Advertisement

ಎಲ್ಲರಿಗೂ ಬರುವ ರೋಗಗಳು ಜಾತ್ಯತೀತ

12:52 AM Jan 16, 2020 | Lakshmi GovindaRaj |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರೋಗಗಳು ಎಲ್ಲ ವರ್ಗ, ಜಾತಿ ಮತ್ತು ಎಲ್ಲ ವಯಸ್ಸಿನವರಿಗೂ ಬರುತ್ತಿವೆ. ರೋಗಗಳಿಗೆ ಯಾವುದೇ ಜಾತಿ ಧರ್ಮದ ಭೇದವಿಲ್ಲ ಎಂದು ತಥಾಗಥ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಮಹಾಂತೇಶ್‌ ಚರಂತಿಮಠ ಹೇಳಿದ್ದಾರೆ.

Advertisement

ಕರ್ನಾಟಕ ವಿಶ್ವಾವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ (ಕವಿಪವಿ) ಕೂಟ ಹಾಗೂ ತಥಾಗಥ ಆಸ್ಪತ್ರೆ ಜಂಟಿಯಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆ, ಬಿಪಿ ಹಾಗೂ ಸಕ್ಕರೆ ಕಾಯಿಲೆಗಳು ಎಲ್ಲ ವಯಸ್ಸು ಮತ್ತು ವರ್ಗದವರಿಗೂ ಬರುತ್ತಿವೆ.

ಮೊದಲು ಶ್ರೀಮಂತರ ರೋಗ ಎಂದು ಹೇಳುತ್ತಿದ್ದ ರೋಗಗಳು ಬಡವರಿಗೂ ಬರುತ್ತಿವೆ ಎಂದು ಹೇಳಿದರು. ಆಧುನಿಕ ಜೀವನ ಶೈಲಿ ಎಲ್ಲ ರೋಗಗಳಿಗೂ ಆಹ್ವಾನ ನೀಡುತ್ತಿವೆ. ದೇಶದಲ್ಲಿ ಶೇ.50 ಜನ ಬಿಪಿ, ಶುಗರ್‌ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ದೇಶದ ಉತ್ಪಾದನಾ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ.

ಸಕಾರಾತ್ಮಕ ಜೀವನ ಶೈಲಿಯಿಂದ ಆರೋಗ್ಯ ಕಾಪಾಡಿ ಕೊಂಡರೆ, ದೇಶದ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದರು. ಪತ್ರಕರ್ತ ಅಜಿತ್‌ ಹನುಮಕ್ಕನವರ್‌ ಶಿಬಿರಕ್ಕೆ ಚಾಲನೆ ನೀಡಿದರು. ಕವಿಪವಿ ಅಧ್ಯಕ್ಷ ಡಾ.ಕೆ.ಜಿ. ಹಾಲಸ್ವಾಮಿ, ಉಪಾಧ್ಯಕ್ಷ ಆನಂದ್‌ ಬೈದನಮನೆ, ಪ್ರಧಾನ ಕಾರ್ಯದರ್ಶಿ ಹನುಮೇಶ್‌ ಯಾವಗಲ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next