಲ್ಲೇ ಜೆಸಿಬಿ ಮೂಲಕ ಗುಂಡಿತೋಡಿ ಹೊಳುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ. ಚಿತ್ರದಲ್ಲಿ ಕಾಣುವ ಸುಂದರ ಬಯಲು ಪ್ರದೇಶವು ಮುಂದೆ ತರಕಾರಿ ಅಥವಾ ಹೂಗಿಡಗಳೂ ಬೆಳೆಯದ ಫಲವತ್ತತೆಯನ್ನು ಕಲೆದುಕೊಂಡಿರುವ ಬರಡು ಭೂಮಿಯಾಗಿ ಮಾರ್ಪಟ್ಟಿದೆ.
ಪಂಚಾಯತ್‌ ಕಚೇರಿಯ ಉದ್ಘಾಟನೆಯಾದ ಬಳಿಕ ಇದನ್ನೀಗ ಇನ್ನೊಂದು ಪಟ್ಟಾ ಸ್ಥಳದ ಬದಿಯಲ್ಲೇ ಪಂಚಾಯತ್‌ ಬಯಲಲ್ಲಿ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗುತ್ತಿದೆ. ಇದರ ಪರಿಹಾರಕ್ಕಾಗಿ ಎರಡು ದಿನಗಳ ಹಿಂದೆಯಷ್ಟೇ ಗ್ರಾ. ಪಂ. ಸೌಕರ್ಯ ಸಮಿತಿ ಸಭೆ ಸೇರಿ ಎಸ್‌ಎಲ್‌ಆರ್‌ಎಂ ಘಟಕದ ನಿರ್ವಹಣೆಯ ಅನುಭವ ಹೊಂದಿರುವವರೊಂದಿಗೆ ಚರ್ಚಿಸಿ ಯಾವುದೇ ನಿರ್ದಾರಕ್ಕೆ ಬಾರದೇ ಮು,ದಿನ ಸಾಮಾನ್ಯ ಸಭೆಯ ತೀರ್ಮಾನಕ್ಕಾಗಿ ಮುಂದೂಡಲ್ಪಟ್ಟಿದೆ.

ಇನ್ಸಿನ್‌ರೇಟರ್‌ ಅತ್ಯಗತ್ಯ
ಈ ಕುರಿತಾಗಿ ಘಟಕ ನಿರ್ವಹಣೆ ಮಾಡುತ್ತಿರುವ ಉದ್ಯಮಿ ರಮೀಝ್ ಹುಸೈನ್‌ ಪಡುಬಿದ್ರಿಅವರನ್ನು ಮಾತನಾಡಿಸಿದಾಗ ನಿರುಪಯುಕ್ತ ಪ್ಲಾಸ್ಟಿಕ್‌ಅನ್ನು ದಹಿಸುವುದು ಅತ್ಯವಶ್ಯಕವಾಗಿದೆ. ಪ್ಯಾಡುಗಳು ಮತ್ತು ಪ್ಯಾಂಪರ್ಗಳಿಗಾಗಿ ಜಿ. ಪಂ. ಆರೋಗ್ಯ ಇಲಾಖೆ ಮತ್ತು ರಾಮ್‌ಕೀ ಸಂಸ್ಥೆಯೊಂದಿಗೆ ಒಪ್ಪಂದವೊಂದು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದ್ದು ಆ ಬಳಿಕ ಇವುಗಳ ವಿಲೇವಾರಿಯಾಗಲಿದೆ.
ನಿರುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯಕ್ಕಾಗಿಯೇ ಪರಿಸರ ಸಹ್ಯವಾಗಿರುವ ಕನಿಷ್ಟ 25ಲಕ್ಷ ರೂ.
ಹೂಡಿಕೆಯಾಗಬೇಕಿರುವ ಇನ್ಸಿನ್‌ರೇಟರ್‌ ಮತ್ತು ಸೂಕ್ತ ಸ್ಥಳಾವಕಾಶ ಅತ್ಯಗತ್ಯವಾಗಿದೆ. ವಾರ್ಷಿಕ 7ಲಕ್ಷ ರೂ. ಅಂದಾಜು ಖರ್ಚು ಇವುಗಳಿಗೆ ತಗಲಬಹುದಾಗಿದೆ. ಇದನ್ನು ಅನುಷ್ಟಾನಿಸಿದಾಗ ನಿರುಪಯುಕ್ತ ಪ್ಲಾಸ್ಟಿಕ್‌ ಹಾಗೂ ಹಸಿ ತರಕಾರಿ ತ್ಯಾಜ್ಯದ ನಿರ್ವಹಣೆ ಸಾಧ್ಯ ಎಂಬುದಾಗಿ ಅವರು ಹೇಳಿದ್ದಾರೆ.

ಗ್ರಾ. ಪಂ. ಉತ್ಸುಕವಾಗಿದೆ
ಸೌಕರ್ಯ ಸಮಿತಿಯಲ್ಲಿ ಈಗಾಗಲೇ ಚರ್ಚಿಸಿದ್ದೇವೆ. ಗ್ರಾ. ಪಂ. ಈ ಕುರಿತಾಗಿ ಉತ್ಸುಕವಾಗಿದೆ. ತನ್ನಲ್ಲಿರುವ ಸಂಪನ್ಮೂಲಗಳಿಂದ ಇದಕ್ಕೆ ಬೇಕಾಗಿರುವ ಹೆಚ್ಚುವರಿ ಮೊತ್ತವನ್ನು ಗ್ರಾ. ಪಂ. ಭರಿಸಿಕೊಳ್ಳಲಿದೆ. ಗ್ರಾಮದ ಜನತೆಯ ಹಿತದೃಷ್ಟಿಯಿಂದ ತ್ಯಾಜ್ಯ ವಿಲೇವಾರಿಗೆ ಅತ್ಯಾವಶ್ಯಕವಾಗಿರುವುದರಿಂದ ಫೆಬ್ರವರಿ ತಿಂಗಳ ಸಾಮಾನ್ಯ ಸಭೆಯಲ್ಲಿ ಈ ಕುರಿತಾದ ನಿರ್ಣಯವನ್ನು ಮಂಡಿಸಿ ಸೂಕ್ತ ಟೆಂಡರು ಕರೆದು ಸೂಕ್ತ ವ್ಯಕ್ತಿಗೆ ಇದನ್ನು ನಿರ್ವಹಿಸಿಕೊಡಲಾಗುವುದು ಎಂದು ಪಡುಬಿದ್ರಿ ಗ್ರಾ.ಪಂ. ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next