Advertisement

ಬಾಯಲ್ಲಿ ನೀರೂರಿಸುವ ಈಶಾನ್ಯ ಭಾರತದ ಖಾದ್ಯಗಳು

01:29 PM Nov 23, 2020 | mahesh |

ನಾವು ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಈಶಾನ್ಯ ಭಾರತದ ಮಂದಿ ಸೇವಿಸುವ ಆಹಾರಗಳು ಕೊಂಚ ಭಿನ್ನವಾಗಿ ನಿಲ್ಲುತ್ತವೆ. ಕೇವಲ ಮಾಂಸಾಹಾರದಲ್ಲಿ ಮಾತ್ರವಲ್ಲದೆ ಸಸ್ಯಾಹಾರದಲ್ಲೂ ಬಗೆ ಬಗೆಯ ಅಡುಗೆಗಳನ್ನು ನಾವು ಈಶಾನ್ಯ ಭಾರತದ ಭಾಗಗಳಲ್ಲಿ ಕಾಣಬಹುದು. ಅಂತಹ ಕೆಲವು ಖಾದ್ಯಗಳ ತಯಾರಿಕೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.


Advertisement

ಕ್ಯಾಬೇಜ್‌ ಸಲಾಡ್‌
ಬೇಕಾಗುವ ಸಾಮಗ್ರಿಗಳು
ಕ್ಯಾಬೇಜ್‌
ಈರುಳ್ಳಿ
ಟೊಮೇಟೊ
ಹಸಿ ಮೆಣಸು
ಎಣ್ಣೆ
ಉಪ್ಪು

ಮಾಡುವ ವಿಧಾನ
ಪಾತ್ರೆಯೊಂದಕ್ಕೆ ಹೆಚ್ಚಿದ ಕ್ಯಾಬೇಜ್‌, ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಎಣ್ಣೆ, ಉಪ್ಪು ಸೇರಿ‌ಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು. ಊಟದೊಂದಿಗೆ ಸೈಡ್‌ ಐಟಮ್‌ ಆಗಿ ಇದನ್ನು ಸವಿಯುವ ಪದ್ಧತಿ ಈಶಾನ್ಯ ಭಾರತದ ರಾಜ್ಯಗಳಲ್ಲಿವೆ.


ಕಣಿಲೆ ಚಟ್ನಿ

ಬೇಕಾಗುವ ಸಾಮಗ್ರಿಗಳು

ಚಿಕ್ಕದಾಗಿ ಹೆಚ್ಚಿದ ಕಣಿಲೆ (ಎಳೆ ಬಿದಿರು)
ಹಸಿಮೆಣಸು
ಉಪ್ಪು
ಮೆಣಸಿನ ಹುಡಿ
ಬೆಳ್ಳುಳ್ಳಿ
ಎಣ್ಣೆ

Advertisement

ಮಾಡುವ ವಿಧಾನ
ಪಾತ್ರೆಯೊಂದಕ್ಕೆ ಹೆಚ್ಚಿದ ಕಣಿಲೆ, ಹಸಿ ಮೆಣಸು, ಉಪ್ಪು, ಮೆಣಸಿನ ಹುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಬೇಕಾಗುವಷ್ಟು ಎಣ್ಣೆ ಸೇರಿಸಿ ಮತ್ತೂಮ್ಮೆ ಚೆನ್ನಾಗಿ ಕಲಕಿ ಒಂದು ಡಬ್ಬದಲ್ಲಿ ಈ ಮಿಶ್ರಣವನ್ನು ತುಂಬಿ 2-3 ವಾರಗಳ ಕಾಲ ಬಿಸಿಲಿನಲ್ಲಿ ಇಡಿ. ಬಳಿಕ ಪಾತ್ರೆಯೊಂದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ ಈ ಮಿಶ್ರಣವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಹುರಿದರೆ ಕಣಿಲೆ ಚಟ್ನಿ ಸವಿಯಲು ಸಿದ್ಧ.

ವೆಜ್‌ ಮೊಮೋಸ್‌
ಬೇಕಾಗುವ ಸಾಮಗ್ರಿಗಳು
1 1/2 ಕಪ್‌ನಷ್ಟು ಹೆಚ್ಚಿದ ಕ್ಯಾಬೇಜ್‌
ಮಧ್ಯಮ ಗಾತ್ರದ ಎರಡು ಈರುಳ್ಳಿ
ಶುಂಠಿ ಪೇಸ್ಟ್‌ ಸ್ವಲ್ಪ
ಬೆಣ್ಣೆ
ಉಪ್ಪು
ಕಾಳುಮೆಣಸಿನ ಹುಡಿ
ಮೈದಾ ಹಿಟ್ಟು

ಮಾಡುವ ವಿಧಾನ:
ಬಾಣಲೆಗೆ ಬೆಣ್ಣೆಯನ್ನು ಹಾಕಿ ಚಿಕ್ಕ ಉರಿಯಲ್ಲಿ ಕಾಯಿಸಿ. ಬೆಣ್ಣೆ ಕರಗುತ್ತಿದ್ದಂತೆ ಅದಕ್ಕೆ ಶುಂಠಿ ಪೇಸ್ಟ್‌, ಹೆಚ್ಚಿದ ಈರುಳ್ಳಿ ಮತ್ತು ಕ್ಯಾಬೇಜ್‌ ಅನ್ನು ಸೇರಿಸಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನಕಾಳಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಬಳಿಕ 4-5 ನಿಮಿಷ ಚೆನ್ನಾಗಿ ಬೇಯಿಸಿ. ಬಳಿಕ ಮೈದಾಹಿಟ್ಟಿಗೆ ನೀರು, ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದದಲ್ಲಿ ಚೆನ್ನಾಗಿ ಕಲಸಿ 15 ನಿಮಿಷ ಬಿಡಿ. ಹಿಟ್ಟನ್ನು ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಚಿಕ್ಕ ಚಿಕ್ಕ ಚಪಾತಿ ಆಕಾರದಲ್ಲಿ ಅವುಗಳನ್ನು ಒರೆದು ಅದರಲ್ಲಿ ಬೇಯಿಸಿದ ಹೂರಣವನ್ನು ತುಂಬಿ. ಬಳಿಕ ಇವುಗಳನ್ನು ಹಬೆಯಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ. ಬಳಿಕ ಇದನ್ನು ಚಟ್ನಿಯೊಂದಿಗೆ ಸವಿಯಿರಿ.


ಮಿಜೋ ವೆಜಿಟೆಬಲ್‌ ಸ್ಟೀವ್‌

ಬೇಕಾಗುವ ಸಾಮಗ್ರಿಗಳು
ಬಟಾಟೆ
ಬೆಂಡೆಕಾಯಿ
ತುಂಡರಿಸಿದ ಬೀನ್ಸ್‌
ಹಸಿ ಮೆಣಸು
ಹೆಚ್ಚಿದ ಕ್ಯಾಬೇಜ್‌
ಬೆಳ್ಳುಳ್ಳಿ
ಶುಂಠಿ
ಉಪ್ಪು
ಎಣ್ಣೆ
ಬೆಣ್ಣೆ
ಅನ್ನ

ಮಾಡುವ ವಿಧಾನ
ಸುಮಾರು 5 ಲೋಟ ನೀರನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದಕ್ಕೆ ಕ್ಯಾಬೇಜ್‌, ಬೀನ್ಸ್‌, ಬಟಾಟೆ ಸೇರಿಸಿ 10 ನಿಮಿಷ ಕುದಿಸಿ. ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಬೆಣ್ಣೆ, ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಬಟಾಟೆ ಬೆಂದಿದೆಯೇ ಎಂಬುದನ್ನು ಖಾತ್ರಿಪಡಿಸಿದ ಬಳಿಕ ಅನ್ನ, ಬೆಂಡೆಕಾಯಿ ಸೇರಿಸಿ ಸ್ಪಲ್ಪ ಸಮಯ ಕುದಿಸಿದರೆ ಮಿಜೋ ವೆಜಿಟೆಬಲ್‌ ಸ್ಟೀವ್‌ ಸವಿಯಲು ಸಿದ್ಧ.


ಉಸೋಯಿ ಊಟಿ

ಬೇಕಾಗುವ ಸಾಮಗ್ರಿಗಳು
ತೆಳ್ಳಗೆ ಹೆಚ್ಚಿದ ಕಣಿಲೆ ತುಂಡುಗಳು
ಹಸಿರು ಬಟಾಣಿ
ಶುಂಠಿ
ಅಕ್ಕಿ
ಎಣ್ಣೆ
ಉಪ್ಪು
ಒಣ ಮೆಣಸು
ಈರುಳ್ಳಿ
ಇಂಗು
ಕೊತ್ತುಂಬರಿ ಸೊಪ್ಪು

ಮಾಡುವ ವಿಧಾನ
ಪಾತ್ರೆಯೊಂದಕ್ಕೆ ಹಸಿರು ಬಟಾಣಿ, ಶುಂಠಿ, ಹೆಚ್ಚಿದ ಕಣಿಲೆ ಅಕ್ಕಿ ಮತ್ತು ನೀರನ್ನು ಹಾಕಿ 20-30 ನಿಮಿಷ ಕುದಿಸಿ. ಬಳಿಕ ಇದಕ್ಕೆ ಎಣ್ಣೆ, ಉಪ್ಪು ಸೇರಿಸಿ ಮತ್ತೆ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಮತ್ತೂಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಎಣ್ಣೆ, ಒಣ ಮೆಣಸು, ಇಂಗು, ಹೆಚ್ಚಿದ ಈರುಳ್ಳಿ ಸೇರಿಸಿ ಒಂದು ನಿಮಿಷ ಹುರಿಯಿರಿ.  ಬಳಿಕ ಈ ಒಗ್ಗರಣೆಯನ್ನು ಬೇಯಿಸಿದ ಪದಾರ್ಥಕ್ಕೆ ಸೇರಿಸಿ. ಬಳಿಕ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಉಸೋಯಿ ಊಟಿ ರೆಡಿ.

Advertisement

Udayavani is now on Telegram. Click here to join our channel and stay updated with the latest news.

Next