Advertisement
ಸೌತೆಯ ಬೀಜದ ಆಯ್ಕೆ, ಗೊಬ್ಬರ ಸಮಯಕ್ಕೆ ಯಾವುದ್ಯಾವುದು ಔಷಧ ಎಷ್ಟು ಪ್ರಮಾಣ ಸಿಂಪರಣೆಯಂತ ಸಲಹೆ ಪಡೆದು ಯಶಸ್ವಿಯಾಗಿ ಬೆಳೆ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡಿದೆ. ಸೌತೆ ಬೆಳೆಗೆ ಬರುವ ರೋಗ ಮತ್ತು ಇದರ ಹತೋಟಿಗೆ ಸೂಕ್ತ ಕ್ರಮದ ನಡುವೆ ಬೆಳೆಯ ಲಾಭ ತಟ್ಟುವಂತೆ ಮಾಡಲು ಮುಂದಾಗಿರುವ ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ಕಾರ್ಯಕ್ರಮ ಸಂಯೋಜಕ, ಹಿರಿಯ ವಿಜ್ಞಾನಿ ಡಾ| ರಾಜು ತೆಗ್ಗಳಿ ಅವರ ಮಾರ್ಗದರ್ಶನದಲ್ಲಿ ವಿಜ್ಞಾನಿ ಡಾ| ಜಹೀರ್ ಅಹ್ಮದ್, ಅಮರೇಶ ವೈ.ಎಸ್. ಮತ್ತು ಕ್ಷೇತ್ರ ಸಹಾಯಕ ತಂಡವು ಬೆಳೆಯ ಯಶಸ್ವಿಗೆ ಒತ್ತು ನೀಡಿದ್ದು, ಅಲ್ಲದೆ ರೈತರೊಬ್ಬರ ಹೊಲವನ್ನು ಆಯ್ಕೆ ಮಾಡಿ ಬಿತ್ತನೆಯಿಂದ ಕೋಯ್ಲಿನವರೆಗೆ ಸಂಪೂರ್ಣ ಅಧ್ಯಯನ ನಡೆಸಲಾಗುತ್ತಿದೆ. ಬೆಳೆಗೆ ಕಂಟಕವಾಗುವ ರೋಗಗಳು ಮತ್ತು ಅದಕ್ಕೆ ಉಪಚರಿಸುವ ಔಷಧಿ ಸಿಂಪರಣೆ ಕ್ರಮದ ಬಗ್ಗೆ ರೈತರಿಗೆ ಸಲಹೆ ನೀಡಿದ್ದಾರೆ.
Related Articles
Advertisement
ಬೂದಿ ರೋಗ: ಮೊದಲಿಗೆ ಸಣ್ಣನೆಯ ಬಿಳಿ ಬೂದು ಬಣ್ಣದ ಚುಕ್ಕೆಗಳು ಎಲೆ ಮತ್ತು ಕಾಂಡದ ಮೇಲೆ ಕಾಣಿಸುತ್ತವೆ. ರೋಗದ ತೀವ್ರತೆ ಹೆಚ್ಚಾದಾಅಗ ಎಲೆಗಳು ಪೂರ್ತಿ ಒಣಗುತ್ತವೆ. ಪ್ರತಿ ಲೀಟರ್ ನೀರಿನಲ್ಲಿ 1 ಮಿ.ಲೀ, ಟೈಡಮಾರ್ಪ್ ಅಥವಾ 2 ಗ್ರಾಮ ಕೋರೋ ಕ್ಲೋರೋಫ್ಯಾಲೋನಿಲ್ ಬೆರೆಸಿ ಸಿಂಪಡಿಸಬೇಕು. ಎರಡು ವಾರಗಳ ಅಂತರ ಒಟ್ಟು ಮೂರು ಬಾರಿ 0.5 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲೂ.ಪಿ. ಅಥವಾ 1.5. ಗ್ರಾಂ ಡೈನೋಕ್ಯಾಪ್ (ನೀರಿನಲ್ಲಿ ಕರಗುವ ಮಡಿ) ಲೀಟರ್ ನೀರಿಗೆ ಕರಗಿಸಿ ಸಿಂಪಡಿಸಬೇಕು. ಸಮಾರು 450 ಲೀಟರ್ ಸಿಂಪಡಣಾ ದ್ರಾವಣ ಪ್ರತಿ ಹೆಕ್ಟೇರಿಗೆ ಬಳಸಬೇಕು.
ಸುಳಿ ನಂಜುರೋಗ: ಇದು ಕಾಣಿಸಿಕೊಂಡಾಗ ಬಳ್ಳಿಗಳ (ಸುಳಿಗಳು) ತುದಿಗಳು ಮೇಲಕ್ಕೆ ಮುಖ ಮಾಡಿರುತ್ತವೆ. ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಹರಡದಂತೆ ಪ್ರತಿ ಲೀಟರ್ ನೀರಿಗೆ 1 ಮಿ.ಲೀ, ಫೆಟ್ರೋನಿಲ್ ಅಥವಾ 10 ಗ್ರಾಪಂ ಅಸಿಫೇಟ್ ಬೆರೆಸಿ ಸಿಂಪಡಿಸಬೇಕು.
ಕೋಯ್ಲು ಮತ್ತು ಇಳಿವರಿ: ಬಳಿಯ ಹತ್ತಿರದ ಲತಾತಂತು ಒಣಗಲು ಪ್ರಾರಂಭಿಸಿದಾಗ ಹಾಗೂ ಹಣ್ಣಿನ ತಳಮಟ್ಟದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ನಂತರ ಕಟಾವು ಮಾಡಬಹುದು. ಈ ಹಂತದಲ್ಲಿ ಕಾಯಿಗೆ ಬೆರಳಿನಿಂದ ಬಾರಿಸಿದರೆ ಮಂದ ಶಬ್ದಬರುವುದು. ಪ್ರತಿ ಹೆಕ್ಟೇರಿಗೆ ಸಾಮಾನ್ಯ ತಳ್ಳಿಗಳಿಂದ ಸರಾಸರಿ 45ರಿಂದ 50 ಟನ್ ಇಳುವರಿ ಪಡೆಯಬಹುದು. ಆದರೆ ಹೈಬ್ರಿಡ್ ತಳಿಗಳು ಪ್ರತಿ ಹೆಕ್ಟೇರ್‌ಗೆ 75ರಿಂದ 80 ಟನ್ ಇಳುವರಿ ಕೊಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.