Advertisement

ಬಾಲಿವುಡ್ ನಟಿ ದಿಶಾ ಪಟಾನಿ ತಂದೆಗೂ ಕೋವಿಡ್ ಪಾಸಿಟಿವ್

01:01 PM Aug 06, 2020 | Mithun PG |

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ತಂದೆ ಸೇರಿದಂತೆ ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ತುರ್ತು ಘಟಕದ ಮೂವರು ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.

Advertisement

ಲಕ್ನೋದಿಂದ ಉತ್ತರಪ್ರದೇಶಕ್ಕೆ ಬಂದ ಜಗದೀಶ್ ಪಟಾನಿ ಮತ್ತು ಇತರ ಇಬ್ಬರು ಅಧಿಕಾರಿಗಳಿಗೆ ಕೋವಿಡ್ -19 ಸೊಂಕು ದೃಢಪಟ್ಟಿದೆ ಎಂದು ಹೆಚ್ಚುವರಿ ಸಿಎಂಒ ಅಶೋಕ್ ಕುಮಾರ್ ಬುಧವಾರ ತಿಳಿಸಿದ್ದಾರೆ.
ದಿಶಾ ಪಟಾನಿಯವರ ತಂದೆ ಉತ್ತರಪ್ರದೇಶ ವಿದ್ಯುತ್ ಇಲಾಖೆಯ ತುರ್ತು ಘಟಕದ ಅಧಿಕಾರಿಯಾಗಿದ್ದು ಪ್ರಮುಖ ಹಗರಣವೊಂದರ ತನಿಖೆ ನಡೆಸುತ್ತಿದ್ದಾರೆ. ಇದೀಗ ಇವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ತಮ್ಮ ಮನೆಗೆ ತೆರಳಿಲ್ಲ ಎನ್ನಲಾಗಿದೆ.

ಸದ್ಯ ಬಾಲಿವುಡ್ ನಟಿ ದಿಶಾ ಪಟಾಣಿ ಲಾಕ್​ಡೌನ್​ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿದ್ದಾರೆ. ಒಂದು ಕಡೆ ಫಿಟ್ನೆಸ್​ಗಾಗಿ ಸಖತ್​ ವರ್ಕ್ಔಟ್​ ಮಾಡುವುದಲ್ಲದೆ ಕಿಕ್ ಬಾಕ್ಸಿಂಗ್ ಕೂಡ ಕಲಿಯುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್​ ಮಾಡುತ್ತಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next