Advertisement

ಬೇಜವಾಬ್ದಾರಿ ತೋರಿದರೆ ಕೆಲಸದಿಂದ ವಜಾ

11:32 AM Dec 23, 2019 | Team Udayavani |

ಮಹಾಲಿಂಗಪುರ: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ರನ್ನಬೆಳಗಲಿ ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಗೆ ರವಿವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

Advertisement

ಮಕ್ಕಳಿಗೆ ಸಿಹಿ ಹಂಚಿ ಮಾತನಾಡಿದ ಕಾರಜೋಳ, ಸರ್ಕಾರಿ ಶಾಲೆಯೆಂದರೆ ಯಾರು ಕೇಳ್ಳೋರಿಲ್ಲ ಎಂದು ತಿಳಿಯಬೇಡಿ. ಮಕ್ಕಳ ವಿಷಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಅಡುಗೆ ಆಯಾಗಳುಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಕ್ಕಳ ಊಟದ ವಸ್ತುಗಳನ್ನು ಸ್ವತ್ಛ ಮಾಡಿ ಬಳಸಬೇಕು. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಮಕ್ಕಳ ಜೀವದ ಜತೆ ಆಟವಾಡುವುದು ಸರಿಯಲ್ಲ. ಕೆಲಸ ಸಮರ್ಪಕವಾಗಿ ಮಾಡದೆ ಇರುವವರನ್ನು ತೆಗೆದುಹಾಕಿ. ಅಡುಗೆ ಆಯಾಗಳನ್ನು ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಎಸ್‌ಡಿಎಂಸಿಯವರನ್ನು ಆಯ್ಕೆ ಮಾಡಿರುವುದು ಏಕೆ? ನಿಮ್ಮ ಮೇಲೆ ಜವಾಬ್ದಾರಿ ಇದೆ. ಶಾಲೆ ಕಡೆಗೆ ಗಮನಹರಿಸಬೇಕು. ಸರಿಯಾಗಿ ನಿಭಾಯಿಸಬೇಕು ಎಂದರು. ವಿದ್ಯಾರ್ಥಿಗಳ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜವಾಬ್ದಾರಿಯಿಂದ ಕೆಲಸ ಮಾಡುವವರು ಮಾತ್ರ ಈ ಕೆಲಸದಲ್ಲಿ ಇರಲಿ, ಇಲ್ಲವಾದವರನ್ನು ಕೂಡಲೆ ತೆಗೆದು ಹಾಕಿ ಎಂದು ಸೂಚಿಸಿದರು.

ಶಾಲಾ ಮಕ್ಕಳಿಗೆ ಮತ್ತು ಮಕ್ಕಳ ಪಾಲಕರೊಂದಿಗೆ ಮಾತನಾಡಿ, ಇಂಥ ತೊಂದರೆಗಳು ಬರದಂತೆ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ. ಕಾರಣ ನೀವು ಭಯ ಬೀಳಬೇಡಿ. ಸರ್ಕಾರ ಮಕ್ಕಳ ಸಲುವಾಗಿ ವಿಶೇಷ ಕಾಳಜಿ ವಹಿಸುತ್ತದೆ ಎಂದರು. ಕೆ.ಆರ್‌. ಮಾಚಕನೂರ, ಚಿಕ್ಕಪ್ಪ ನಾಯಿಕ, ಮಹಾಂತೇಶ ಹಿಟ್ಟಿನಮಠ, ಲಕ್ಷ್ಮಣಗೌಡ ಪಾಟೀಲ, ಸಿದ್ದು ಪಾಟೀಲ, ಪಂಡಿತ ಪೂಜಾರಿ, ಅಶೋಕ ಸಿದ್ದಾಪುರ, ಮಹಾಲಿಂಗಪ್ಪ ಲಾಗದವರ, ಗೌಡಪ್ಪ ಬರಮನಿ, ಕರೆಪ್ಪ ಭಾವಿಮನಿ, ಗಂಗಪ್ಪ ನಾಯಕ ಮಹಾಲಿಂಗಪ್ಪ ಪುರಾಣಿಕ, ಮಹಾದೇವ ಮುರುನಾಳ, ಪಾಂಡಪ್ಪ ಸಿದ್ದಾಪೂರ, ಅಶೋಕ ಸಣ್ಣಟ್ಟಿ, ಸದಾಶಿವ ಕುಲಗೋಡ, ಲಕ್ಕಪ್ಪ ಹಂಚಿನಾಳ, ಮಲ್ಲು ಕ್ವಾನೆಗೋಳ,ಪುಟ್ಟು ಕುಲಕರ್ಣಿ, ರಂಗಪ್ಪ ಒಂಟಗೋಡಿ, ಪಾಂಡು ಸಿದ್ದಾಪುರ, ಲಕ್ಷ್ಮಣ ಶಿರೋಳ, ಶಿವಪ್ಪ ಶಿರೋಳ, ಗಂಗಪ್ಪ ಬೀಸನಕೊಪ್ಪ, ಪರಪ್ಪ ದೊಡಟ್ಟಿ, ಅಲ್ಲಪ್ಪ ಸಂಕ್ರಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next