Advertisement

ಅನುಮತಿಯಿಲ್ಲದೆ ಚಿತ್ರ ಬಳಸಿದಕ್ಕೆ ಅಸಮಾಧಾನ

05:33 PM Apr 01, 2019 | Team Udayavani |

ಶಿರಸಿ: ಕಲಾವಿದನ ಅನುಮತಿ ಪಡೆಯದೇ ಆತ ಬಿಡಿಸಿದ ಚಿತ್ರವೊಂದು ಸೀರೆಯ ಮೇಲೂ ಬಂದ ವಿಲಕ್ಷಣ ಪ್ರಸಂಗ ಬೆಳಕಿಗೆ ಬಂದಿದ್ದು, ಇದು ಕಲಾವಿದರಿಗೆ ಆದ ಶೋಷಣೆ ಅಲ್ಲದೇ ಮತ್ತೇನು ಎಂದು ಜಿಲ್ಲಾ ಚಿತ್ರಕಲಾವಿದರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಶಿರಸಿಯ ಗಣೇಶ ನಗರದ ಚಿತ್ರ ಕಲಾವಿದ ಪ್ರಕಾಶ ನಾಯ್ಕ ಅವರು ಕಳೆದ 20 ವರ್ಷಗಳಿಂದಲೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪೇಂಟಿಂಗ್‌ ಗಳನ್ನು ರಚಿಸುತ್ತಿದ್ದಾರೆ. ಅವುಗಳಲ್ಲಿ ಬೆಂಗಳೂರು, ಮುಂಬಯಿ ಹಾಗೂ ಕೆಲವು ಖಾಸಗಿ ಆರ್ಟ್‌ ಗ್ಯಾಲರಿಗಳಲ್ಲಿ ಕೂಡ ಇದೆ. ವೃತ್ತಿನಿರತ ಕಲಾವಿದರಾಗಿ ಕೂಡ ಕಾರ್ಯ ಮಾಡುತ್ತಿದ್ದಾರೆ. ಅವರ ಭಾರತೀಯ ಸಾಂಪ್ರದಾಯಿಕ ರೂಪದ ಸೆಮಿ ಮಾಡರ್ನ್ ಪೇಂಟಿಂಗ್‌ಗಳಿಗೆ ಸಾಕಷ್ಟು ಬೇಡಿಕೆ ಕೂಡ ಇದೆ. ಇವರು ಶಿರಸಿಯವರು, ನಮ್ಮ ಕಲಾವಿದರು ಎನ್ನಲು ನಮಗೆ ಹೆಮ್ಮೆ ಇದೆ ಎಂದು ಸಂಘ ಹೇಳಿದೆ.

ಧಾರವಾಡದಲ್ಲಿ ನಡೆದ ಕಲಾ ಶಿಬಿರದಲ್ಲಿ ಭಾಗವಹಿಸಲು ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಇವರ ಚಿತ್ರಗಳು ರೇಷ್ಮೆ ಸಾರಿಗಳ ಮೇಲೆ ಪ್ರಿಂಟ್‌ ರೂಪದಲ್ಲಿ ಬಂದ ವಿಚಾರ ತಿಳಿಸಿದಾಗ ಸಂತೋಷ, ಆಶ್ಚರ್ಯ ಆಯಿತು. ಆದರೆ, ತಾನು ಯಾರಿಗೂ ಹೀಗೆ ವ್ಯವಹಾರಿಕವಾಗಿ ಮುದ್ರಿಸಲು ಅನುಮತಿ ನೀಡಿಲ್ಲ, ಆದರೂ ಬಳಸಿದ್ದಾರೆ ಎಂಬ ನೋವು ವ್ಯಕ್ತಪಡಿಸಿದ್ದಾಗಿ ಸಂಘ ತಿಳಿಸಿದೆ.

ಸಾರಿಯಲ್ಲಿ ಬಂದ ಚಿತ್ರಗಳನ್ನು ಮುಂಬಯಿಯ ಪ್ರಸಿದ್ಧ ಸ್ಟುಡಿಯೋ ಒಂದರ ಗ್ಯಾಲರಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಸಾರಿ ಉದ್ಯಮದವರು ಕಲಾವಿದ ಪ್ರಕಾಶ ನಾಯಕರ ಚಿತ್ರಗಳನ್ನು ಕದ್ದು, ಕಲಾವಿದನ ಅನುಮತಿ ಇಲ್ಲದೇ ಉಚಿತವಾಗಿ ಬಳಸಿದ್ದಾರೆ. ಇದರಿಂದ ಕಲೆಗೆ, ಕಲಾವಿದರಿಗೆ ಅನ್ಯಾಯವಾಗುತ್ತದೆ. ಸೂಕ್ತ ಗೌರವಧನ ಕೊಟ್ಟು ಅನುಮತಿ ಪಡೆದು ಬಳಸಬೇಕಿತ್ತು. ಶಿರಸಿ ಕಲಾವಿದನಿಗೆ, ನಮ್ಮ ಸಂಘದ ಸದಸ್ಯನಿಗಾದ ಅನ್ಯಾಯವನ್ನು ಜಿಲ್ಲಾ ಚಿತ್ರಕಲಾ ಪರಿಷತ್ತು ಖಂಡಿಸುತ್ತದೆ ಎಂದು ಪ್ರಕಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಎಂ. ಬೊಮ್ನಳ್ಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next