Advertisement

ಆಯುಷ್ಮಾನ್‌ ಕಾರ್ಡ್‌ ಪಡೆಯಲು ನಿರಾಸಕ್ತಿ

04:34 PM Dec 03, 2019 | Team Udayavani |

ಯಾದಗಿರಿ: ಆರ್ಥಿಕವಾಗಿ ದುರ್ಬಲರಾಗಿರುವ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಚಿಕಿತ್ಸೆದೊರೆಯಬೇಕು ಎನ್ನುವ ಮಹತ್ವಾಕಾಂಕ್ಷೆ ಯೋಜನೆಗೆ ಜಿಲ್ಲೆಯಲ್ಲಿ ನಿರಾಸಕ್ತಿ ವ್ಯಕ್ತವಾಗುತ್ತಿದೆ ಎಂದು ಸಂಗತಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಬಯಲಿಗೆ ಬಂದಿದೆ.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯುಷ್ಮಾನ್‌ ಭಾರತಆರೋಗ್ಯ ಕರ್ನಾಟಕ ಯೋಜನೆಕುರಿತಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೋಮವಾರ ನಡೆಸಿದ ನೇರ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದಕೇವಲ 13 ಕರೆಗಳು ಸ್ವೀಕೃತವಾಗಿದೆ. ಯೋಜನೆ ಲಾಭ ಪಡೆಯುವುದರಲ್ಲಿ ಗಡಿ ಜಿಲ್ಲೆಯ ಜನರು ನಿರಾಸಕ್ತಿ ವಹಿಸಿದ್ದಾರೆ. ಜಿಲ್ಲೆಯಲ್ಲಿ 14,15,552 ಜನಸಂಖ್ಯೆಯಲ್ಲಿ ಈವರೆಗೆ ಅಂದಾಜು 75 ಸಾವಿರಜನರು ಮಾತ್ರ ನೋಂದಣಿ ಮಾಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಯೋಜನೆಯಡಿ ಬಿಪಿಎಲ್‌ ಪಡಿತರ ಚೀಟಿಹೊಂದಿರುವ ಕುಟುಂಬದವರು ವರ್ಷದಲ್ಲಿ 5

ಲಕ್ಷ ರೂ.ವರೆಗೆ ಹಾಗೂ ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳು 1.50 ಲಕ್ಷ ರೂ. ವರೆಗೂ ಸಹಪಾವತಿ (ಶೆ.70ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೇ.30ರಷ್ಟು ಸರ್ಕಾರ ಭರಿಸುತ್ತದೆ) ಯೊಂದಿಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.

ವಿಶೇಷವಾಗಿ ಯಾವುದೇ ಪಡಿತರ ಚೀಟಿ ಇಲ್ಲದಿರುವ ಕುಟುಂಬಗಳು ಎಪಿಎಲ್‌ ಕುಟುಂಬ ಎಂದು ಪರಿಗಣಿಸುವ ಅವಕಾಶವೂಯಿದೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 49ಆಸ್ಪತ್ರೆಗಳಲ್ಲಿ ಕಾರ್ಡ್‌ ಪಡೆದ ಕುಟುಂಬದವರು ಚಿಕಿತ್ಸೆ ಪಡೆಯಲು ಅವಕಾಶ ಇದೆ. ಈ ಯೋಜನೆಯಲ್ಲಿ1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯ ಇದ್ದು ಪ್ರಮುಖವಾಗಿ ಹೃದಯ ರೋಗ, ಕ್ಯಾನ್ಸರ್‌, ಕಿಡ್ನಿ ಹರಳು ಸಮಸ್ಯೆ ಅಲ್ಲದೇ ಸುಟ್ಟುಗಾಯಗಳ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳ ಜತೆಗೆ ಶಿಫಾರಸಿನೊಂದಿಗೆ ನೋಂದಾಯಿತ ಖಾಸಗಿಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯಬಹುದು. ತುರ್ತು ಚಿಕಿತ್ಸೆಗಳಿಗೆ ಶಿಫಾರಸು ಇಲ್ಲದೇ ನೇರವಾಗಿ ನೋಂದಾಯಿತಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಆದರೆ ಜಿಲ್ಲಾಡಳಿತ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜಿಲ್ಲೆಯ ಜನರು ಮಾತ್ರ ಸರ್ಕಾರದ ಮಹತ್ವದ ಯೋಜನೆಗೆ ಸ್ಪಂದಿಸದಿರುವುದು ದೌರ್ಭಾಗ್ಯವೇ ಸರಿ. ಆರ್ಥಿಕ, ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿರುವ ಜಿಲ್ಲೆಯ ಆರೋಗ್ಯ ಕ್ಷೇತ್ರವೂ ಅದರ ಸಾಲಿಗೆ ಸೇರಿದೆ.ಇನ್ನಾದರೂ ಸಾರ್ವಜನಿಕರು ಮಹತ್ವದ ಆರೋಗ್ಯ ಯೋಜನೆ ಲಾಭ ಪಡೆಯಲು ಸಾರ್ವಜನಿಕರು ಮುಂದೆ ಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next