Advertisement

ದಿಶಾಗೆ ಮತ್ತೆ 3 ದಿನ ಜೈಲು

12:58 AM Feb 20, 2021 | Team Udayavani |

ಹೊಸದಿಲ್ಲಿ: ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಾದಿತ ಟೂಲ್‌ಕಿಟ್‌ ಎಡಿಟ್‌ ಮಾಡಿರುವ ಆರೋಪ ಹೊತ್ತಿರುವ ಬೆಂಗಳೂರಿನ ಹೋರಾಟಗಾರ್ತಿ ದಿಶಾ ರವಿಯನ್ನು ಮತ್ತೆ 3 ದಿನ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿದೆ.

Advertisement

“ಸಾಕ್ಷ್ಯಗಳನ್ನು ತಿರುಚುವ ಅಪಾಯ ಅಧಿಕವಿದೆ’ ಎಂದು ದಿಲ್ಲಿ ಪೊಲೀಸರು ತೀವ್ರವಾಗಿ ಶಂಕಿಸಿದ್ದರಿಂದಾಗಿ ಪಟಿಯಾಲ ಹೌಸ್‌ ಕೋರ್ಟ್‌ ಶುಕ್ರವಾರ ಈ ತೀರ್ಪು ಪ್ರಕಟಿಸಿದೆ. “ತನಿಖೆಗೆ ಹಾಜರಾಗುವಂತೆ ಮತ್ತೆ ಕೆಲವರಿಗೆ ನೋಟಿಸ್‌ ನೀಡಿದ್ದೇವೆ. ಈ ಪ್ರಕರಣದಲ್ಲಿ ಶಂತನುಗೂ ನೋಟಿಸ್‌ ನೀಡಲಾಗಿದೆ. ದಿಶಾ ಮತ್ತು ಶಂತನು ಅವರನ್ನು ಮುಖಾಮುಖೀಯಾಗಿಸಿ, ಹೆಚ್ಚಿನ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ವಾದಿಸಿದ್ದರು.

ಮಾಧ್ಯಮಗಳಿಗೆ ಸೂಚನೆ: ಏತನ್ಮಧ್ಯೆ, ದಿಶಾ ಪ್ರಕರಣದಲ್ಲಿ ಸಂವೇದನಾಶೀಲತೆ ಕಾಯ್ದುಕೊಳ್ಳುವಂತೆ ದಿಲ್ಲಿ ಹೈಕೋರ್ಟ್‌ ಮಾಧ್ಯಮಗಳಿಗೆ ಸೂಚಿಸಿದೆ. “ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರಕರಣದ ವರದಿ ಮಾಡುವಾಗ ಅಧಿಕೃತ ಮೂಲಗಳನ್ನಷ್ಟೇ ಪರಿಗಣಿಸಬೇಕು’ ಎಂದೂ ನಿರ್ದೇಶಿಸಿದೆ. ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಯಾವುದೇ ತನಿಖಾ ಮಾಹಿತಿಗಳನ್ನು ಸೋರಿಕೆ ಮಾಡಬಾರದು ಎಂದು ದಿಲ್ಲಿ ಪೊಲೀಸರಿಗೆ ಸೂಚಿಸಿದೆ.

ಮಾಧ್ಯಮಗಳಿಗೆ ಪೊಲೀಸರು ತನಿಖಾ ಮಾಹಿತಿ ಸೋರಿಕೆ ಮಾಡಬಾರದು, ಮಾಧ್ಯಮಗಳು ಖಾಸಗಿ ಚಾಟ್‌ಗಳನ್ನು ವರದಿಮಾಡಬಾರದು ಎಂದು ದಿಶಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದಿಶಾಳ ಆರೋಪವನ್ನು ದಿಲ್ಲಿ ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಾದಕ್ಕೆ ಕಿವಿಗೊಟ್ಟ ಹೈಕೋರ್ಟ್‌ ಪೀಠ, ಈ ವಿಚಾರದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯ ತಡೆಯಲೂ ನಿರಾಕರಿಸಿದೆ.

152 ಮಂದಿ ಅರೆಸ್ಟ್‌: ಜ.26ರ ಕೆಂಪುಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 152 ಮಂದಿಯನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Advertisement

ಬಾಘ್ರಾಗೆ ಪ್ರಿಯಾಂಕಾ: ಮುಝಾಫ‌ರ್‌ನಗರದಲ್ಲಿ ಶನಿವಾರ ರೈತ ಪ್ರತಿಭಟನಕಾರರು ಏರ್ಪಡಿಸಿರುವ ಕಿಸಾನ್‌ ಪಂಚಾಯತ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಳ್ಳಲಿದ್ದಾರೆ.

ಅಪಪ್ರಚಾರ: ಪಾಕ್‌ಗೆ ಟರ್ಕಿ ಸಾಥ್‌ :

ರೈತ ಪ್ರತಿಭಟನೆಗೆ ಬೆಂಬಲಿಸಿ ಭಾರತದ ವಿರುದ್ಧ ಅಪಪ್ರಚಾರದ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ಜತೆಗೆ ಟರ್ಕಿಯ ಕೈವಾಡವೂ ಇದೆ ಎಂದು “ಗ್ರೀಕ್‌ ಸಿಟಿ ಟೈಮ್ಸ್‌’ ವರದಿ ಸ್ಫೋಟಿಸಿದೆ. ಪಾಕ್‌ನ ಐಎಸ್‌ಐ ಬೆಂಬಲ ಪಡೆದಿರುವ ಹಲವು ಕಾಶ್ಮೀರಿ ಪತ್ರಕರ್ತರು ಟರ್ಕಿ ಯಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ‌ದಲ್ಲಿ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರದ ಅಲಿ ಕೆಸ್ಕಿನ್‌ ಎಂಬಾತ, “ಪಾಕಿ ಸ್ಥಾನ ಏಕಾಂಗಿ ಅಲ್ಲ’ ಎಂದು ಟರ್ಕಿಯ ರಾಷ್ಟ್ರಧ್ವಜ ಹಾಕಿಕೊಂಡಿರುವ ಪೋಸ್ಟನ್ನೂ ವರದಿ ಸಾಕ್ಷ್ಯವಾಗಿ ತೋರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next