Advertisement

ಡಿಸ್ನಿಲ್ಯಾಂಡ್‌ ನನ್ನ ಕನಸಿನ ಯೋಜನೆ: ಕುಮಾರಸ್ವಾಮಿ

07:29 AM Feb 20, 2019 | Team Udayavani |

ಮಂಡ್ಯ: ಕೃಷ್ಣರಾಜಸಾಗರ ಸಮೀಪ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಬೃಂದಾವನವನ್ನು ಅಭಿವೃದ್ಧಿಪಡಿಸುವುದು ನನ್ನ ಕನಸಿನ ಯೋಜನೆ. ಅದನ್ನು ಮಾಡಿಯೇ ತೀರುವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement

ಕಳೆದ ಬಜೆಟ್‌ನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಅಭಿವೃದ್ಧಿಪಡಿಸಲು ಸೂಚಿಸಿದ್ದೆ. ಆ ಸ್ಥಳದಲ್ಲಿ ಕಾವೇರಿ ಪ್ರತಿಮೆ ನಿರ್ಮಿಸುವುದಾಗಿ ಸಚಿವರು ಹೇಳಿಕೆ ನೀಡಿ ಗೊಂದಲ ಸೃಷ್ಠಿಸಿದರು. ಇದೇ ಯೋಜನೆ ಅನುಷ್ಠಾನಕ್ಕೆ ಮುಳುವಾಗಿತ್ತು.

ಡಿಸ್ನಿಲ್ಯಾಂಡ್‌ ಬೇಡ ಎಂದು ಹೋರಾಟ ಮಾಡುವವರಲ್ಲಿ ನಾನು ಕೈಮುಗಿದು ಮನವಿ ಮಾಡುತ್ತೇನೆ. ಕೆಆರ್‌ಎಸ್‌ ನಮ್ಮ ಆಸ್ತಿ. ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದಿಲ್ಲ. ಅಣೆಕಟ್ಟೆಗೆ ಧಕ್ಕೆಯಾಗದಂತೆ ನೈಪುಣ್ಯತೆ ಹೊಂದಿರುವವರನ್ನು ಕರೆತಂದು ಡಿಸ್ನಿಲ್ಯಾಂಡ್‌ ನಿರ್ಮಿಸುವೆ ಎಂದರು.

ಡಿಸ್ನಿಲ್ಯಾಂಡ್‌ ಕೇವಲ ಮನರಂಜನೆಗಲ್ಲ. ಇದರಿಂದ 40 ರಿಂದ 50 ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ. ಇದರಿಂದ ನಮ್ಮ ಮಕ್ಕಳಿಗೆ ಅನುಕೂಲವಾಗುವುದು. ರೈತರಿಂದ ಯಾವುದೇ ಭೂಮಿ ವಶಪಡಿಸಿಕೊಳ್ಳುವುದಿಲ್ಲ. ವಿವಿಧ ಇಲಾಖೆಗಳಿಗೆ ಸೇರಿದ ಸಾಕಷ್ಟು ಜಮೀನಿದೆ. ಇಲ್ಲಿ ಡಿಸ್ನಿಲ್ಯಾಂಡ್‌ ನಿರ್ಮಾಣ ಮಾಡುವೆ ಎಂದು ಸ್ಪಷ್ಟ ನಿಲುವು ವ್ಯಕ್ತಪಡಿಸಿದರು.

23 ಸಾವಿರ ಕೋಟಿ ರೈತರ ಸಾಲ ಮನ್ನಾ: ಹೆಚ್‌ಡಿಕೆ
ಮಂಡ್ಯ:
ರಾಜ್ಯದಲ್ಲಿ 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಮಾ.31ರೊಳಗೆ 10 ಸಾವಿರ ಕೋಟಿ ರೂ. ಬ್ಯಾಂಕುಗಳಿಗೆ  ಬಿಡುಗಡೆಯಾಗಲಿದೆ. ಮುಂದಿನ ಸಾಲಿನ ಮಾ.31ರೊಳಗೆ 13 ಸಾವಿರ ಕೋಟಿ ರೂ. ಬಿಡುಗಡೆಯಾಗುವುದರೊಂದಿಗೆ ಒಟ್ಟಾರೆ 23 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಆಗಲಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.

Advertisement

ಜಿಲ್ಲೆಯಲ್ಲಿರುವ ಸಹಕಾರಿ ಕ್ಷೇತ್ರದ ರೈತರಿಗೆ 578 ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 92 ಕೋಟಿ ರೂ. ಖಾಸಗಿ ಬ್ಯಾಂಕುಗಳಲ್ಲಿ ಶೇ.97ರಷ್ಟು ಸಾಲ ತೀರುವಳಿಗೆ ಹಣ ಬಿಡುಗಡೆ ಮಾಡಿದೆ. ನಿನ್ನೆ ಸಂಜೆಯವರೆಗೆ 44 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next