ಕ್ಯಾಲಿಫೋರ್ನಿಯಾ: ಜಗತ್ತಿನ ಅತಿ ಪ್ರಸಿದ್ಧ ಥೀಮ್ ಪಾರ್ಕ್, ಡಿಸ್ನಿಲ್ಯಾಂಡ್ ತೆರೆಯಲು ಕೋವಿಡ್ ಸೋಂಕು ಅಡ್ಡಿಯಾಗಿದೆ. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಶೀಘ್ರ ಈ ಥೀಮ್‌ಪಾರ್ಕ್ ತೆರೆಯಲಿದೆ ಎಂದು ಹೇಳಲಾಗಿತ್ತು. ಆದರೆ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ತೀವ್ರ ಸಮಸ್ಯೆಯಾಗಿದೆ.
ಮುಂದಿನ ತಿಂಗಳು ಪಾರ್ಕ್ ತೆರೆಯುವುದಾಗಿ ಹೇಳಲಾದರೂ ಅದರ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಜು.4ರವರೆಗೆ ಥೀಂ ಪಾರ್ಕ್ ತೆರೆಯುವುದರ ಬಗ್ಗೆ ಯಾವುದೇ ಯೋಜನೆಗಳನ್ನು ರೂಪಿಸದಂತೆ ಕ್ಯಾಲಿಫೋರ್ನಿಯಾ ಸರಕಾರ ಡಿಸ್ನಿಲ್ಯಾಂಡ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹೊಸ ನಿಯಮಾವಳಿಗಳನ್ನು ರೂಪಿಸಿ, ನಿರ್ದೇಶನ ಸಿಕ್ಕ ಮೇಲೆಯೇ ಪಾರ್ಕ್ ತೆರೆಯುವುದಾಗಿ ಹೇಳಿದೆ.
ಪಾರ್ಕ್, ಹೊಟೇಲುಗಳನ್ನು ತೆರೆಲು ಸರಕಾರದ ಅನುಮತಿ ಬೇಕೇ ಬೇಕು. ಆದರೆ ಸಾವಿರಾರು ಜನರು ಸೇರುವ ಇಂತಹ ಸ್ಥಳಗಳಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲವನ್ನೂ ಬೇಕಾಬಿಟ್ಟಿಯಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ಸೂಕ್ತ ನಿರ್ದೇಶನಕ್ಕಾಗಿ ಎದುರು ನೋಡುತ್ತಿದ್ದೇವೆ. ಆ ಬಳಿಕವೇ ನಿರ್ದಿಷ್ಟ ದಿನಾಂಕವನ್ನು ಎಂದು ಡಿಸ್ನಿಲ್ಯಾಂಡ್ ಹೇಳಿದೆ.
ಆದರೆ ಡೌನ್‌ಟೌನ್‌ನ ಡಿಸ್ನಿ ಆ್ಯಪಿಂಗ್ ಮತ್ತು ಡೈನಿಂಗ್ ವ್ಯವಸ್ಥೆಯು ಜು.9ರಂದು ತೆರೆದುಕೊಳ್ಳಲಿದೆ. ಇದು ಡಿಸ್ನಿಲ್ಯಾಂಡ್ ರೆಸಾರ್ಟ್ ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.
ಡಿಸ್ನಿಲ್ಯಾಂಡ್ ತೆರೆಯಬೇಕೆಂದು ಪ್ರವಾಸಿಗರು, ಜನರು ಮತ್ತು ಆಡಳಿತದ ಬೇಡಿಕೆ ಇದ್ದರೆ, ಕೋವಿಡ್ ಸೋಂಕು ಹೆಚ್ಚಳವಾ ಗುತ್ತಿರುವುದರಿಂದ ತೆರೆಯುವುದು ಸರಿಯಲ್ಲ ಎನ್ನುವುದು ಇಲ್ಲಿನ ಕಾರ್ಮಿಕರ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಕ್ ತೆರೆಯುವ ಬಗ್ಗೆ ಚರ್ಚೆಗಳು ಜೋರಾಗಿವೆ. ಕಾರ್ಮಿಕರ ಪ್ರತಿಭಟನೆ ಕೂಗೂ ಇದೆ.ಮಾರ್ಚ್ ಮಧ್ಯದಿಂದ ವಾಲ್ಟ್ಡಿಸ್ನಿ ಮತ್ತು ಡಿಸ್ನಿಲ್ಯಾಂಡ್ ಬಾಗಿಲು ಮುಚ್ಚಿದ್ದು, ಇದರಿಂದ ಪ್ರಸಿದ್ಧ ಮನರಂಜನೆ ತಾಣಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಫ್ಲೋರಿಡಾ ಥೀಮ್ ಪಾರ್ಕ್ ಮುಂದಿನ ತಿಂಗಳು ತೆರೆದುಕೊಳ್ಳಲಿದ್ದು, ಸ್ಥಳೀಯ ಆಡಳಿತ ಇದಕ್ಕೆ ಅನುಮತಿಸಿದೆ.